ಇನ್ನೇನು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ನಡೆದೇ ಹೋಯಿತು ಅಚಾತುರ್ಯ| ಹುಡುಗನ ಬೋಳು ತಲೆ ನೋಡಿ, ಹುಡುಗಿ ಶಾಕ್| ಮದುವೆ ಆಯಿತಾ?
ಮದುವೆ ಮಾಡಿ ನೋಡು, ಮನೆ ಕಟ್ಟಿ ನೋಡು ಈ ಎರಡು ಮಾತನ್ನು ನೆರವೇರಿಸಲು ನಿಜಕ್ಕೂ ಹರಸಾಹಸನೇ ಮಾಡಬೇಕು. ಹಾಗೆನೇ ಒಂದು ಹುಡುಗಿಗೆ ಮತ್ತು ಹುಡುಗನಿಗೆ ಮದುವೆ ಮಾಡುವುದು ಅವರ ಇಷ್ಟ ಕಷ್ಟ ನೋಡಿ ಮದುವೆ ಮಾಡಿಸುವುದು ಅಷ್ಟು ಸುಲಭದ ಮಾತಲ್ಲ.
ಇಂದಿನ ಕಾಲದಲ್ಲಿ ಮದುವೆ ಮಾಡಿಕೊಳ್ಳಲು ಕೆಲವರು ನಾನಾ ವೇಷ ಧರಿಸುತ್ತಾರೆ. ಅಂದರೆ ಸುಳ್ಳು ಹೇಳಿ ಮದುವೆಯಾಗುವುದು. ಅಂದರೆ ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡಿಸು ಅಂತಾರಲ್ಲ ಹಾಗೆ ಇದು. ಒಂದಿಷ್ಟು ಮಂದಿ ಮದುವೆ ಮಾಡಿಕೊಳ್ಳುವಲ್ಲಿ ಯಶಸ್ವಿಯಾದರೆ, ಇನ್ನೊಂದಿಷ್ಟು ಮಂದಿಗೆ ಅದೃಷ್ಟ ಕೈಕೊಡುತ್ತದೆ. ಇಂಥದ್ದೆ ಘಟನೆ ಇದೀಗ ಉತ್ತರ ಪ್ರದೇಶದಲ್ಲಿ ನಡೆದಿದೆ.
ಎಲ್ಲನೂ ಸರಿಯಾಗಿಯೇ, ಸುಸೂತ್ರವಾಗಿ ನಡೆಯುತ್ತಿತ್ತು. ಆದರೆ, ಇನ್ನೇನು ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ವರನ ತಲೆಯಿಂದ ವಿಗ್ ಕಳಚಿ ಬಿದ್ದಿದೆ. ಅಷ್ಟಕ್ಕೇ ಮದುವೆ ರದ್ದಾದ ಘಟನೆ ಉತ್ತರ ಪ್ರದೇಶದ ಉನ್ನಾವೋದಲ್ಲಿ ನಡೆದಿದೆ.
ಕಾನ್ಪುರದ ವರ ಮದುವೆಯ ಅಂತಿಮ ಸಂಪ್ರದಾಯಕ್ಕಾಗಿ ಇನ್ನೇನು ಮಂಟಪಕ್ಕೆ ಕಾಲಿಡಬೇಕಿತ್ತು. ಆದರೆ, ಅದಕ್ಕೂ ಮುನ್ನವೇ ಆತ ಮೂರ್ಛೆ ತಪ್ಪಿ ನೆಲಕ್ಕೆ ಬಿದ್ದನು. ಈ ವೇಳೆ ಅವನ ತಲೆಯಿಂದ ವಿಗ್ ಬೇರ್ಪಟ್ಟು ಹೊರಬಂದಿತು. ಈ ವೇಳೆ ಆತನ ಬೋಳು ತಲೆಯನ್ನು ಎಲ್ಲರು ನೋಡಿದರು. ಮದುವೆಗೂ ಮುನ್ನ ವಧುವಿನ ಕುಟುಂಬಕ್ಕೆ ಹೇಳದೇ ಇದನ್ನು ಮರೆಮಾಚಲಾಗಿತ್ತು. ಯಾವಾಗ ಈ ವಿಚಾರ ವಧುವಿಗೆ ತಿಳಿಯಿತೋ ಆಕೆ ಮದುವೆ ಮಂಟಪಕ್ಕೆ ಕಾಲಿಡಲು ಹಿಂದೇಟು ಹಾಕಿದಳು.
ಎಷ್ಟೇ ಮನವರಿಕೆ ಮಾಡಿದರೂ ವಧು ಮಾತ್ರ ತನ್ನ ನಿಲುವನ್ನು ಬದಲಿಸಲೇ ಇಲ್ಲ. ಈ ವಿಚಾರ ಕೊನೆಗೆ ಸ್ಥಳೀಯ ಪೊಲೀಸ್ ಠಾಣೆಯ ಮೆಟ್ಟಿಲೇರಿತು. ಪೊಲೀಸರು ಕೂಡ ಮಧ್ಯ ಪ್ರವೇಶಿಸಿ ವಧುವಿನ ಮನವೊಲಿಕೆಗೆ ಪ್ರಯತ್ನಿಸಿದಾದರೂ ಆಕೆ ಮಾತ್ರ ತನ್ನ ನಿಲುವಿನಿಂದ ಒಂದು ಚೂರು ಕದಲಿಲ್ಲ. ಕೊನೆಗೂ ಪಂಚಾಯಿತಿ ಮಟ್ಟದಲ್ಲಿ ಒಂದು ತೀರ್ಮಾನಕ್ಕೆ ಬರಲಾಯಿತು. ಈ ಮದುವೆಗೆ ವಧುವಿನ ಕಡೆಯವರು
5.66 ಲಕ್ಷ ರೂ. ಖರ್ಚು ಮಾಡಿದ್ದರು. ಅದನ್ನು ಹಿಂತಿರುಗಿಸುವಂತೆ ವರನ ಕುಟುಂಬಕ್ಕೆ ಹೇಳಲಾಯಿ ಅದಕ್ಕೆ ವರನ ಕುಟುಂಬವೂ ಸಹ ಒಪ್ಪಿಗೆ ನೀಡಿ ಬಂದ ದಾರಿಗೆ ಸುಂಕವಿಲ್ಲ ಮತ್ತು ಹೆಣ್ಣೂ ಇಲ್ಲ ಅಂದುಕೊಂಡ ಹಿಂತಿರುಗಿದರು.
ವರ ಕಾನ್ಸುರದ ನಿವಾಸಿ. ಆತ ಬೋಳು ತಲೆಯ ಎಂಬ ವಿಚಾರವನ್ನು ಹುಡುಗಿ ಕಡೆಯವರಿಂದ ಮುಚ್ಚಿಡಲಾಗಿತ್ತು ಎಂದು ವಧುವಿನ ಚಿಕ್ಕಪ್ಪ ಹೇಳಿದ್ದಾರೆ. ಒಂದು ಸುಳ್ಳು ಮದುವೆಯನ್ನೇ ಮುರಿದು ಬಿಡ್ತು. ಕೊನೆಯ ಗಳಿಗೆಯಲ್ಲಿ ವರನಿಗೆ ಅದೃಷ್ಟ ಕೈಕೊಟ್ಟು ಆತನ ವಿಗ್ ಕೆಳಬಿದ್ದು, ಮದುವೆಯೇ ರದ್ದಾಗಿದ್ದು ದುರಂತ ಅಂತ್ಯವೇ ಎಂದು ಹೇಳಬಹುದು.