ಮೂರು ಮುದ್ದಾದ ಹುಲಿ ಮರಿಗಳಿಗೆ ತಾಯಿಯಾದ ಲ್ಯಾಬ್ರಡಾರ್ ನಾಯಿ !! | ಸ್ವತಃ ಶ್ವಾನವೇ ಅನಾಥ ಮರಿಗಳಿಗೆ ‘ಅಮ್ಮ’ನಾಗಿ, ಅವುಗಳನ್ನು ಪೋಷಿಸುತ್ತಿರುವ ದೃಶ್ಯ ವೈರಲ್

ಸೋಶಿಯಲ್ ಮೀಡಿಯಾಗಳಲ್ಲಿ ದಿನದಿಂದ ದಿನಕ್ಕೆ ಅಪರೂಪದ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತದೆ. ಕೆಲವೊಂದು ವಿಡಿಯೋಗಳು ಯಾವ ಮಟ್ಟಿಗೆ ಇರುತ್ತದೆ ಎಂದರೆ ನೋಡುಗರೇ ಒಮ್ಮೆಗೆ ಫಿದಾ ಆಗೋ ಮಟ್ಟಕ್ಕೆ. ಹೌದು. ಇದೀಗ ಅಂತಹುದೇ ಒಂದು ವಿಭಿನ್ನತೆಯ ವಿಡಿಯೋ ವೈರಲ್ ಆಗಿದ್ದು, ನಿಟ್ಟಿಗರ ಹೃದಯ ಗೆದ್ದಿದ್ದೆ.

ಸಾಮಾನ್ಯವಾಗಿ ನಾಯಿಗಳು ಹುಲಿ, ಚಿರತೆಯಂತಹ ಪ್ರಾಣಿಗಳನ್ನು ಕಂಡೊಡನೆ ಓಡುವುದನ್ನು ನಾವು ನೋಡಿದ್ದೇವೆ. ಆದ್ರೆ ಈ ವೈರಲ್ ವಿಡಿಯೋದಲ್ಲಿ ಸ್ವತಃ ನಾಯಿಯೇ ಹುಲಿ ಮರಿಗಳಿಗೆ ‘ಅಮ್ಮ’ನಾಗಿ ಪೋಷಣೆ ಮಾಡುವಂತಹ ದೃಶ್ಯ ಸೆರೆಯಾಗಿದೆ. ನೋಡಿ, ತಾಯಿ ಎಂಬ ಸ್ಥಾನವೇ ಅಂತದ್ದು, ಯಾವುದನ್ನೂ ಲೆಕ್ಕಿಸದೆ ಕೇವಲ ಪ್ರೀತಿಯನ್ನು ಮಾತ್ರ ಹಂಚುವವಳು. ಅಂತಹ ಮಾನವೀಯತೆಗೆ ಸಾಕ್ಷಿ ಎಂಬಂತೆ ಇರುವ ಈ ನಾಯಿ ಹಾಗೂ ಹುಲಿಯ ವಿಡಿಯೋದ ಕುರಿತು ಇಲ್ಲಿದೆ ನೋಡಿ.

ಲಾಬ್ರಡರ್​ ತಳಿಯ ನಾಯಿಯು, ಮೃಗಾಲಯದಲ್ಲಿ ತಾಯಿಯಿಂದ ಬೇರೆಯಾಗಿರುವ ಮೂರು ಹುಲಿ ಮರಿಗಳನ್ನು ಪೋಷಿಸುತ್ತಿದ್ದು, ನಾಯಿ ಮತ್ತು ಹುಲಿ ಮರಿಗಳ ನಡುವಿನ ಬಾಂದವ್ಯವನ್ನು ನೋಡಿ ನೆಟ್ಟಿಗರು ಫಿದಾ ಆಗಿದ್ದಾರೆ. ಈ ವಿಡಿಯೋವನ್ನು ಚೀನಾದಲ್ಲಿ ಸೆರೆಹಿಡಿಯಲಾಗಿದ್ದು, ನಾಯಿಯ ಸುತ್ತಲೂ ಹುಲಿ ಮರಿಗಳು ಆಟವಾಡುತ್ತಿರುವ ದೃಶ್ಯ ವಿಡಿಯೋದಲ್ಲಿದೆ. ಈ ಮರಿಗಳು ಹುಟ್ಟಿದ ಕೂಡಲೇ ತಾಯಿ ಹುಲಿ ಅವುಗಳಿಗೆ ಆಹಾರವನ್ನು ನೀಡಲು ನಿರಾಕರಿಸಿತು ಎಂದು ಹೇಳಲಾಗಿದೆ.

ವಿಡಿಯೋವನ್ನು ಎ ಪೀಸ್​ ಆಫ್​ ನೇಚರ್​ ಹೆಸರಿನ ಟ್ವಿಟರ್​ನಲ್ಲಿ ಭಾನುವಾರ ಪೋಸ್ಟ್​ ಮಾಡಲಾಗಿದ್ದು, 1 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿ ತಮ್ಮ ಅಭಿಪ್ರಾಯಗಳನ್ನು ಕಾಮೆಂಟ್​ ಮೂಲಕ ತಿಳಿಸುತ್ತಿದ್ದಾರೆ.

ಯಾಕೆ ಆ ಹುಲಿ ತನ್ನ ಮರಿಗಳನ್ನು ಬೇರೆ ಮಾಡಿತು ಎನ್ನುವ ಪ್ರಶ್ನೆಲಿ ನೀವಿದ್ದರೆ, ಇಲ್ಲಿದೆ ನೋಡಿ ಉತ್ತರ. ಹೆಣ್ಣು ಹುಲಿ ತನ್ನ ಮರಿಗಳನ್ನು ತ್ಯಜಿಸುವುದು ವಿಶೇಷ ಸಂಗತಿಯೇನಲ್ಲ. ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಎಲ್ಲಾ ಹುಲಿ ಸಂರಕ್ಷಿತ ಪ್ರದೇಶಗಳಿಗೆ ಅದರ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ ಕಿರುಪುಸ್ತಕದಲ್ಲಿ ಪಟ್ಟಿ ಮಾಡಿರುವಂತೆ ಹಲವು ಕಾರಣಗಳಿವೆ. ತಾಯಿ ಹುಲಿಯ ಸಾವಿನ ಹೊರತಾಗಿ, ಎನ್​ಟಿಎ ಮಾರ್ಗಸೂಚಿಗಳ ಪ್ರಕಾರ, ಮರಿಗಳು ದುರ್ಬಲವಾಗಿದ್ದರೆ, ಅಸಮರ್ಥವಾಗಿದ್ದರೆ, ಗಾಯಗೊಂಡರೆ ಅಥವಾ ಅನಾರೋಗ್ಯದಿಂದ ಕೂಡಿದ್ದರೆ ಅವುಗಳನ್ನು ತಾಯಿ ಹುಲಿ ತ್ಯಜಿಸುತ್ತದೆ. ಕೆಲವೊಂದು ಹೆಣ್ಣು ಹುಲಿಗಳು ಗಾಯದಿಂದಾಗಿ ಆಹಾರ ನೀಡಲು ಅಸಮರ್ಥತೆಯಿಂದಾಗಿ ತಮ್ಮ ಮರಿಗಳನ್ನು ಬಿಡುತ್ತವೆ ಎಂಬ ಮಾಹಿತಿ ತಿಳಿಸಿದೆ.

https://twitter.com/apieceofnature/status/1525717693004800000?s=20&t=WxjJ4aY8YClu69L70CQOHw

Leave A Reply

Your email address will not be published.