ಓಲಾ ಕಂಪನಿ ಕಡೆಯಿಂದ ಗ್ರಾಹಕರಿಗೆ ಭರ್ಜರಿ ಆಫರ್ | ಒಂದೇ ಚಾರ್ಜ್ ನಲ್ಲಿ 200 ಕಿ. ಮೀ ಓಡಿಸಿದ್ರೆ ನಿಮ್ಮ ಪಲಾಗುತ್ತೆ ಉಚಿತ ಓಲಾ ಸ್ಕೂಟರ್ !!
ಎಲೆಕ್ಟ್ರಿಕ್ ವಾಹನದ ಮೇಲೆ ಕ್ರೇಜ್ ಇರುವ ಗ್ರಾಹಕರಿಗೊಂದು ಭರ್ಜರಿ ಆಫರ್ ಕಾದಿದೆ. ಕಂಪೆನಿಯ ಸಹ-ಸಂಸ್ಥಾಪಕರಾದ ಭವಿಶ್ ಅಗರ್ವಾಲ್ ತಮ್ಮ ಗ್ರಾಹಕರಿಗೆ ಅದ್ಭುತ ಕೊಡುಗೆಯನ್ನು ನೀಡಿದ್ದಾರೆ. ಈ ಕೊಡುಗೆಯೊಂದಿಗೆ ನೀವು ಓಲಾ ಸ್ಕೂಟರ್ ಅನ್ನು ಉಚಿತ ಪಡೆಯಬಹುದಂತೆ!! ಹೇಗೆ ಅಂತೀರಾ??.. ಆದ್ರೆ ಇದಕ್ಕಾಗಿ ನೀವು ಒಂದೇ ಒಂದು ಕೆಲಸ ಮಾಡಬೇಕಾಗುತ್ತದೆ.
ಸ್ಕೂಟರ್ ಉಚಿತವಾಗಿ ಪಡೆಯಲು ನೀವು ಒಂದೇ ಚಾರ್ಜ್ನಲ್ಲಿ 200 ಕಿ.ಮೀ ವರೆಗೆ ಎಲೆಕ್ಟ್ರಿಕ್ ಸ್ಕೂಟರ್ ಚಾಲನೆ ಮಾಡಬೇಕು. ಹೌದು. ಈ ಚಾಲೆಂಜ್ ಗೆದ್ದರೆ, ಓಲಾ ಗ್ರಾಹಕರಿಗೆ ಉಚಿತ ಓಲಾ ಎಲೆಕ್ಟ್ರಿಕ್ ಸ್ಕೂಟರ್ ನೀಡುತ್ತದೆ.
ಈ ಕುರಿತಂತೆ ಟ್ವೀಟ್ ಮಾಡಿರುವ ಓಲಾ ಎಲೆಕ್ಟ್ರಿಕ್ ಸಿಇಒ ಭವಿಶ್ ಅವರ್ವಾಲ್, “ಜನರ ಉತ್ಸಾಹವನ್ನು ನೋಡಿ, ಒಂದೇ ಚಾರ್ಜ್ನಲ್ಲಿ 200 ಕಿಮೀ ದೂರವನ್ನು ದಾಟುವ ಇನ್ನೂ 10 ಗ್ರಾಹಕರಿಗೆ ನಾವು ಉಚಿತ ಗೇರುವಾ ಸ್ಕೂಟರ್ ಅನ್ನು ನೀಡುತ್ತೇವೆ!! ಈಗಾಗಲೇ ಈ ಸಾಧನೆ ಮಾಡಿರುವ ಇಬ್ಬರು ಗ್ರಾಹಕರನ್ನು ನಾವು ಹೊಂದಿದ್ದೇವೆ. ಒಬ್ಬ ಗ್ರಾಹಕರು MoveOS 2 ನಲ್ಲಿ ಈ ಸಾಧನೆ ಗೈದಿದ್ದರೆ, ಇನ್ನೋರ್ವ ಗ್ರಾಹಕರು 1.0.16. ಸ್ಕೂಟರ್ನಲ್ಲಿ ಈ ಸಾಧನೆ ಮಾಡಿದ್ದಾರೆ. ವಿಜೇತರಿಗೆ ಜೂನ್ನಲ್ಲಿ ಫ್ಯೂಚರ್ ಫ್ಯಾಕ್ಟರಿಯಲ್ಲಿ ಉಚಿತ ಸ್ಕೂಟರ್ ವಿತರಣೆ ಲಭ್ಯವಾಲಿದೆ” ಎಂದು ಮಾಹಿತಿ ನೀಡಿದ್ದಾರೆ.
ಕಳೆದ ಕೆಲವು ತಿಂಗಳುಗಳಲ್ಲಿ ಹಲವಾರು ಎಲೆಕ್ಟ್ರಿಕ್ ವಾಹನಗಳು ಬೆಂಕಿಗಾಹುತಿಯಾದ ಪ್ರಕರಣಗಳ ನಂತರ, ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಖರೀದಿಸುವ ಬಗ್ಗೆ ಗ್ರಾಹಕರಲ್ಲಿ ಭಯವಿದೆ. ಏತನ್ಮಧ್ಯೆ, ಓಲಾ ಎಲೆಕ್ಟ್ರಿಕ್ S1 ಪ್ರೊಗಾಗಿ ಮಾರಾಟ ವಿಂಡೋವನ್ನು ಮರು-ತೆರೆದಿದೆ. ಆದರೆ ಕಂಪನಿಯು ಈ ಬಾರಿ ಎಲೆಕ್ಟ್ರಿಕ್ ಸ್ಕೂಟರ್ನ ಬೆಲೆಯನ್ನು 10,000 ರೂ.ಗಳಷ್ಟು ಹೆಚ್ಚಿಸಿದೆ. ಓಲಾ ಮೂರನೇ ಬಾರಿಗೆ ಎಸ್1 ಪ್ರೊಗಾಗಿ ಬುಕ್ಕಿಂಗ್ಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದೆ. ಓಲಾ ಮೊದಲ ಬಾರಿಗೆ ಇವಿ ಬೆಲೆಯನ್ನು ಹೆಚ್ಚಿಸಿದೆ, ಅದರ ನಂತರ ಎಸ್1 ಪ್ರೊ ನ ಎಕ್ಸ್ ಶೋ ರೂಂ ಬೆಲೆ ಈಗ 1.40 ಲಕ್ಷಕ್ಕೆ ಏರಿದೆ.
ಇ-ಸ್ಕೂಟರ್ನ ಪರೀಕ್ಷಾರ್ಥ ಸವಾರಿ ನಡೆಯುತ್ತಿದೆ:
ಓಲಾ ಎಲೆಕ್ಟ್ರಿಕ್ 15 ಆಗಸ್ಟ್ 2021 ರಂದು ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಬಿಡುಗಡೆ ಮಾಡಿತು ಮತ್ತು ಈಗ ಕಂಪನಿಯು ಮೂರನೇ ಬಾರಿಗೆ ಅದನ್ನು ಮಾರಾಟ ಮಾಡಲು ಪ್ರಾರಂಭಿಸಿದೆ. ಕಂಪನಿಯು ದೇಶಾದ್ಯಂತ 5 ನಗರಗಳಲ್ಲಿ ಇವಿ ಯ ಟೆಸ್ಟ್ ರೈಡ್ಗಳನ್ನು ಪ್ರಾರಂಭಿಸಿದೆ ಮತ್ತು ಬುಕ್ ಮಾಡಿದ ಗ್ರಾಹಕರಿಗೆ ಮೇಲ್ ಐಡಿಯಲ್ಲಿ ಅದರ ವಿತರಣೆಯ ಬಗ್ಗೆ ತಿಳಿಸಲಾಗುವುದು ಎಂದು ಓಲಾ ಕಂಪನಿ ಹೇಳಿದೆ. ಎಸ್1 ಪ್ರೊ ಅನ್ನು ಒಂದೇ ಚಾರ್ಜ್ನಲ್ಲಿ 185 ಕಿಮೀ ವರೆಗೆ ಓಡಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ, ಆದರೆ ವಾಸ್ತವದಲ್ಲಿ ಇದು 131 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ. ಇದರ ಗರಿಷ್ಠ ವೇಗ ಗಂಟೆಗೆ 115 ಕಿ.ಮೀ. ಎಂದು ಕಂಪನಿ ಹೇಳಿಕೊಂಡಿದೆ.
ಓಲಾ ಏಪ್ರಿಲ್ 2022 ರಲ್ಲಿ 12,683 ಗ್ರಾಹಕರಿಗೆ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ವಿತರಿಸಿದೆ, ಈ ಅಂಕಿ ಅಂಶದೊಂದಿಗೆ, ಓಲಾ ಮಾರಾಟದ ವಿಷಯದಲ್ಲಿ ಹೀರೋ ಎಲೆಕ್ಟ್ರಿಕ್ ಅನ್ನು ಹಿಂದಿಕ್ಕಿದೆ. ಇದಲ್ಲದೆ, ಓಲಾ ದೇಶದಲ್ಲಿ 10,000 ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಅತ್ಯಂತ ವೇಗವಾಗಿ ಮಾರಾಟ ಮಾಡುವ ಕಂಪನಿಯಾಗಿದೆ.