ಮೋಟಾರ್ ಬೈಕಿನ ಚಕ್ರಕ್ಕೆ ಬುರ್ಖಾ ಸಿಲುಕಿ ಯುವತಿ ಸಾವು: ವಿಡಿಯೋ ಹಂಚಿ ಎಚ್ಚರಿಕೆ ಸಂದೇಶ ನೀಡಿದ ಸಾರಿಗೆ ನಿಗಮ

ಮೋಟರ್ ಬೈಕ್‌ನಲ್ಲಿ ಚಲಿಸುತ್ತಿರುವಾಗ ಹಿಂಬದಿ ಚಕ್ರಕ್ಕೆ ಯುವತಿಯೋರ್ವಳ ಬುರ್ಖಾ ಸಿಲುಕಿ, ಕೆಳಗೆ ಬಿದ್ದು ಸಾವಿಗೀಡಾದ ಘಟನೆಯೊಂದು ಹೈದರಾಬಾದ್ ನಲ್ಲಿ ನಡೆದಿದೆ.

18 ವರ್ಷದ ಯುವತಿ ಸಾವಿಗೀಡಾಗಿದ್ದಾಳೆ.

ಸೋದರನೊಂದಿಗೆ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಯುವತಿಯ ಬುರ್ಖಾ ಹಿಂಬದಿಯ ಚಕ್ರಕ್ಕೆ ಸುತ್ತಿಕೊಂಡಿದ್ದು, ಹೀಗಾಗಿ ಇಬ್ಬರೂ ಬೈಕ್‌ನಿಂದ ಕೆಳಗೆ ಬಿದ್ದಿದ್ದಾರೆ. ಆದರೆ, ಯುವತಿಗೆ ಗಂಭೀರ ಗಾಯಗಳಾಗಿತ್ತು ಎನ್ನಲಾಗಿದ್ದು, ಮರುದಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಅಪಘಾತದ ವಿಡಿಯೋವನ್ನು ತೆಲಂಗಾಣದ ಸಾರಿಗೆ ನಿಗಮದ ಎಂಡಿ ವಿಸಿ ಸಜ್ಜನರ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ‘ಮಹಿಳೆಯರೇ, ನೀವು ಬೈಕ್‌ನಲ್ಲಿ ಕುಳಿತುಕೊಳ್ಳುವಾಗ ಜಾಗರೂಕರಾಗಿರಿ’ ಎಂದು ಮನವಿ ಮಾಡಿದ್ದಾರೆ.

Leave A Reply