ತಾಯಿ, ಮಗಳು ಪಾಸ್!

ಹೊಸಪೇಟೆ: ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಯಿ-ಮಗಳು ಇಬ್ಬರು ಪಾಸಾಗಿದ್ದಾರೆ! ಹೌದು, ಮರಿಯಮ್ಮನಹಳ್ಳಿ ಪಟ್ಟಣದ ತಾಯಿ-ಮಗಳು ಇಬ್ಬರೂ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದಾರೆ.

ಮರಿಯಮ್ಮನಹಳ್ಳಿ ನಿವಾಸಿ, ಚಿಲುಗೋಡಿ ಹೈಸ್ಕೂಲ್ ಶಿಕ್ಷಕ ಬಿ.ರಾಮಜ್ಜರ ಪತ್ನಿ ಸವಿತಾ (೩೭ ವರ್ಷ) ಹಾಗು ಮಗಳು ಚೇತನಾ ಇಬ್ಬರೂ ಈ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದು ಉತ್ತೀರ್ಣರಾಗಿದ್ದಾರೆ.


ಸವಿತಾರ ಅವರು ೨೦೦೨-೦೩ನೇ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ವಿಧ್ಯಾರ್ಥಿಯಾಗಿದ್ದರು. ಮದುವೆ ಹಿನ್ನೆಲೆಯಲ್ಲಿ ಎಸ್ಸೆಸ್ಸೆಲ್ಸಿ ಪೂರ್ಣಗೊಳಿಸಲಾಗಿರಲಿಲ್ಲ. ಈಗ ತನ್ನ ಮಗಳೊಂದಿಗೆ ತಾನು ಪರೀಕ್ಷೆ ಬರೆದು ಪಾಸಾಗಿದ್ದಾರೆ. ಅವರ ಪತಿ ರಾಮಜ್ಜ ಮತ್ತು ಮಗಳು ಚೇತನಾ ಕೂಡ ಅವರ ಸಾಧನೆಗೆ ಸಾಥ್ ನೀಡಿದ್ದಾರೆ.


ಮರಿಯಮ್ಮನಹಳ್ಳಿ ಪಟ್ಟಣದ ಸ.ಪ.ಪೂ. ಕಾಲೇಜಿನ ಹೈಸ್ಕೂಲ್ ವಿಭಾಗದಲ್ಲಿ ಖಾಸಗಿ ವಿದ್ಯಾರ್ಥಿಯಾಗಿ ಪರೀಕ್ಷೆ ತೆಗೆದುಕೊಂಡು ಯುಟೂಬ್ ಮುಖಾಂತರ ಹೊಸ ಪಠ್ಯವನ್ನು ಅಭ್ಯಾಸ ಮಾಡಿದರು. ಹೊಸಪೇಟೆಯ ಚೈತನ್ಯ ಟೆಕ್ನೊಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದು ಶೇ.೪೫ರಷ್ಟು ಅಂಕ ಪಡೆದು ಪಾಸಾಗಿದ್ದಾರೆ. ಅವರ ಮಗಳು ಚೇತನಾ ಸ್ಮಯೋರ್ ವ್ಯಾಸಪುರಿ ಪ್ರೌಢಶಾಲೆಯ ಕೇಂದ್ರದಲ್ಲಿ ಪರೀಕ್ಷೆ ಬರೆದು ಶೇ.೮೫ ಅಂಕಪಡೆದು ತೇರ್ಗಡೆಯಾಗಿದ್ದಾಳೆ.

Leave A Reply

Your email address will not be published.