ದರ್ಗಾದ ಹತ್ತಿರ ಹನುಮಂತನ ಮೂರ್ತಿ ಪ್ರತಿಷ್ಠಾಪನೆ | ಮುಸಲ್ಮಾನರಿಂದ ಕಲ್ಲುತೂರಾಟ
ದರ್ಗಾದ ಹತ್ತಿರ ಹನುಮಂತನ ಮೂರ್ತಿ ಪ್ರತಿಷ್ಠಾಪನೆ ಮಾಡಿರುವ ಘಟನೆಯೊಂದು ಭಾರೀ ಗಲಾಟೆಗೆ ಕಾರಣವಾಗಿದ್ದು, ಉದ್ವಿಗ್ನ ಪರಿಸ್ಥಿತಿಗೆ ನಿರ್ಮಾಣ ಉಂಟು ಮಾಡಿದೆ. ಈ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಇಲ್ಲಿನ ಹಳೇ ಕಚೇರಿ ಆವರಣದಲ್ಲಿ ಕೆಲವು ದುಷ್ಕರ್ಮಿಗಳು ಹನುಮಂತನ ಮೂರ್ತಿ ಪ್ರತಿಷ್ಠಾಪನೆ ಮಾಡುವ ಸಮಯದಲ್ಲಿ ಮುಸಲ್ಮಾನರು ಕಲ್ಲುತೂರಾಟ ನಡೆಸಿದ್ದಾರೆ. ಮೇ.16 ರಂದು ಈ ಘಟನೆ ನಡೆದಿದೆ.
ಇದರಿಂದ ಅಲ್ಲಿ ಹಿಂಸಾಚಾರ ಭುಗಿಲೆದ್ದು ಉದ್ವಿಗ್ನತೆ ನಿರ್ಮಾಣವಾಗಿದ್ದು, ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಬಿಗಿ ಬಂದೋಬಸ್ತು ಮಾಡಿದ್ದಾರೆ. ಈಗ ಅಲ್ಲಿ ಕರ್ಪ್ಯೂ ಜಾರಿಯಲ್ಲಿದೆ. ಹಿಂಸಾಚಾರದ ಸಮಯದಲ್ಲಿ ಅನೇಕ ವಾಹನಗಳು ಹಾನಿಗೊಳಗಾಗಿದ್ದು ಅಗ್ನಿಗೆ ಆಹುತಿ ಆಗಿರುವ ಘಟನೆ ಬೆಳಕಿಗೆ ಬಂದಿದೆ.
ಪೊಲೀಸ್ ಅಧಿಕಾರಿಗಳು ನೀಡಿರುವ ಮಾಹಿತಿಯ ಪ್ರಕಾರ ಎರಡು ಸಮೂಹಗಳ ಜನರು ಅಲ್ಲಿದ್ದು, ನಂತರ ವಾದ ವಿವಾದ ನಡೆದು, ಎರಡು ಸಮಾಜದ ಜನರನ್ನು ಮಾತನಾಡಲು ಕರೆದುಕೊಂಡು ಹೋದಾಗ, ಪರಿಸ್ಥಿತಿ ಹದಗೆಟ್ಟು, ಜನರು ಕಲ್ಲು ತೂರಾಟ ನಡೆಸಿದ್ದು, ಯಾರೂ ಇದರಲ್ಲಿ ಯಾರು ಗಾಯಗೊಂಡಿಲ್ಲ ಎಂದು ವರದಿಯಾಗಿದೆ.