23 ಸಾವಿರ ಬೆಲೆಯ ವಿವೋ ಸ್ಮಾರ್ಟ್ ಫೋನ್ ಅನ್ನು ಕೇವಲ 3000 ರೂ. ಗೆ ಖರೀದಿಸಿ | ಅಮೆಜಾನ್ ಗ್ರಾಹಕರೇ ನಿಮಗಾಗಿ ಕಾದಿದೆ ಈ ಆಫರ್ !!

0 11

ಈಗ ಯಾರು ತಾನೇ ಸ್ಮಾರ್ಟ್ ಫೋನ್ ಬಳಸುವುದಿಲ್ಲ ಹೇಳಿ. ಎಲ್ಲರ ಕೈಯಲ್ಲೂ ಸ್ಮಾರ್ಟ್ ಫೋನ್ ರಾರಾಜಿಸುತ್ತಿರುತ್ತದೆ. ಮೊಬೈಲ್ ತಯಾರಕ ಕಂಪೆನಿಗಳಲ್ಲಿ Vivo ಅತ್ಯಂತ ಜನಪ್ರಿಯ ಸ್ಮಾರ್ಟ್‌ಫೋನ್ ಕೂಡ ಒಂದು. ವಿವೋ ಫೋನ್‌ಗಳನ್ನು ಕೂಡಾ ಬಹಳಷ್ಟು ಜನರು ಇಷ್ಟ ಪಟ್ಟು ಖರೀದಿಸುತ್ತಾರೆ. ಇದೀಗ Vivo Y53s ಸ್ಮಾರ್ಟ್‌ಫೋನ್ ಅನ್ನು ಭಾರೀ ರಿಯಾಯಿತಿ ದರದಲ್ಲಿ ಖರೀದಿಸಬಹುದು. ಈ ಸ್ಮಾರ್ಟ್‌ಫೋನ್ ಅನ್ನು 23 ಸಾವಿರ ರೂಪಾಯಿಗಳ ಬದಲು ಕೇವಲ 3 ಸಾವಿರ ರೂಪಾಯಿಗಳಿಗಿಂತ ಕಡಿಮೆ ಬೆಲೆಗೆ ಖರೀದಿಸಬಹುದಂತೆ!!

Vivo Y53s ಮೇಲೆ ಭಾರೀ ರಿಯಾಯಿತಿ :

Vivo Y53s, ಫೋನ್ ಅನ್ನು 22,990 ರೂ. ಬೆಲೆಯಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಭಾರತೀಯ ಆನ್‌ಲೈನ್ ಶಾಪಿಂಗ್ ಪ್ಲಾಟ್‌ಫಾರ್ಮ್ ಅಮೆಜಾನ್ ನಲ್ಲಿ ಈ ಫೋನ್ ಗೆ 27% ರಷ್ಟು ರಿಯಾಯಿತಿ ನೀಡಲಾಗುತ್ತಿದೆ, ಅಂದರೆ ಈ ರಿಯಾಯಿತಿ ನಂತರ ಈ ಫೋನ್ ಅನ್ನು 16,699 ರೂ.ಗೆ ಖರೀದಿಸಬಹುದು. ಇದನ್ನು ಖರೀದಿಸಲು ಬ್ಯಾಂಕ್ ಆಫ್ ಬರೋಡಾದ ಕ್ರೆಡಿಟ್ ಕಾರ್ಡ್ ಅನ್ನು ಬಳಸಿದರೆ, 1,500 ರೂಪಾಯಿಗಳವರೆಗೆ ಭಾರೀ ರಿಯಾಯಿತಿ ಸಿಗುತ್ತದೆ. ಇದಾದ ನಂತರ ಈ ಫೋನ್‌ನ ಬೆಲೆ 15,199 ರೂ. ಆಗುತ್ತದೆ.

Vivo Y53sನ ಈ ಡೀಲ್‌ನಲ್ಲಿ ವಿನಿಮಯ ಕೊಡುಗೆಯನ್ನು ಸಹ ನೀಡಲಾಗುತ್ತಿದೆ. ನಿಮ್ಮ ಹಳೆಯ ಸ್ಮಾರ್ಟ್‌ಫೋನ್‌ಗೆ ಬದಲಾಗಿ ಈ ಫೋನ್ ಅನ್ನು ಖರೀದಿಸಿದರೆ 12,300 ರೂ. ವರೆಗೆ ಉಳಿಸಬಹುದು. ಈ ವಿನಿಮಯ ಕೊಡುಗೆಯ ಸಂಪೂರ್ಣ ಪ್ರಯೋಜನವನ್ನು ಪಡೆಯುವುದು ಸಾಧ್ಯವಾದರೆ, ಈ ಸ್ಮಾರ್ಟ್‌ಫೋನ್ ಅನ್ನು 15,199 ರೂ. ಬದಲಿಗೆ 2,899 ರೂಪಾಯಿಗೆ ಖರೀದಿಸಲು ಸಾಧ್ಯವಾಗುತ್ತದೆ. ಈ ಮೂಲಕ ನೀವು 23 ಸಾವಿರ ಮೌಲ್ಯದ Vivo Y53 ಅನ್ನು Amazonನಿಂದ 2,899 ರೂ.ಗೆ ಪಡೆಯಬಹುದು.

Vivo Y53s ನ ವೈಶಿಷ್ಟ್ಯಗಳು :

Vivo Y53s 5G ಸ್ಮಾರ್ಟ್‌ಫೋನ್ ಆಗಿದ್ದು, ಇದರಲ್ಲಿ 6.58-ಇಂಚಿನ FHD + ಡಿಸ್‌ಪ್ಲೇ ಮತ್ತು 2408 x 1080 ಪಿಕ್ಸೆಲ್‌ಗಳ ರೆಸಲ್ಯೂಶನ್ ಸಿಗಲಿದೆ. 8GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಹೊಂದಿರುವ ಈ ಸ್ಮಾರ್ಟ್‌ಫೋನ್‌ನಲ್ಲಿ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ನೀಡಲಾಗಿದೆ. ಇದರ ಮೇನ್ ಸೆನ್ಸಾರ್ 64MP ಮತ್ತು ಇತರ ಎರಡು ಸಸೆನ್ಸಾರ್ 2-2MP. Vivo Y53s 5000mAh ಬ್ಯಾಟರಿ ಮತ್ತು 18W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಇದರ ಆಪರೇಟಿಂಗ್ ಸಿಸ್ಟಮ್ ಆಂಡ್ರಾಯ್ಡ್ 11 ಮತ್ತು ಇದು ಹೆಲಿಯೊ ಜಿ 80 ಆಕ್ಟಾ-ಕೋರ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

Leave A Reply