ತಮ್ಮ ಅಭಿಮಾನಿಯ ಮಗುವಿಗೆ ತನ್ನದೇ ಹೆಸರಿಟ್ಟ ಮಾಜಿ ಸಿಎಂ ಸಿದ್ದರಾಮಯ್ಯ !!

ಸೆಲೆಬ್ರೆಟಿಗಳು ಹಾಗೂ ರಾಜಕಾರಣಿಗಳ ಬಳಿ ಅಭಿಮಾನಿಗಳು ತಮ್ಮ ಮಕ್ಕಳಿಗೆ ನಾಮಕರಣ ಮಾಡಿಸುವುದು ಸಹಜ. ಆದರೆ ತಮ್ಮದೇ ಹೆಸರನ್ನು ಆ ಮಗುವಿಗೆ ಇಡುವುದು ಬಹಳ ವಿರಳ. ಆದರೆ ಇಂತಹ ವಿಚಿತ್ರ ಕೆಲಸಕ್ಕೆ ಇದೀಗ ಮಾಜಿ ಸಿಎಂ ಸಿದ್ದರಾಮಯ್ಯ ಕೈ ಹಾಕಿದ್ದಾರೆ. ತಮ್ಮ ಅಭಿಮಾನಿಯ ಒತ್ತಾಸೆ ಮೇರೆಗೆ ಸಿದ್ದು, ತಮ್ಮ ಹೆಸರನ್ನೇ ಮಗುವಿಗೆ ನಾಮಕರಣ ಮಾಡಿರುವ ಅಪರೂಪದ ಪ್ರಸಂಗ ನಡೆದಿದೆ.

ಭಾನುವಾರ ತುಮಕೂರಿನ ಬಾಲಭವನದಲ್ಲಿ ನಡೆದ ಗ್ರಂಥಾವಲೋಕನ ಸಂಕೀರ್ಣ ಸಂವಾದ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ತಮ್ಮ ಅಭಿಮಾನಿಯ ಮಗುವಿಗೆ ನಾಮಕರಣ ಮಾಡಿದ್ದಾರೆ. ಮಧುಗಿರಿ ತಾಲೂಕಿನ ಐಡಿ ಹಳ್ಳಿ ಹೋಬಳಿಯ ತಿಪ್ಪಾಪುರ ಗ್ರಾಮದ ಅಭಿಮಾನಿ ಗಂಗಾಧರಯ್ಯ ತಮ್ಮ ಮಗುವಿಗೆ ಸಿದ್ದರಾಮಯ್ಯ ಅವರಿಂದ ನಾಮಕರಣ ಮಾಡಿಸಬೇಕೆಂದು ಬಹು ದಿನಗಳಿಂದ ಆಸೆ ಪಟ್ಟಿದ್ದರು. ಭಾನುವಾರ ಸಿದ್ದರಾಮಯ್ಯ ತುಮಕೂರಿಗೆ ಆಗಮಿಸುತ್ತಾರೆ ಎಂದು ತಿಳಿದ ಗಂಗಾಧರಯ್ಯ ಕುಟುಂಬ ಸಮೇತರಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.


Ad Widget

Ad Widget

Ad Widget

Ad Widget

Ad Widget

Ad Widget

Ad Widget

Ad Widget

ಅಭಿಮಾನಿ ಗಂಗಾಧರಯ್ಯ ಸಂವಾದದ ಮಧ್ಯೆಯೇ ತಮ್ಮ ಮಗುವಿಗೆ ಹೆಸರು ಇಡುವಂತೆ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದು, ಇದಕ್ಕೆ ಸ್ಪಂದಿಸಿದ ಸಿದ್ದರಾಮಯ್ಯ ನಾಮಕರಣ ಮಾಡಿದರು. ತಮ್ಮ ಅಭಿಮಾನಿಯ ಒತ್ತಾಸೆಯ ಮೇರೆಗೆ ಸಿದ್ದರಾಮಯ್ಯ ಮಗುವಿಗೆ ತಮ್ಮ ಹೆಸರನ್ನೇ ಇಟ್ಟರು.

ಮಾಜಿ ಶಾಸಕ ಕೆ.ಎನ್. ರಾಜಣ್ಣ, ವೈಎಸ್‌ವಿ ದತ್ತ ಹಾಗೂ ಹಲವು ಗಣ್ಯರ ಸಮ್ಮುಖದಲ್ಲಿ ಸಿದ್ದರಾಮಯ್ಯ ನಾಮಕರಣ ಮಾಡಿದ್ದು, ಬಳಿಕ ಮಗುವಿಗೆ ಉಡುಗೊರೆ ನೀಡಿದರು.

Leave a Reply

error: Content is protected !!
Scroll to Top
%d bloggers like this: