ಚಿನ್ನ ಖರೀದಿ ಮಾಡುವಿರೇ? ಹಾಗಾದರೆ ಇಂದಿನ ಚಿನ್ನ-ಬೆಳ್ಳಿ ದರ ಎಷ್ಟಿದೆ ಎಂದು ತಪ್ಪದೇ ಓದಿ!!!
ಇನ್ನು ಶುಭ ಕಾರ್ಯಕ್ರಮಗಳ ಸೀಜನ್, ಗೃಹ ಪ್ರವೇಶ, ಮದುವೆ, ನಿಶ್ಚಿತಾರ್ಥ ಹೀಗೆ ಅನೇಕ ಕಾರ್ಯಕ್ರಮಗಳು ಸಾಲು ಸಾಲಾಗಿ ಬರಲಿವೆ. ಈ ಸಂದರ್ಭದಲ್ಲಿ ಚಿನ್ನ, ಬೆಳ್ಳಿಯ ಖರೀದಿಯೂ ಭರ್ಜರಿಯಾಗೇ ಸಾಗುತ್ತಿದೆ. ಚಿನ್ನ ದುಬಾರಿಯಾದರೂ ಕೆಲವೊಮ್ಮೆ ಖರೀದಿಸಲೇಬೇಕಾದ ಅನಿವಾರ್ಯತೆ ಇರುತ್ತದೆ. ಇದು ಸ್ವಲ್ಪ ಜನ ಸಾಮಾನ್ಯರಿಗೆ ಬೇಸರ ನೀಡುವುದು ಖಂಡಿತ. ಹಾಗಾದರೆ ಬನ್ನಿ ತಿಳಿಯೋಣ ಇವತ್ತಿನ ಚಿನ್ನ ಬೆಳ್ಳಿ ದರ !
ಇಂದು ಮೇ 17 ಮಂಗಳವಾರ ಬೆಳಗಿನ ವೇಳೆಗೆ ದೇಶದಲ್ಲಿ 1 ಗ್ರಾಂ (24 ಕ್ಯಾರೆಟ್) ಬಂಗಾರದ ಬೆಲೆ 5,045 ರೂ. ದಾಖಲಾಗಿದೆ. ಬೆಂಗಳೂರಿನಲ್ಲಿಯೂ 1 ಗ್ರಾಂ (24 ಕ್ಯಾರೆಟ್)ಬಂಗಾರಕ್ಕೆ 5,045 ರೂಪಾಯಿ ನಿಗದಿಯಾಗಿದೆ.
ದೈನಂದಿನ ಬೆಲೆ ಪ್ರಕ್ರಿಯೆಯಲ್ಲಿ ಇಂದು ಬೆಳಗಿನ ವೇಳೆಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರೆಟ್) ಚಿನ್ನದ ಬೆಲೆಗೆ 46,250 ರೂಪಾಯಿ ನಿಗದಿಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರೆಟ್) ಬೆಲೆ 50,450 ರೂಪಾಯಿ ದಾಖಲಾಗಿದೆ.
ಇಂದು ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಹೀಗಿದೆ :
ಬೆಂಗಳೂರು : ರೂ.46,250 (22 ಕ್ಯಾರೆಟ್) 50,450 – (24 ಕ್ಯಾರೆಟ್)
ಚೆನ್ನೈ: ರೂ.47,440 (22 ಕ್ಯಾರೆಟ್) – ರೂ.51,740 (24ಕ್ಯಾರೆಟ್)
ದಿಲ್ಲಿ: ರೂ.46,250 (22 ಕ್ಯಾರೆಟ್) – ರೂ.50,450 (24 ಕ್ಯಾರೆಟ್
ಹೈದರಾಬಾದ್: ರೂ.46,250 (22 ಕ್ಯಾರೆಟ್) -ರೂ.50,450 (24 ಕ್ಯಾರೆಟ್)
ಕೋಲ್ಕತಾ: ರೂ.46,250 (22 ಕ್ಯಾರೆಟ್) -ರೂ.50,450 (24ಕ್ಯಾರೆಟ್)
ಮಂಗಳೂರು: ರೂ.46,250 (22 ಕ್ಯಾರೆಟ್) – ರೂ.50,450 (24 ಕ್ಯಾರೆಟ್)
ಮುಂಬಯಿ: ರೂ. 46,250 (22ಕ್ಯಾರೆಟ್)-ರೂ.50,450 (24 ಕ್ಯಾರೆಟ್)
ಮೈಸೂರು: ರೂ.46,250 (22 ಕ್ಯಾರೆಟ್) -ರೂ.50,450 (24 ಕ್ಯಾರೆಟ್)
ದೇಶದಲ್ಲಿ ಬೆಳ್ಳಿ ಬೆಲೆ ಒಂದು ಕೆಜಿಗೆ 59,400 ರೂಪಾಯಿ ದಾಖಲಾಗಿದೆ. ಬೆಂಗಳೂರಿನಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 64,500 ರೂ. ಇದೆ. ದೇಶಾದ್ಯಂತ ಕೆಲವು ನಗರಗಳನ್ನು ಹೊರತುಪಡಿಸಿ ಅನೇಕ ಕಡೆ ಬೆಳ್ಳಿ ಬೆಲೆಯಲ್ಲಿ ಏಕರೂಪವಿದೆ. ಚೆನ್ನೈ, ವಿಜಯವಾಡ, ಹೈದರಾಬಾದ್, ವಿಶಾಖಪಟ್ಟಣಂದಲ್ಲಿಯೂ 64,500 ರೂ. ನಿಗದಿಯಾಗಿದೆ.
ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಚಿನ್ನದ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಿಲ್ಲ, ಬೆಳ್ಳಿ ಬೆಲೆಯಲ್ಲಿ ಅನೇಕ ಕಡೆಗಳಲ್ಲಿ ಏರಿಕೆ ಕಂಡು ಬಂದಿದರೆ ಉಳಿದೆಡೆ ಏಕರೂಪವಿದೆ.