ಅದ್ಧೂರಿಯಾಗಿ ನೆರವೇರಿತು ಸಂಜನಾ ಗಲ್ರಾನಿ ಸಹೋದರಿ ನಿಕ್ಕಿ ಗಲ್ರಾನಿ ಮದುವೆ !! | ಸ್ಟಾರ್ ಜೋಡಿಗೆ ಹರಿದುಬರುತ್ತಿದೆ ಶುಭಾಶಯಗಳ ಮಹಾಪೂರ- ಮದುವೆ ಫೋಟೋಗಳು ವೈರಲ್

ಇತ್ತೀಚೆಗಷ್ಟೇ ಇಂಗೇಜ್‌ಮೆಂಟ್ ಮಾಡಿಕೊಂಡಿದ್ದ ಸ್ಟಾರ್ ಜೋಡಿಯೊಂದು ಇದೀಗ ಸದ್ದಿಲ್ಲದೇ ಹಸೆಮಣೆ ಏರಿದೆ. ಸ್ಯಾಂಡಲ್‌ವುಡ್ ನಟಿ ಸಂಜನಾ ಗಲ್ರಾನಿ ಸಹೋದರಿ ನಿಕ್ಕಿ ಗಲ್ರಾನಿ, ಆದಿ ಪಿನಿಸೆಟ್ಟಿ ಜೊತೆ ವಿವಾಹವಾಗಿದ್ದಾರೆ.

 

ಕನ್ನಡ ಸೇರಿದಂತೆ ಸಾಕಷ್ಟು ಸಿನಿಮಾಗಳ ಮೂಲಕ ಬಹುಭಾಷಾ ನಟಿಯಾಗಿ ನಿಕ್ಕಿ ಗಲ್ರಾನಿ ಮಿಂಚ್ತಿದ್ದಾರೆ. ಇದೀಗ ಬಹುಕಾಲದ ಗೆಳೆಯ ಆದಿ ಪಿನಿಸೆಟ್ಟಿ ಜೊತೆ ಸಂಜನಾ ಗಲ್ರಾನಿ ಸಹೋದರಿ ನಿಕ್ಕಿ ಗಲ್ರಾನಿ ಮದುವೆ ಆಗಿದ್ದಾರೆ. ಗುರು ಹಿರಿಯರು ಮತ್ತು ಆಪ್ತರ ಸಮ್ಮುಖದಲ್ಲಿ ಖ್ಯಾತ ನಟ ಆದಿ ಪಿನಿಸೆಟ್ಟಿ ಹಸೆಮಣೆ ಏರಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನವದಂಪತಿಗೆ ಶುಭಾಶಯಗಳು ಹರಿದು ಬರುತ್ತಿದೆ.

ನಿಕ್ಕಿ ಮತ್ತು ಆದಿ ಹಲವು ವರ್ಷಗಳಿಂದ ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ನಿಕ್ಕಿ ಮತ್ತು ಆದಿ ಗುರುಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಕುಟುಂಬದ ಮತ್ತು ಸಿನಿಮಾ ರಂಗದ ಸ್ನೇಹಿತರ ಸಮ್ಮುಖದಲ್ಲಿ ಸದ್ದಿಲ್ಲದೇ ಹಸೆಮಣೆ ಏರಿದ್ದಾರೆ. ಮೇ 18 ರಂದು ಅರಿಶಿಣ ಶಾಸ್ತ್ರ ನೆರವೇರಿತ್ತು. ಇಂದು ನಿಕ್ಕಿ ಮತ್ತು ಆದಿ ಪಿನಿಸೆಟ್ಟಿ ಮದುವೆ ಆಗಿದ್ದಾರೆ. ಮದುವೆ ಸಂಭ್ರಮದಲ್ಲಿ ನ್ಯಾಚುರಲ್ ಸ್ಟಾರ್ ನಾನಿ ಕೂಡ ಭಾಗಿಯಾಗಿದ್ದಾರೆ.

ಗಲ್ರಾನಿ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ಸಂಜನಾ ಗಲ್ರಾನಿ ಈಗ ಪ್ರೆಗ್ನೆಂಟ್. ಅವರ ಕುಟುಂಬಕ್ಕೆ ಶೀಘ್ರವೇ ಹೊಸ ಸದಸ್ಯನ ಆಗಮನ ಆಗಲಿದೆ. ಇನ್ನೊಂದ್ ಕಡೆ ತಂಗಿ ನಿಕ್ಕಿ ಗಲ್ರಾನಿ ಮದುವೆ ಸಂತಸದ ಸುದ್ದಿ ಕೇಳಿ ಅಭಿಮಾನಿಗಳು ಥ್ರೀಲ್ ಆಗಿದ್ದಾರೆ.

Leave A Reply

Your email address will not be published.