‘ಅಂತರ್ಜಾತಿ ವಿವಾಹ’ವಾಗುವವರಿಗೆ ಗುಡ್ ನ್ಯೂಸ್: ಇನ್ನು ಮುಂದೆ ಯುವಕರಿಗೆ 2.50 ಲಕ್ಷ, ಯುವತಿಗೆ 3 ಲಕ್ಷ ಪ್ರೋತ್ಸಾಹಧನ – ರಾಜ್ಯ ಸರಕಾರದಿಂದ ಮಹತ್ವದ ನಿರ್ಧಾರ

ಬೆಂಗಳೂರು: ರಾಜ್ಯ ಸರ್ಕಾರದಿಂದ ಅಂತರ್ಜಾತಿ ವಿವಾಹ ಪ್ರೋತ್ಸಾಹಿಸೋ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯೊಂದನ್ನು ಇಡಲಾಗಿದೆ. ಪರಿಶಿಷ್ಟ ಪಂಗಡದ( ST) ಯುವಕ ಯುವತಿಯರು ಅಂತರ್ಜಾತಿ ವಿವಾಹವಾದರೆ ಯುವಕ ಯುವತಿಯರಿಗೆ ತಲಾ 2.50, 3 ಲಕ್ಷ ಪ್ರೋತ್ಸಾಹಧನ ನೀಡೋದಾಗಿ ಘೋಷಿಸಿದೆ.

 

ಈ ಮಾಹಿತಿಯನ್ನು ಟ್ವೀಟ್ ನಲ್ಲಿ ಹಂಚಿಕೊಂಡಿರುವಂತ ಸಚಿವ ಬಿ.ಶ್ರೀರಾಮುಲು, ಪರಿಶಿಷ್ಟ ಪಂಗಡದ ಯುವಕ ಯುವತಿಯರು ಅನ್ಯಜಾತಿಯ ಯುವಕ/ಯುವತಿಯನ್ನು ವಿವಾಹವಾದಲ್ಲಿ ಅಂತಹ ಪುರುಷರಿಗೆ ರೂ. 2.50 ಲಕ್ಷ ಮತ್ತು ಮಹಿಳೆಯರಿಗೆ ಪ್ರೋತ್ಸಾಹಧನ ರೂ.3.00 ಲಕ್ಷಗಳು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 080 22261789 ಎಂದು ತಿಳಿಸಿದ್ದಾರೆ.

Leave A Reply

Your email address will not be published.