PM Kisan ಯೋಜನೆಯ 11 ನೆಯ ಕಂತಿನ ದಿನಾಂಕ ಇಲ್ಲಿದೆ!

ಪಿಎಂ ಕಿಸಾನ್ ಯೋಜನೆಯ ಹಣ ಈ ಹಿಂದೆ ಅಂದಾಜಿಸಿದಂತೆ ಮೇ 15ರಂದು ಹಣ ಬಿಡುಗಡೆಯಾಗುವ ನಿರೀಕ್ಷೆ ಇತ್ತು. ಆದರೆ ಅಂದು ಪಿಎಂ ಕಿಸಾನ್ ಯೋಜನೆಯ 11ನೇ ಕಂತು ಬಿಡುಗಡೆಯಾಗಿರಲಿಲ್ಲ. ಪಿಎಂ ಕಿಸಾನ್ ಯೋಜನೆ ಹಣ ಯಾವಾಗ ಬಿಡುಗಡೆಯಾಗುತ್ತದೆ ಎಂಬುದು ಕೂಡ ಸ್ಪಷ್ಟವಾಗಿಲ್ಲ.

 

ಆದರೆ ಮಧ್ಯಪ್ರದೇಶದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೇಂದ್ರ ಹಣಕಾಸು ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಪಿಎಂ ಕಿಸಾನ್ ಯೋಜನೆಗೆ ಹಣ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಪಿಎಂ ಕಿಸಾನ್ ಹಣವು ಮೇ 31 ರಂದು ಬಿಡುಗಡೆಯಾಗುವ ಸಾಧ್ಯತೆಯಿದೆ. ಪಿಎಂ ಕಿಸಾನ್ ಇಕೆವೈಸಿ ಪೂರ್ಣಗೊಳಿಸಲು ಕೊನೆಯ ದಿನಾಂಕ ಮೇ 31 ಎಂದು ತಿಳಿದುಬಂದಿದೆ.

ದೇಶದಾದ್ಯಂತ 12 ಕೋಟಿಗೂ ಹೆಚ್ಚು ರೈತರು ಪಿಎಂ ಕಿಸಾನ್ ಹಣಕ್ಕಾಗಿ ಕಾಯುತ್ತಿದ್ದಾರೆ. ಮೇ 31 ರೊಳಗೆ ಇಕೆವೈಸಿ ಪೂರ್ಣಗೊಳಿಸುವುದು ಕಡ್ಡಾಯವಾಗಿರುವುದರಿಂದ ಪಿಎಂ ಕಿಸಾನ್ ಹಣವನ್ನು ಅದೇ ದಿನ ಬಿಡುಗಡೆ ಮಾಡುವ ಸಾಧ್ಯತೆಯಿದೆ. ಇಕೆವೈಸಿ ಪೂರ್ಣಗೊಳಿಸಿದ ರೈತರಿಗೆ ಪಿಎಂ ಕಿಸಾನ್ 11 ನೇ ಕಂತು ಸಿಗುತ್ತದೆ ಆದ್ದರಿಂದ ರೈತರು ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.

ಇಕೆವೈಸಿ ಯ ಪ್ರಕ್ರಿಯೆಯನ್ನು ಈ ಬಾರಿ ರೈತರು ಪೂರೈಸಬೇಕಾಗಿರುವುದರಿಂದ ಹಣ ಬಿಡುಗಡೆ ವಿಳಂಬವಾಗುತ್ತದೆ. ಇಕೆವೈಸಿಯನ್ನು ಇನ್ನೂ ಪೂರ್ಣಗೊಳಿಸದ ರೈತರು ಆದಷ್ಟು ಬೇಗ ಪಿಎಂ ಕಿಸಾನ್ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕ್ರಿಯೆಯನ್ನು ಮಾಡಬಹುದು.

ಸುಮಾರು 80 ಪ್ರತಿಶತ ರೈತರು ಇಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ ಎಂದು ಅಂದಾಜು ಮಾಡಲಾಗಿದೆ.
ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಯೋಜನೆಯ 11 ನೇ ಕಂತನ್ನು ರೈತರಿಗೆ ರೂ.2,000 ದರದಲ್ಲಿ ಬಿಡುಗಡೆ ಮಾಡುತ್ತದೆ. ಕೇಂದ್ರ ಸರ್ಕಾರವು ಏಪ್ರಿಲ್ 1 ರಿಂದ ಜುಲೈ 31 ರ ನಡುವೆ ಪಿಎಂ ಕಿಸಾನ್ ನ 11 ನೇ ಕಂತನ್ನು ಬಿಡುಗಡೆ ಮಾಡಬೇಕಾಗಿದೆ. ಹೀಗಾಗಿ ರೈತರು ಪಿಎಂ ಕಿಸಾನ್ ಹಣಕ್ಕಾಗಿ ಹೆಚ್ಚು ದಿನ ಕಾಯಬೇಕಾಗಿಲ್ಲ.

Leave A Reply

Your email address will not be published.