ಕಾರು ಡ್ರೈವಿಂಗ್ ಮಾಡುತ್ತಿರುವಾಗಲೇ ಮೂರ್ಛೆ ಹೋದ ಮಹಿಳೆ !! | ಮುಂದೇನಾಯ್ತು ಗೊತ್ತಾ !??

ರಸ್ತೆಯಲ್ಲಿ ಏನಾದರು ಅಪಘಾತ ಸಂಭವಿಸಿದಾಗ, ಸಾಮಾನ್ಯವಾಗಿ ನಾಗರಿಕರು ತಕ್ಷಣ ಸಹಾಯಕ್ಕಾಗಿ ಮುಂದೆ ಬರುತ್ತಾರೆ. ಎಷ್ಟೋ ಸಲ ಅಪಘಾತ ಸಂಭವಿಸಲು ಕಾರಣ ಏನೆಂಬುದೇ ತಿಳಿಯುವುದಿಲ್ಲ. ಅಂತೆಯೇ ಇಲ್ಲಿ ಮಹಿಳೆಯೊಬ್ಬರು ಕಾರು ಚಾಲನೆ ಮಾಡುತ್ತಿರುವಂತೆಯೇ ಪ್ರಜ್ಞೆ ಕಳೆದುಕೊಂಡಿದ್ದಾರೆ. ಹಾಗಾದ್ರೆ ಮುಂದೇನಾಯಿತು??

ಹೌದು. ಕಾರು ಚಾಲನೆ ಮಾಡುತ್ತಿದ್ದ ಮಹಿಳೆಯೊಬ್ಬರು ಏಕಾಏಕಿ ಪ್ರಜ್ಞಾಹೀನರಾಗಿದ್ದರು. ಕಾರು ಮಾತ್ರ ಹಾಗೆಯೇ ಚಲಿಸುತ್ತಲೇ ಇತ್ತು. ಸಿಗ್ನಲ್ ಬಿದ್ದಾಗಲೂ ಕಾರು ನಿಲ್ಲದೆ ಅಡ್ಡಾದಿಡ್ಡಿಯಾಗಿ ಚಲಿಸಿದೆ. ಮೊದಲಿಗೆ ಏನಾಗುತ್ತಿದೆ ಎನ್ನುವುದು ಅಲ್ಲಿದ್ದವರಿಗೆ ತಿಳಿಯಲಿಲ್ಲ. ನಂತರ ಮಹಿಳೆಯ ಸಹಾಯಕ್ಕೆ ಸಾರ್ವಜನಿಕರು ಆಗಮಿಸಿದ್ದಾರೆ. ಈ ದೃಶ್ಯದ ವೀಡಿಯೋ ಈಗ ವೈರಲ್ ಆಗಿದೆ.

ವೀಡಿಯೋದಲ್ಲೇನಿದೆ??

ಟ್ರಾಫಿಕ್ ಸಿಗ್ನಲ್ ಬಿದ್ದ ನಂತರವೂ ಕಾರು ನಿಧಾನವಾಗಿ ಚಲಿಸುತ್ತಿರುವುದನ್ನು ವೀಡಿಯೋದಲ್ಲಿ ಗಮನಿಸಬಹುದು. ಆದರೆ ಆ ಕಾರು ಯಾವ ದಿಕ್ಕಿನತ್ತ ಹೋಗುತ್ತಿದೆ ಎನ್ನುವುದನ್ನು ಕಂಡ ಸಾರ್ವಜನಿಕರಿಗೆ ಮೊದಲು ಆಶ್ಚರ್ಯವಾಗಿದೆ. ನಂತರ ಆ ಕಾರನ್ನು ಚಲಾಯಿಸುತ್ತಿದ್ದ ಮಹಿಳೆ ಪ್ರಜ್ಞೆ ಕಳೆದುಕೊಂಡಿರುವುದನ್ನು ಅಲ್ಲಿದ್ದ ಜನರು ಗಮನಿಸಿ, ತಕ್ಷಣ ಕಾರು ನಿಲ್ಲಿಸಲು ವಿವಿಧ ರೀತಿಯಲ್ಲಿ ಪ್ರಯತ್ನಿಸಿದ್ದಾರೆ. ಅದೃಷ್ಟವಶಾತ್ ಕಾರು ಹೋಗುತ್ತಿದ್ದ ದಿಕ್ಕಿನಿಂದ ಯಾವುದೇ ವಾಹನ ಅತಿವೇಗದಲ್ಲಿ ಬಾರದೆ ಇದ್ದ ಕಾರಣ ಯಾವುದೇ ರೀತಿಯ ಅನಾಹುತ ಸಂಭವಿಸಿಲ್ಲ.

ಇನ್ನು ಕಾರನ್ನು ನಿಲ್ಲಿಸುವ ಮತ್ತು ಮಹಿಳೆಯನ್ನು ರಕ್ಷಿಸುವ ಸಲುವಾಗಿ ವ್ಯಕ್ತಿಯೊಬ್ಬರು ಕಾರಿನ ಕಿಟಕಿ ಗಾಜನ್ನು ಒಡೆದಿದ್ದಾರೆ. ನಂತರ ಕಾರಿನಿಂದ ಮಹಿಳೆಯನ್ನು ಹೊರ ತೆಗೆದು ವೈದ್ಯಕೀಯ ನೆರವು ನೀಡಲಾಗಿದೆ. ಆ ಮಹಿಳೆಯನ್ನು ಲಾರಿ ರಾಬಿಯರ್ ಎಂದು ಗುರುತಿಸಲಾಗಿದೆ.

ಅಧಿಕ ರಕ್ತದೊತ್ತಡದ ಮಾತ್ರೆ ಮತ್ತು ವೈದ್ಯಕೀಯ ಪ್ರೊಸೀಜರ್ ಹಿನ್ನೆಲೆಯಲ್ಲಿ ಖಾಲಿ ಹೊಟ್ಟೆಯಲ್ಲಿ ಇದ್ದರು. ಆ ಕಾರಣದಿಂದ ಮಹಿಳೆಗೆ ತಲೆ ಸುತ್ತು ಬಂದು ಮೂರ್ಛೆ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ  ವೇಳೆ ಮಹಿಳೆಯ ಸಹಾಯಕ್ಕೆ ಬಂದ ಎಲ್ಲರಿಗೂ ಪೊಲೀಸರು ಧನ್ಯವಾದ ಕೂಡ ಹೇಳಿದ್ದಾರೆ.

Leave A Reply

Your email address will not be published.