ಕೆಲಸ ಚೇಂಜ್ ಮಾಡುವ ಭರದಲ್ಲಿ ಸ್ಯಾಲರಿ ಅಕೌಂಟ್ ಹಾಗೇ ಬಿಟ್ಟಿದ್ದೀರೆ | ಹಾಗಿದ್ರೆ ನಿಮಗಿದೆ ಅಪಾಯ!
ಪ್ರತಿಯೊಬ್ಬ ಉದ್ಯೋಗಿಯು ಒಂದೇ ಕೆಲಸದಲ್ಲಿ ಜೀವನ ಪರ್ಯಂತ ಇರಲಾರ. ತನ್ನ ಅವಶ್ಯಕತೆಗೆ ತಕ್ಕಂತೆ ಕೆಲಸ ಬದಲಾಯಿಸುತ್ತಿರುತ್ತಾರೆ. ಹೀಗಿರುವಾಗ ಅನೇಕರು ಒಂದು ಕಂಪನಿಯಿಂದ ಇನ್ನೊಂದು ಕಂಪನಿಗೆ ಕೆಲಸಕ್ಕೆ ಸೇರುವ ಸಂದರ್ಭದಲ್ಲಿ, ತಮ್ಮ ಸ್ಯಾಲರಿ ಅಕೌಂಟ್ ಅಸಡ್ಡೆ ಮಾಡುತ್ತಾರೆ.
ಹೌದು. ಜಾಬ್ ಚೇಂಜ್ ಮಾಡುವ ಭರದಲ್ಲಿ ಒಂದಷ್ಟು ಮಂದಿ ಈ ಎಡವಟ್ಟು ಮಾಡಿಕೊಳ್ಳುತ್ತಾರೆ. ಆದ್ರೆ ಈ ರೀತಿ ಮಾಡಿದರೆ ನಿಮಗೆ ಅಪಾಯ ಕಟ್ಟಿಟ್ಟ ಬುತ್ತಿ ಮಾತ್ರವಲ್ಲದೆ ನಷ್ಟವೂ ಸಂಭವಿಸುತ್ತದೆ. ಏನಿದು ಸ್ಯಾಲರಿ ಅಕೌಂಟ್, ಅಕೌಂಟ್ ಹಾಗೇ ಬಿಟ್ಟರೆ ಏನಾಗುತ್ತೆ? ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ಒಬ್ಬ ವ್ಯಕ್ತಿ ಒಂದು ಕಂಪನಿಯಲ್ಲಿ ಕೆಲಸಕ್ಕೆ ಸೇರಿ ಒಂದಷ್ಟು ಸಮಯದಲ್ಲಿ ಬೇರೊಂದು ಕಂಪನಿಗೆ ಕೆಲಸಕ್ಕೆ ಸೇರುತ್ತಾನೆ. ಈ ವೇಳೆ ಆತ ಹಳೆ ಕಂಪನಿಯ ಸ್ಯಾಲರಿ ಅಕೌಂಟ್ ಅನ್ನು ಹಾಗೆ ಬಿಟ್ಟುಬಿಡುತ್ತಾನೆ. ಈ ಹಿಂದೆಯೇ ಹೊಂದಿದ್ದ ಬ್ಯಾಂಕ್ ಖಾತೆಗೇ ಆತನ ಹೊಸ ಕಂಪನಿಯು ವೇತನ ಕ್ರೆಡಿಟ್ ಮಾಡಬೇಕಾದರೆ, ಆತ ದಂಡ ಕಟ್ಟಬೇಕಾಗುತ್ತದೆ. ಇದರ ಅರ್ಥ, ಈಗಾಗಲೇ ಒಂದು ಖಾತೆಯನ್ನು ಹೊಂದಿದ್ದರೆ ಅದೇ ಬ್ಯಾಂಕ್ನಲ್ಲಿ ಮತ್ತೊಂದು ಖಾತೆ ತೆರೆಯುವುದು ಕಷ್ಟಸಾಧ್ಯ. ದಂಡ ಕಟ್ಟಿಯೇ ಹಳೆಯ ಖಾತೆಯನ್ನು ಸಕ್ರಿಯಗೊಳಿಸಬೇಕಾಗುತ್ತದೆ.
ದಂಡ ಪಾವತಿ ಮಾಡಲು ಕಾರಣವೆಂದರೆ, ಸಾಮಾನ್ಯವಾಗಿ ಸ್ಯಾಲರಿ ಅಕೌಂಟ್ ಜೀರೋ ಬ್ಯಾಲೆನ್ಸ್ ಮೂಲಕ ತೆರೆಯಲಾಗುತ್ತದೆ. ಒಂದೊಮ್ಮೆ ಆ ಅಕೌಂಟ್ಗೆ ಮೂರು ತಿಂಗಳವರೆಗೆ ವೇತನ ಕ್ರೆಡಿಟ್ ಆಗದಿದ್ದರೆ ಅದು ಉಳಿತಾಯ ಖಾತೆ ವರ್ಗಕ್ಕೆ ಬರುತ್ತದೆ. ನಿಯಮಗಳ ಪ್ರಕಾರ, ಉಳಿತಾಯ ಖಾತೆಯಲ್ಲಿ ಮಿನಿಮಮ್ ಮಂತ್ಲಿ ಬ್ಯಾಲೆನ್ಸ್ 500-10,000 ಮಾಡಬೇಕಾಗುತ್ತದೆ. ಇಲ್ಲದಿದ್ದರೆ ಬ್ಯಾಂಕ್ ನಿಯಮಗಳ ಪ್ರಕಾರ ಖಾತೆಯಿಂದ ಹಣ ಡಿಡಕ್ಟ್ ಮಾಡಬೇಕಾಗುತ್ತದೆ.
ಹೀಗಾಗಿ, ಸ್ಯಾಲರಿ ಅಕೌಂಟ್ ನಿಂದ ಸಮಸ್ಯೆ ಎದುರಾಗದೆ ಇರಲು ಈ ರೀತಿ ಮಾಡಿ. ಹೊಸ ಕಂಪನಿ ಸೇರಿಕೊಂಡಾಗ ಅಲ್ಲಿಯೂ ಹಳೆಯ ಕಂಪನಿಯಲ್ಲಿ ಇದ್ದ ಬ್ಯಾಂಕ್ ಖಾತೆಯೇ ಮುಂದುವರಿಯುವಂತೆ ಇದ್ದರೆ ಸಮಸ್ಯೆ ಇಲ್ಲ. ಇಲ್ಲವಾದರೆ, ತಕ್ಷಣ ಹಳೆಯ ಬ್ಯಾಂಕ್ ಖಾತೆ ಕ್ಲೋಸ್ ಮಾಡಿ, ಇಲ್ಲವಾದಲ್ಲಿ ಫೋನ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್ ಶುಲ್ಕ ಎಂದೆಲ್ಲಾ ಹೇಳಿಕೊಂಡು ಹಣ ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಬಳಕೆಯಲ್ಲಿ ಇಲ್ಲದ ಖಾತೆಯನ್ನು ಕ್ಲೋಸ್ ಮಾಡುವುದೇ ಉತ್ತಮ. ಸತತ 12 ತಿಂಗಳು ಯಾವುದೇ ವಹಿವಾಟು ನಡೆಸದಿದ್ದರೆ ಆ ಅಕೌಂಟ್ ಅನ್ನು ನಿಷ್ಕ್ರೀಯ ಖಾತೆ ಎಂದು ಪರಿಗಣಿಸಲಾಗುತ್ತದೆ. ಮುಂದಿನ 12 ತಿಂಗಳು ಯಾವುದೇ ವಹಿವಾಟು ನಡೆಯದಿದ್ದರೆ ಅದು ಡೋರ್ಮ್ಯಾಂಟ್ ಖಾತೆಯ ವರ್ಗಕ್ಕೆ ಬರುತ್ತದೆ.