20 ಕೆಜಿ ತೂಕದ ಗ್ಲಾಸ್ ಬಟ್ಟೆ ಹಾಕಿಕೊಂಡು ಪಾರ್ಟಿ ಮಾಡಿದ ಉರ್ಫಿ | ಎಲ್ಲಾ ಪೀಸ್ ಪೀಸ್ ಎಂದ ನೆಟ್ಟಿಗರು

ತನ್ನ ವಿಚಿತ್ರ ಸ್ಟೈಲಿಶ್ ಬಟ್ಟೆಗಳಿಂದಲೇ ಭಾರೀ ಸಂಚಲನವನ್ನು ಮೂಡಿಸುವ ಉರ್ಫಿ ಜಾವೇದ್, ಇದೀಗ ಮತ್ತೊಂದು ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಗ್ಲಾಸ್ ಬಟ್ಟೆ ಧರಿಸಿಕೊಂಡು ಇನ್ಸ್ಟಾಗ್ರಾಂ ನಲ್ಲಿ 3 ಮಿಲಿಯನ್ ಫಾಲೋವರ್ಸ್ ಪಡೆದ ಖುಷಿಯಲ್ಲಿ ಉರ್ಫಿ ಪಾರ್ಟಿ ಮಾಡಿ ಸಂಭ್ರಮಿಸಿದ್ದಾರೆ.

 

ಮುಂಬೈನ ಒಂದು ಕ್ಲಬ್ ನಲ್ಲಿ ಪಾರ್ಟಿ ಆಯೋಜಿಸಿದ್ದು, ಇದರಲ್ಲಿ ಅನೇಕ ಸಲೆಬ್ರಿಟಿಗಳು ಭಾಗಿಯಾಗಿದ್ದರು. ಈ ಪಾರ್ಟಿಯಲ್ಲಿ ಕೂಡಾ ಎಂದಿನಂತೆ ಉರ್ಫಿ ಬಟ್ಟೆ ಎಲ್ಲರ ಗಮನ ಸೆಳೆಯಿತು.

ಈ ತರಹ ಬಟ್ಟೆ ಹಾಕಿಕೊಂಡು ಬರಬಹುದು ಅಂತ ನಮ್ಮ ಕಲ್ಪನೆಗೇ ಮೀರಿದ ಬಟ್ಟೆ ಹಾಕಿದ್ದಾರೆ ಉರ್ಫಿ ಜಾವೇದ್. ಗ್ಲಾಸ್ ಪೀಸ್‌ಗಳನ್ನು ಬಟ್ಟೆಯಾಗಿ ಧರಿಸಿ, ಪಾರ್ಟಿ ಆಯೋಜಿಸಿ ಪಾಪರಾಜಿಗಳ ಮುಂದೆ ಬಂದು ನಿಂತಿದ್ದಾರೆ ಉರ್ಫಿ ಜಾವೇದ್. ಈ ಬಟ್ಟೆ ಬರೋಬ್ಬರಿ 20 ಕೆಜಿ ಇದೆಯಂತೆ. ಉರ್ಫಿಯ ಗ್ಲಾಸ್ ಬಟ್ಟೆ ನೋಡಿ ನೆಟ್ಟಿಗರು ಹೇಗೆ ಕುಳಿತುಕೊಳ್ಳುತ್ತೀರಿ ಎಂದು ಪ್ರಶ್ನೆಯೊಂದನ್ನು ಮಾಡುತ್ತಿದ್ದಾರೆ. ಒಳಗಡೆ ಬಿಳಿಬಣ್ಣದ ಶಾರ್ಟ್ಸ್, ಒಂದು ಬ್ರಾ ಹಾಕಿಕೊಂಡು ಅದರ ಮೇಲೆ ಗ್ಲಾಸ್ ಪೋಣಿಸಿದ ಬಟ್ಟೆ ಹಾಕಿಕೊಂಡ ಉರ್ಫಿ ಲುಕ್ ಸಖತ್ ಡೇಂಜರ್ ಎಂದೇ ಹೇಳಬಹುದು. ಅಂದಹಾಗೆ ಪಾರ್ಟಿಯಲ್ಲಿ ಇದೇ ಬಟ್ಟೆ ಧರಿಸಿ ಡಾನ್ಸ್ ಕೂಡ ಮಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಗ್ಲಾಸ್ ಧರಿಸಿ ಹೇಗೆ ಓಡಾಡಿದರು ಎನ್ನುವುದು ಅಭಿಮಾನಿಗಳ ಕುತೂಹಲ ಆಗಿದೆ.

ಕಿರುತೆರೆ ನಟಿ, ಮಾಡೆಲ್ ಉರ್ಫಿ ಜಾವೇದ್ ಸಾಮಾಜಿಕ ಜಾಲತಾಣದಲ್ಲಿ ಸದಾ ಸುದ್ದಿಯಲ್ಲಿರುವುದೇ ಕೇವಲ ಆಕೆ ಧರಿಸುವ ಬಟ್ಟೆಯಿಂದ. ಬಟ್ಟೆಯ ವಿಚಾರವಾಗಿ ಸುದ್ದಿಯಲ್ಲಿರುತ್ತಾರೆ. ಉರ್ಫಿ ತನ್ನ ಚಿತ್ರ ವಿಚಿತ್ರ ಉಡುಗೆಗಳ ಮೂಲಕವೇ ಗುರುತಿಸಿಕೊಂಡಿದ್ದಾರೆ. ಈಕೆಯ ಬಟ್ಟೆಯ ಫ್ಯಾಶನ್ ಗೆ ಈಕೆಯ ಅಭಿಮಾನಿಗಳ ನಿದ್ದೆ ಹಾರಿರುವುದಂತೂ ಸತ್ಯ.

ಅರೆಬರೆ ಬಟ್ಟೆ ತೊಟ್ಟು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಉರ್ಫಿ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಾರೆ. ಆದರೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಉರ್ಫಿ ಪ್ರತಿ ಬಾರಿಯೂ ವಿಚಿತ್ರವಾಗಿಯೇ ದರ್ಶನ ನೀಡುತ್ತಾರೆ.

Leave A Reply

Your email address will not be published.