ಸ.ಹಿ.ಪ್ರಾ.ಶಾಲೆಮಾರುತಿನಗರ ಮರ್ಲಾನಹಳ್ಳಿ ಯಲ್ಲಿ ಕಲಿಕಾ ಚೇತರಿಕೆ ಜಾಗೃತಿ ಜಾಥ

ಕಾರಟಗಿ :ಎತ್ತಿನ ಬಂಡಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಶಿಕ್ಷಕರು ಕಲಿಕಾ ಚೇತರಿಕೆ ಕಾರ್ಯಕ್ರಮದ ಬಗ್ಗೆ ರಸ್ತೆಯುದ್ದಕ್ಕೂ ವಿವರಿಸುತ್ತ ವಿಶಿಷ್ಟ ರೀತಿಯಲ್ಲಿ ಜನಮನ ಸೆಳೆದರು ನಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಕೋವಿಡ್ ಸಂಕಷ್ಟದಲ್ಲಿ ಮಕ್ಕಳು ಶಿಕ್ಷಣದಿಂದ ದೂರ ಉಳಿಯುವ ಪರಿಸ್ಥಿತಿ ಬಂದಿತ್ತು ಆದರೆ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ನಿಟ್ಟಿನಲ್ಲಿ ನಮ್ಮ ಶಿಕ್ಷಣ ಇಲಾಖೆ ಆನ್ಲೈನ್ ಕ್ಲಾಸ್ ಮಾಡುವ ಮೂಲಕ ಮಕ್ಕಳ ಬೌದ್ಧಿಕಮಟ್ಟವನ್ನು ಹೆಚ್ಚಿಸಲು ಸಹಕಾರಿಯಾಯಿತು ಅಲ್ಲದೆ ಈ ವರ್ಷದಿಂದ ಕಲಿಕಾ ಕ್ಷೇತ್ರಕ್ಕೆ ಎನ್ನುವ ವಿಶೇಷ ಕಾರ್ಯಕ್ರಮದ ಮೂಲಕ ಪಠ್ಯೆ ಅಲ್ಲದೇ ಪಠ್ಯೇತರ ಚಟುವಟಿಕೆಗಳ ಮೂಲಕ ಮಕ್ಕಳ ಜ್ಞಾನವನ್ನು ಹೆಚ್ಚಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.

 

ನಂತರ ಶಾಲೆಯಿಂದ ಗ್ರಾಮದ ವಿವಿಧ ರಸ್ತೆಗಳಲ್ಲಿ ಘೋಷಣೆಗಳನ್ನು ಕೂಗುತ್ತಾ ಜಾಗೃತಿ ಮೂಡಿಸಲಾಯಿತು ಅದರ ಜೊತೆಗೆ ಮಳೆಬಿಲ್ಲು ಕಾರ್ಯಕ್ರಮದ ಉದ್ಘಾಟನೆಯನ್ನು ಮಕ್ಕಳಿಗೆ ವಿವಿಧ ಆಟಗಳ ಮೂಲಕ ಮಾಡಿಸಲಾಯಿತು.

ಈ ಸಂದರ್ಭದಲ್ಲಿ ಊರಿನ ಮುಖಂಡರು,ಗ್ರಾಮ ಪಂಚಾಯತಿ ಸದಸ್ಯರು ಎಸ್ಡಿಎಂಸಿ ಸದಸ್ಯರು ಹಾಗೂ ಶಾಲೆಯ ಶಿಕ್ಷಕ ವರ್ಗ ಹಾಜರಿದ್ದರು.

Leave A Reply

Your email address will not be published.