ಸ್ಟ್ರಾಪ್ ಲೆಸ್ ಬ್ರಾ ಖರೀದಿಸೋಕೆ ಮುನ್ನ ಈ ಮಾಹಿತಿ ನಿಮಗೆ ತಿಳಿದಿರಲಿ

ಫ್ಯಾಷನ್ ಮಾಡೇಕೆನ್ನುವುದು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ ? ಎಲ್ಲಾ ಮಹಿಳೆಯರು ಸುಂದರವಾಗಿ ಕಾಣಲು ಇಷ್ಟ ಪಡುತ್ತಾರೆ. ಅದಕ್ಕಾಗಿ ಉತ್ತಮವಾದ ಡ್ರೆಸ್ ಕೂಡ ಖರೀದಿಸುತ್ತಾರೆ. ಆದ್ರೆ ಸರಿಯಾದ ಬ್ರಾ ಧರಿಸದ ಕಾರಣ ಡ್ರೆಸ್ ಅಸಹ್ಯವಾಗಿ ಕಾಣುತ್ತದೆ. ಇದರಲ್ಲಿ ಎರಡು ಮಾತಿಲ್ಲ. ಯಾವುದೇ ಡ್ರೆಸ್ ಒಳಗೆ ಬ್ರಾ ಧರಿಸುವ ಮೊದಲು ಅದರ ಬಗ್ಗೆ ಸರಿಯಾಗಿ ತಿಳಿದಿರಬೇಕು.

 

ಈ ದಿನಗಳಲ್ಲಿ ಟ್ರೆಂಡ್ ನಲ್ಲಿರೋದು ಆಫ್ ಶೋಲ್ಡರ್ ಟಾಪ್ಸ್ ಮತ್ತು ಡ್ರೆಸ್ ಗಳು. ಆದರೆ ಹೆಚ್ಚಿನ ಮಹಿಳೆಯರು ಈ ಡ್ರೆಸ್ ಒಳಗೆ ಧರಿಸಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಆಫ್ ಶೋಲ್ಡರ್ ಟಾಪ್ಸ್ ಮತ್ತು ಡ್ರೆಸ್‌ಗಳನ್ನು ಧರಿಸುವುದಕ್ಕೆ ಹೋಗುವುದಿಲ್ಲ‌. ವಾಸ್ತವವಾಗಿ, ಸಾಮಾನ್ಯ ಬ್ರಾ ಟ್ಯೂಬ್ ಟಾಪ್ ಮತ್ತು ಆಫ್ ಶೋಲ್ಡರ್ ಡ್ರೆಸ್‌ನಲ್ಲಿ ಗೋಚರಿಸುತ್ತದೆ. ಇದು ಮಹಿಳೆಯರಿಗೆ ಇಷ್ಟವಾಗುವುದಿಲ್ಲ.

ಹಾಗಾಗಿ ಇಂತಹ ಡ್ರೆಸ್ ಧರಿಸಬೇಕು ಎನ್ನುವವರು ಬ್ರಾ ಹಾಕಿದರೂ ಕಾಣದಂತೆ ಎಚ್ಚರಿಕೆ ವಹಿಸಿ ಸೆಲೆಕ್ಟ್ ಮಾಡಿ ಹಾಕುವುದು ಒಳ್ಳೆಯದು. ಅದಕ್ಕಾಗಿ ಮಹಿಳೆಯರು ಸಾಮಾನ್ಯ ಬ್ರಾಗಿಂತ ಸ್ಟ್ರಾಪ್‌ಲೆಸ್ ಬ್ರಾ ಧರಿಸುವುದು ಉತ್ತಮ. ಅನೇಕ ಮಹಿಳೆಯರು ಈ ಸ್ಟ್ರಾಪ್‌ಲೆಸ್ ಬ್ರಾಗಳ ಬಗ್ಗೆ ಹೆಚ್ಚಾಗಿ ತಿಳಿದಿಲ್ಲ. ಅವುಗಳ ಧರಿಸುವಿಕೆ ಯಾವ ರೀತಿ, ಮತ್ತು ಯಾವ ವಿಷಯಗಳನ್ನು ಮುಖ್ಯವಾಗಿ ಗಮನದಲ್ಲಿಟ್ಟು ಈ ಸ್ಟ್ರಾಪ್ ಲೆಸ್ ಬ್ರಾ ಖರೀದಿಸಬೇಕು ಎಂಬುದನ್ನು ನಾವು ಇಲ್ಲಿ ಮೊದಲು ತಿಳಿದುಕೊಳ್ಳೋಣ.

ಸ್ಟ್ರಾಪ್‌ಲೆಸ್ ಬ್ರಾ ಎಂದರೇನು? : ಸ್ಟ್ರಾಪ್ ಲೆಸ್ ಬ್ರಾ ಮಾಮೂಲಿ ಬ್ರಾ ತರಹ ಇರುವುದಿಲ್ಲ. ಇದರ ವಿಶೇಷತೆ ಏನೆಂದರೆ ಇದು ಕೈ ಪಟ್ಟಿಯನ್ನು ಹೊಂದಿರುವುದಿಲ್ಲ. ಈ ಬ್ರಾ ಧರಿಸಲು ಕೂಡಾ ಸುಲಭ. ಆದರೆ ಅನೇಕ ಮಹಿಳೆಯರು ಈ ಬ್ರಾಗೆ ಪಟ್ಟಿಯಿರದ ಕಾರಣ ಅನೇಕ ಧರಿಸಲು ಹೆದರುತ್ತಾರೆ. ಎಲ್ಲಾದರೂ ಹೊರಗಡೆ ಹೋದಾಗ, ಬ್ರಾ ಕಳಚಿ ಬಿದ್ದರೆ, ಲೂಸ್ ಆದ್ರೆ ಎಂಬ ಭಯ ಅವರಿಗೆ ಕಾಡುತ್ತೆ. ಹಾಗಾಗಿ ಸ್ಟ್ರಾಪ್‌ಲೆಸ್ ಬ್ರಾ ಧರಿಸುವ ವಿಧಾನ ತಿಳಿದಿದ್ದರೆ ಈ ಸಮಸ್ಯೆ ಆಗುವುದಿಲ್ಲ. ಮೊದಲು ಸ್ಟ್ರಾಪ್ ಲೆಸ್ ಬ್ರಾ ಧರಿಸುವುದು ಹೇಗೆ ಎಂಬುದು ತಿಳಿದಿರಬೇಕು. ಎಲ್ಲ ರೀತಿಯ ಬ್ರಾನಲ್ಲಿಯೂ ಬ್ಯಾಂಡ್ ಇರುತ್ತದೆ. ಬ್ಯಾಂಡ್, ಬ್ರೆಸ್ಟ್ ಎತ್ತಿ ಹಿಡಿದಿರುತ್ತದೆ. ಆದ್ರೆ ಸ್ಟ್ರಾಪ್ ಬ್ರಾ ಬರೀ ನಿಮ್ಮ ಬ್ರೆಸ್ಟ್ ಮೇಲಿರುತ್ತದೆ.

ಬ್ರಾ ಸಡಿಲವಾಗಿರಬಾರದು : ನೀವು ಸ್ಟ್ರಾಪ್‌ ಲೆಸ್
ಬ್ರಾವನ್ನು ಖರೀದಿಸುತ್ತಿದ್ದರೆ, ನಿಮ್ಮ ಬ್ರೆಸ್ಟ್ ಗಾತ್ರಕ್ಕಿಂತ ಚಿಕ್ಕದಾದ ಬ್ಯಾಂಡ್ ಖರೀದಿಸಬೇಕು ಎಂಬುದನ್ನು ನೆನಪಿನಲ್ಲಿಡಿ. ಬ್ಯಾಂಡ್ ಲೂಸ್ ಆಗಿದ್ದರೆ ಬ್ರಾ ಜಾರಿ ಬೀಳುವ ಸಾಧ್ಯತೆ ಹೆಚ್ಚು. ಅಂತಹ ಪರಿಸ್ಥಿತಿಯಲ್ಲಿ, ಸ್ಟ್ರಾಪ್‌ಲೆಸ್ ಬ್ರಾ ನಿಮ್ಮ ಬ್ರೆಸ್ಟ್ ಗೆ ಬಿಗಿಯಾಗಿರಬೇಕು. ಬಿಗಿಯಾಗಿರಬೇಕು ಎನ್ನುವ ಕಾರಣಕ್ಕೆ ಅತಿಯಾದ ಬಿಗಿ ಬ್ರಾ ಧರಿಸಬೇಡಿ.

ಸಣ್ಣ ಬ್ಯಾಂಡ್ ಇರಲಿ : ಬ್ರೆಸ್ಟ್ ದೊಡ್ಡದಾಗಿದ್ದರೆ
ಬ್ಯಾಂಡ್ ಕೂಡ ಅಗಲವಾಗಿರಬೇಕು. ಹಾಗೆ ಒಳ್ಳೆ ಗುಣಮಟ್ಟದ ಬ್ರಾ ಖರೀದಿ ಮಾಡಿ. ಇದು ನಿಮ್ಮ ದೇಹಕ್ಕೆ ಸರಿಯಾಗಿ ಫಿಟ್ ಆಗುತ್ತದೆ.

ಬ್ರಾ ಬಟ್ಟೆ : ಸ್ಟ್ರಾಪ್ಲೆಸ್ ಬ್ರಾ, ನಿಮ್ಮ ಟಾಪ್
ಅಥವಾ ಆಫ್ ಶೋಲ್ಡರ್ ಡ್ರೆಸ್‌ನಲ್ಲಿ ಆರಾಮದಾಯಕವಾಗುವಂತೆ ಇರಬೇಕು ಮತ್ತು ಬ್ರಾ ಫ್ಯಾಬ್ರಿಕ್ ಯಾವುದೇ ರೀತಿಯಲ್ಲಿ ಹೊರಗೆ ಗೋಚರಿಸಬಾರದು. ಇದಕ್ಕಾಗಿ, ಬ್ರಾನ ಕಪ್ ಗಾತ್ರವು ಸರಿಯಾದ ಫಿಟ್ಟಿಂಗ್ ಇರುವಂತೆ ನೋಡಿಕೊಳ್ಳಿ. ಫ್ಯಾಬ್ರಿಕ್ ದಪ್ಪವಾಗಿದ್ದರೆ ಅದನ್ನು ಖರೀದಿಸಬೇಡಿ.
ದಪ್ಪವಾದ ಫ್ಯಾಬ್ರಿಕ್, ಉಡುಪಿನಲ್ಲಿ ಕೆಟ್ಟದಾಗಿ ಕಾಣುತ್ತದೆ. ಸ್ಟ್ರಾಪ್‌ಲೆಸ್ ಬ್ರಾ ಖರೀದಿಸುವಾಗ, ಅನ್ಲೈನ್ಡ್ ಕಪ್ ಇರುವ ಬ್ರಾ ಖರೀದಿ ಮಾಡಿ. ಈ ರೀತಿಯ ಬ್ರಾ ಬ್ರೆಸ್ಟ್ ಮೇಲೆ ಬಿಗಿಯಾಗಿ ಹೊಂದಿಕೊಳ್ಳುತ್ತದೆ.

Leave A Reply

Your email address will not be published.