ಎಸ್‌ಎಸ್‌ಎಲ್‌ಸಿಯಲ್ಲಿ 625 ಕ್ಕೆ 619 ಅಂಕ ಗಳಿಸಿ ಉತ್ತೀರ್ಣಳಾದ ಗಟ್ಟಿಮೇಳ ಧಾರಾವಾಹಿ ನಟಿ !!

ಕಿರುತೆರೆಯ ಗಟ್ಟಿಮೇಳ ಸೀರಿಯಲ್ ಹಾಗೂ ‘ಡ್ರಾಮಾ ಜ್ಯೂನಿಯರ್ಸ್’ ಮೂಲಕ ಗುರುತಿಸಿಕೊಂಡಿರುವ ಮಹತಿ ವೈಷ್ಣವಿ ಭಟ್ ಎಸ್‌ಎಸ್‌ಎಲ್‌ಸಿಯಲ್ಲಿ ಶೇ.99.04 ಅಂಕ ಪಡೆದು ಪಾಸ್ ಆಗಿದ್ದು, ಈ ಕುರಿತು ಮಹತಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಸಂತಸ ಹಂಚಿಕೊಂಡಿದ್ದಾರೆ.

ಖಾಸಗಿ ವಾಹಿನಿ ಝೀ ಕನ್ನಡದಲ್ಲಿ ಮೂಡಿ ಬರುತ್ತಿರುವ `ಗಟ್ಟಿಮೇಳ’ ಸೀರಿಯಲ್ ಜೊತೆ ಶಿಕ್ಷಣವನ್ನು ಕೂಡ ನಿಭಾಯಿಸುತ್ತಾ ಈ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ ಬರೋಬ್ಬರಿ 619 ಮಾರ್ಕ್ಸ್ ಗಳನ್ನು ನಟಿ ಮಹತಿ ಗಳಿಸಿದ್ದಾರೆ. ಈ ಮೂಲಕ ಅವರ ಫಲಿತಾಂಶ ಶೇ.99.04 ಆಗಿದೆ. ಇದು ಅವರಿಗೆ ಅವರ ಕುಟುಂಬಕ್ಕೆ ಖುಷಿ ನೀಡಿದೆ.

ಗಟ್ಟಿಮೇಳ ನಟಿ ಮಹತಿ ಯಾವ ವಿಷಯಕ್ಕೆ ಎಷ್ಟು ಅಂಕ ಬಂದಿದೆ ಎಂಬ ವಿವರ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಕನ್ನಡದಲ್ಲಿ 124, ಇಂಗ್ಲೀಷ್‌ನಲ್ಲಿ 100, ಹಿಂದಿ 99, ಗಣಿತ 100, ವಿಜ್ಞಾನ 97, ಸಮಾಜ ವಿಜ್ಞಾನದಲ್ಲಿ 99 ಅಂಕ ಗಳಿಸಿದ್ದಾರೆ. ರಾಜ್ಯದಲ್ಲಿ 7ನೇ ಸ್ಥಾನ ಪಡೆದಿದ್ದಾರೆ. ಧಾರಾವಾಹಿ ಶೂಟಿಂಗ್ ಮಧ್ಯೆ ಉತ್ತಮ ಅಂಕ ಪಡೆದಿರೋದಕ್ಕೆ ಮಹತಿ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಮಹತಿ, ನೀವು ಇಲ್ಲದೇ ಇದು ಅಸಾಧ್ಯ ಎಂದು ತಮ್ಮ ಕುಟುಂಬ ಮತ್ತು ಶಿಕ್ಷಕರಿಗೆ ಹಾಗೆಯೇ `ಗಟ್ಟಿಮೇಳ’ ತಂಡಕ್ಕೂ ಮಹತಿ ಧನ್ಯವಾದ ತಿಳಿಸಿದ್ದಾರೆ. ಅಲ್ಲದೆ ಅಭಿಮಾನಿಗಳ ಹಾರೈಕೆಗೂ ಧನ್ಯವಾದ ತಿಳಿಸಿದ್ದು, ಸದ್ಯ ಈ ಪೋಸ್ಟ್ ಸಖತ್ ವೈರಲ್ ಆಗಿದೆ.

https://www.instagram.com/p/Cdu_2N6LJe8/?igshid=YmMyMTA2M2Y=

Leave A Reply

Your email address will not be published.