ಮಂಗಳೂರು: ಜಿಲ್ಲೆಯ ಸಿ.ಆರ್.ಝಡ್ ವ್ಯಾಪ್ತಿಯಲ್ಲಿ ಮರಳುಗಾರಿಕೆಗೆ ಬ್ರೇಕ್!! ಪರಿಸರವಾದಿಗಳ ದೂರಿಗೆ ಸಿಕ್ಕ ಜಯ-ತಕ್ಷಣದಿಂದಲೇ ನಿಲ್ಲಿಸುವಂತೆ ಜಿಲ್ಲಾಧಿಕಾರಿ ಆದೇಶ

ಮಂಗಳೂರು: ಜಿಲ್ಲೆಯ ಕರಾವಳಿ ನಿಯಂತ್ರಣ ವ್ಯಾಪ್ತಿ(ಸಿ. ಆರ್.ಝಡ್ )ಯಲ್ಲಿ ಮರಳುಗಾರಿಕೆ ನಡೆಸದಂತೆ ಹಾಗೂ ದೋಣಿಗಳು-ಮರಳು ಸಾಗಟದ ವಾಹನಗಳನ್ನು ಸ್ಥಳಾಂತರಿಸಲು ಜಿಲ್ಲಾಧಿಕಾರಿ ಕೆ.ವಿ ರಾಜೇಂದ್ರ ಆದೇಶಿಸಿದ್ದಾರೆ.

 

ಕರಾವಳಿ ನಿಯಂತ್ರಣ ವ್ಯಾಪ್ತಿಯಲ್ಲಿ ಮರಳುಗಾರಿಕೆಗೆ ಅವಕಾಶ ನೀಡದಂತೆ ಪರಿಸರ ವಾದಿಗಳು ರಾಷ್ಟೀಯ ಹಸಿರು ಪೀಠಕ್ಕೆ ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ಬಳಿಕ ಮರಳುಗಾರಿಕೆ ತಕ್ಷಣದಿಂದಲೇ ನಿಲ್ಲಿಸುವಂತೆ ನೋಡಿಕೊಳ್ಳಲು ಏಳು ಮಂದಿ ಸದಸ್ಯರ ಸಮಿತಿಗೆ ನಿರ್ದೇಶನ ನೀಡಲಾಗಿದ್ದು, ಅದರಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಫಲ್ಗುಣಿ ನದಿಯ ಆದ್ಯಪಾಡಿ ಮತ್ತು ಶಂಭೂರು ಡ್ಯಾಮ್ ಪ್ರದೇಶದಲ್ಲಿ ಜಿಲ್ಲಾ ಮರಳುಗಾರರ ಸಮಿತಿಯಿಂದ ಮರಳು ಶೇಖರಣೆ ಮಾಡಲಾಗುತ್ತಿದ್ದು,ಸಾರ್ವಜನಿಕರು ಮರಳು ಮಿತ್ರ ಆಪ್ ಮೂಲಕ ನಿಗದಿತ ಮೊತ್ತ ಪಾವತಿಸಿ ಮರಳು ಕೊಳ್ಳಲು ಅವಕಾಶವಿದೆ.

Leave A Reply

Your email address will not be published.