ಶ್ರೀಲಂಕಾ ನಂತರ ಈಗ ಪಾಕಿಸ್ತಾನದಲ್ಲಿ ಹದೆಗೆಟ್ಟ ಆರ್ಥಿಕ ಪರಿಸ್ಥಿತಿ: ಮೋದಿ ಆತ್ಮ ನಿರ್ಭರ ಯೋಜನೆಯನ್ನು ಅಳವಡಿಸಿಕೊಂಡ ಪಾಕಿಸ್ತಾನ!
ಶ್ರೀಲಂಕಾದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಈಗ ಅದೇ ಹೆಜ್ಜೆಯತ್ತ ಸಾಗುತ್ತಿದೆ ಪಾಕಿಸ್ತಾನ. ಪಾಕಿಸ್ತಾನದಲ್ಲಿ ಆರ್ಥಿಕ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಡಾಲರ್ ಎದರು ಪಾಕಿಸ್ತಾನ ರೂಪಾಯಿ ಮೌಲ್ಯ ಕುಸಿದಿದೆ. ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಉಳಿದಂತೆ ಕಾರು, ಮೊಬೈಲ್ ಸೇರಿದಂತೆ ಇತರ ವಸ್ತುಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳುವುದನ್ನು ಈಗಾಗಲೇ ಪಾಕಿಸ್ತಾನ ನಿಷೇಧಿಸಿದೆ.
ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆಯೆಂದು, ಅಲ್ಲಿನ ಪ್ರಧಾನಿ ಶೆಹಜಾದ್ ಷರೀಫ್ ಈ ಮಹತ್ವದ ಘೋಷಣೆ ಮಾಡಿದ್ದಾರೆ. ವಿದೇಶಿ ವಸ್ತುಗಳ ಆಮದಿಗೆ ಹೆಚ್ಚಿನ ಹಣ ವ್ಯಯಿಸುವುದರಿಂದ ವಿದೇಶಿ ವಿನಿಮಯ ಕೊರತೆ ಎದುರಾಗುತ್ತಿದೆ ಎಂದು ಪಾಕಿಸ್ತಾನ ಮಾಹಿತಿ ಸಚಿವ ಮಾರಿಯುಮ್ ಔರಂದಜೇಬ್ ಹೇಳಿದ್ದಾರೆ.
ಪಾಕಿಸ್ತಾನ ಹಲವಾರು ಎಲೆಕ್ಟ್ರಾನಿಕ್ ವಸ್ತುಗಳಿಗೆ, ಫೋನ್, ಕಾರು, ಮೊಬೈಲ್ ಸೇರಿದಂತೆ ವಿದೇಶಗಳನ್ನೇ ಅವಲಂಬಿಸಿದೆ. ಈಗ ಇದಕ್ಕೆಲ್ಲ ಪಾಕಿಸ್ತಾನ ಬ್ರೇಕ್ ಹಾಕಿದೆ. ಇಷ್ಟು ಮಾತ್ರವಲ್ಲದೇ ಸುಜುಕಿ, ಹ್ಯುಂಡೈ, ಬಿಎಂಡಬ್ಲ್ಯು, ಆಡಿ, ಮರ್ಸಿಡೀಸ್ ಬೆಂಜ್ ಸೇರಿದಂತೆ ಹಲವು ಕಾರುಗಳಿಗೆ ನಿಷೇಧ ಹೇರಲಾಗಿದೆ. ಪಾಕಿಸ್ತಾನದಲ್ಲಿ ಬೆರಳಣಿಕೆ ಉತ್ಪಾದನಾ ಘಟಕಗಳಿವೆ. ಹೀಗಾಗಿ ಆಟೋಮೊಬೈಲ್ ಹಾಗೂ ಮೊಬೈಲ್ ಕ್ಷೇತ್ರಕ್ಕೆ ತೀವ್ರ ಹಿನ್ನಡೆಯಾಗಿದೆ.
ಸ್ಥಳೀಯ ವಸ್ತುಗಳಿಗೆ ಹೆಚ್ಚಿನ ಪ್ರೋತ್ಸಾಹ, ಬೆಂಬಲ ನೀಡುವುದು, ಬಳಕೆ ಹಾಗೂ ಮಾರಾಟದಿಂದ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗಲಿದೆ ಎಂದು ಪಾಕಿಸ್ತಾನ ನೂತನ ಪ್ರಧಾನಿ ಆಹಬಾದ್ ಷರೀಫ್ ಅಂದಾಜು. ಇದಕ್ಕಾಗಿ ಈ ಭಾರತದ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮ ನಿರ್ಭರ ಯೋಜನೆಯನ್ನು ಆಯ್ಕೆ ಮಾಡಲಾಗಿದೆ.