Z ನಿಂದ Aವರೆಗೆ ಕೇವಲ 23 ಸೆಕೆಂಡುಗಳಲ್ಲಿ ಹೇಳುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾದ ಬಾಲಕಿ
ಸಾಧನೆಗೆ ವಯಸ್ಸು ಮುಖ್ಯವಲ್ಲ. ಬದಲಿಗೆ ಛಲ ಇರಬೇಕು. ಯಾವುದೇ ಒಬ್ಬ ವ್ಯಕ್ತಿ ಸಾಧನೆ ಮಾಡಿದಾಗ ಅದೆಂತ ಮಹಾ ಎಂದು ಮಾತಾಡೋರೇ ಹೆಚ್ಚು. ಆದ್ರೆ ಅದರ ಬೆಲೆ ಗೊತ್ತಿರೋದು ಪ್ರಯತ್ನ ಪಟ್ಟು ಸಾಧಿಸಿದಾಗಲೇ ತಿಳಿಯೋದು.
ಸಣ್ಣ ವಯಸ್ಸಿನಲ್ಲಿ ಅಕ್ಷರ ಮಾಲೆಗಳನ್ನು ತಪ್ಪಿಲ್ಲದೇ ಹೇಳುವವರ ಸಂಖ್ಯೆ ವಿರಳವೆಂದೇ ಹೇಳಬಹುದು. ಒಂದು ವೇಳೆ ಹೇಳಿದರು ಅಲ್ಲಲ್ಲಿ ತಪ್ಪಾಗಿ ನಿಧಾನಕ್ಕೆ ಹೇಳಬಹುದು. ಆದರೆ, ಇಲ್ಲೊಬ್ಬ ಬಾಲೆ ಇಂಗ್ಲೀಷ್ ವರ್ಣಮಾಲೆಯನ್ನು ಕೇವಲ 23 ಸೆಕೆಂಡುಗಳಲ್ಲಿ ಹಿಂದಿನಿಂದ ಹೇಳುವ ಮೂಲಕ ದಾಖಲೆ ಬರೆದಿದ್ದಾಳೆ.
ಕೇವಲ 5 ವರ್ಷದ ಪಶ್ಚಿಮ ಬಂಗಾಳದ ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಗೋವಾಲ್ಟೋರ್ ನ ‘ಆತ್ರೇಯಿ ಘೋಷ್’ ಎಂಬ ಈ ಬಾಲಕಿ ಇಂಗ್ಲೀಷ್ ವರ್ಣಮಾಲೆಯನ್ನು ಹಿಂದಿನಿಂದ ಅಂದರೆ Z ನಿಂದ A ವರೆಗೆ ಕೇವಲ 23 ಸೆಕೆಂಡುಗಳಲ್ಲಿ ಹೇಳುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಗಿದ್ದಾಳೆ.
ಈಕೆ, ಪೊಲೀಸ್ ಅಧಿಕಾರಿಯಾಗಿರುವ ಅನಿರುದ್ಧ ಘೋಷ್ ಅವರ ಮಗಳಾಗಿದ್ದು, ಓದು ಮಾತ್ರವಲ್ಲದೇ ಎಲ್ಲಾ ವಿಷಯದಲ್ಲೂ ಸಕಲಕಲಾವಲ್ಲಭೆ. ಹೌದು. ಈಕೆ ಹಾಡುಗಾರಿಕೆ, ನೃತ್ಯ ಮತ್ತು ಓದುವುದರಲ್ಲಿ ನಿಸ್ಸೀಮಳಾಗಿದ್ದಾಳೆ.
23 ಸೆಕೆಂಡುಗಳಲ್ಲಿ ವರ್ಣಮಾಲೆಯನ್ನು ಹೇಳುವ ದೃಶ್ಯವನ್ನು ತಾಯಿ ಸಂಪತಿ ಘೋಷ್ ಸೆರೆ ಹಿಡಿದಿದ್ದಾರೆ. ಇಷ್ಟು ಸಣ್ಣ ವಯಸ್ಸಿನಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಗಿರುವ ಈಕೆಯ ಸಾಧನೆಗೆ ಎಲ್ಲರೂ ಪ್ರೀತಿಯ ಹಾರೈಕೆ ಸುರಿಸಿದ್ದಾರೆ.