ಅಡುಗೆ ಮಾಡುವಾಗ ಮೆಣಸಿನಕಾಯಿ ಖಾರದಿಂದ ಬಚಾವಾಗಲು ಪ್ರಯತ್ನಿಸುತ್ತಿದ್ದೀರಾ !?? | ಕೈ ಉರಿಯನ್ನು ಆದಷ್ಟು ಬೇಗ ಓಡಿಸಲು ಈ ಟಿಪ್ಸ್ ಫಾಲೋ ಮಾಡಿ
ಅಡುಗೆಯ ರುಚಿ ಹೆಚ್ಚಲು ಕೈ ಗುಣ ಬೇಕು ಎನ್ನುತ್ತಾರೆ. ಯಾಕಂದ್ರೆ ಅಡುಗೆ ಒಂದು ವಿದ್ಯೆ ತರ. ಇದರಲ್ಲಿ ಎಲ್ಲರೂ ಉತ್ತೀರ್ಣರಾಗಲು ಸಾಧ್ಯವಿಲ್ಲ. ಎಷ್ಟೇ ಪ್ರಯತ್ನ ಪಟ್ಟರೂ ಕೆಲವೊಂದು ಬಾರಿ ಒಳ್ಳೆಯ ರುಚಿ ತರಿಸಲು ಸಾಧ್ಯವೇ ಆಗುವುದಿಲ್ಲ. ಹೀಗೆ ಅಡುಗೆ ಅಂದ್ರೆ ರುಚಿ ಅನ್ನೋದೊಂದೇ ಎಲ್ಲರ ಮನಸ್ಸಿಗೆ ಮೂಡುವಂತದ್ದು, ಆದ್ರೆ ಇದರ ಹಿಂದೆ ಗೃಹಿಣಿಯರ ಕಷ್ಟ ಅನುಭವಿಸಿದವರಿಗೆ ಗೊತ್ತು ಅಲ್ವಾ!?
ಹೌದು. ನೂರಾರು ಸಮಸ್ಯೆಗಳ ನಡುವೆ ನಾವು ಹೇಳಲು ಹೊರಟಿರೋದು, ಅಡುಗೆಯ ಕಿಂಗ್ ಎಂದೇ ಹೇಳಬಹುದಾದ ಮೆಣಸಿನಕಾಯಿ ನೀಡೋ ಕಷ್ಟ. ರುಚಿ- ರುಚಿಯಾಗಿ ಅಡುಗೆ ತಯಾರಾಗ ಬೇಕಾದರೆ ಖಾರ ಇದ್ರೇನೆ ಅದಕ್ಕೊಂದು ಟೇಸ್ಟ್ ಯೇ ಬೇರೆ. ಹೀಗಾಗಿ ಅಡುಗೆ ಮಾಡುವಾಗ ಖಾರಕ್ಕಾಗಿ ಮೆಣಸಿನಕಾಯಿಯನ್ನು ಬಳಸುತ್ತೇವೆ. ಆದರೆ ಇದು ತುಂಬಾ ಖಾರವಿರುವುದರಿಂದ ಇದನ್ನು ಕತ್ತರಿಸಿದಾಗ ಕೈಗಳು ಉರಿಯುತ್ತದೆ.
ಅದೆಷ್ಟೋ ಜನ ಈ ಮೆಣಸಿನಕಾಯಿ ಕಾಯಿಯ ಉರಿಯಿಂದ ತಪ್ಪಿಸಿಕೊಳ್ಳಲು ಪರದಾಡೋದು ಉಂಟು. ಕೆಲವೊಂದಷ್ಟು ಜನ ಅದೇ ಕೈಗಳಿಂದ ಮೂಗು, ಬಾಯಿ, ಕಣ್ಣುಗಳನ್ನು ಮುಟ್ಟಿ ಉರಿಬರಿಸಿಕೊಂಡವರೂ ಇದ್ದಾರೆ. ಅಂತವರಿಗಾಗಿ ಈ ಉರಿಯನ್ನು ಕಡಿಮೆ ಮಾಡಲು ಈ ಟಿಪ್ಸ್ ಫಾಲೋ ಮಾಡಿ.
*ಅಲೋವೆರಾ ಜೆಲ್ ಬಳಕೆ : ಇದರಿಂದ ಮೆಣಸಿನಕಾಯಿ ಉರಿಯನ್ನು ಕಡಿಮೆ ಮಾಡಿಕೊಳ್ಳಬಹುದು. ಇದನ್ನು ಕೈಗೆ ಹಚ್ಚಿ 2 ನಿಮಿಷಗಳ ಕಾಲ ಮಸಾಜ್ ಮಾಡಿ. ಇದರಿಂದ ಕೈಗಳಲ್ಲಿ ಕಂಡುಬಂದ ಸುಡುವ ವೇದನೆ ಕಡಿಮೆಯಾಗುತ್ತದೆ.
*ಮೊಸರು , ಬೆಣ್ಣೆ ಅಥವಾ ಹಾಲಿನ ಬಳಕೆ : ಮೆಣಸಿನ ಕಾಯಿ ಕತ್ತರಿಸಿ ಕೈಯಲ್ಲಿ ಸುಡುವ ವೇದನೆ ಕಾಡಿದರೆ ನಿಮ್ಮ ಕೈಗಳನ್ನು ಮೊಸರಿನಿಂದ ಅಥವಾ ಹಾಲಿನಿಂದ ಅಥವಾ ಬೆಣ್ಣೆಯಿಂದ ಮಸಾಜ್ ಮಾಡಿ. ಬಳಿಕ ನೀರಿನಿಂದ ವಾಶ್ ಮಾಡಿ.
*ಜೇನುತುಪ್ಪ ಬಳಕೆ : ಮೆಣಸಿನಕಾಯಿಯಿಂದ ಕೈಗಳು ಸುಡುತ್ತಿದ್ದರೆ ಜೇನುತುಪ್ಪವನ್ನು ಹಚ್ಚಿ. ಇದು ಉರಿಯನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿದೆ. ಬಳಿಕ ನೀರಿನಿಂದ ಕೈಗಳನ್ನು ತೊಳೆಯಿರಿ.
- ಮಂಜುಗಡ್ಡೆ ಬಳಕೆ : ಮೆಣಸಿನಕಾಯಿ ಕತ್ತರಿಸಿ ಕೈಗಳು ಉರಿಯುತ್ತಿದ್ದರೆ ಕೈಗಳಿಗೆ ಐಸ್ ಕ್ಯೂಬ್ ನಿಂದ ಮಸಾಜ್ ಮಾಡಿ. ಇದರಿಂದ ಉರಿ ತಕ್ಷಣ ಕಡಿಮೆಯಾಗುತ್ತದೆ.