‘ರಸ್ತೆ ಅಪಘಾತ ಸಂತ್ರಸ್ತರ ರಕ್ಷಣೆ’ ಗೆ ನೆರವಾದರೆ 5000 ಕ್ಯಾಶ್ ಪ್ರೈಸ್ ಜೊತೆಗೆ ಪ್ರಮಾಣಪತ್ರ : ಕೇಂದ್ರ ಸರ್ಕಾರ ದಿಂದ ಮಹತ್ವದ ಯೋಜನೆ!!!
ರಸ್ತೆ ಅಪಘಾತಕ್ಕೊಳಗಾದ ಸಂತ್ರಸ್ತರನ್ನ
ರಕ್ಷಿಸಲು ಕೇಂದ್ರ ಸರ್ಕಾರದ ಮಹತ್ವದ ಹೆಜ್ಜೆಯಿಟ್ಟಿದೆ. ಇದರ ಅನುಸಾರವಾಗಿ ಜೀವ ರಕ್ಷಕರಿಗೆ ನಗದು ಹಣದ ಜೊತೆಗೆ ಪ್ರಮಾಣಪತ್ರ ನೀಡಲು ಮುಂದಾಗಿದೆ.ಇದರ ಮೂಲಕ ರಸ್ತೆ ಅಪಘಾತಕ್ಕೊಳಗಾದ ವ್ಯಕ್ತಿಗಳನ್ನ ಆಸ್ಪತ್ರೆಗೆ ಸೇರಿಸುವ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯಮಟ್ಟದಲ್ಲಿ ಜೀವ ರಕ್ಷಕರಿಗೆ ನಗದು ಪ್ರಶಸ್ತಿ ನೀಡಲು ಸರ್ಕಾರ ಯೋಜಿಸಿದೆ.
ಅಪಘಾತ ನಡೆದ ಸ್ಥಳದಲ್ಲಿ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲು ಪ್ರೇರೆಪಿಸುವ ಉದ್ದೇಶದಿಂದ ನಗದು ಪ್ರಶಸ್ತಿ ನೀಡಲು ಸರ್ಕಾರ ಮುಂದಾಗಿದ್ದು, ಜೀವರಕ್ಷಕ ಆಯ್ಕೆಗಾಗಿ ರಾಜ್ಯಮಟ್ಟದಲ್ಲಿ ಪರಿಶೀಲನಾ ಸಮಿತಿ ರಚನೆ ಮಾಡಲಾಗುವುದು. ಈ ಮೌಲ್ಯಮಾಪನ ಸಮಿತಿಗಳನ್ನ ಜಿಲ್ಲಾಮಟ್ಟಗಳಲ್ಲಿ ರಚನೆಯಾಗಲಿದ್ದು, ಈ ಜಿಲ್ಲಾ ಮೌಲ್ಯಮಾಪನ ಸಮಿತಿಗಳನ್ನ ಡಿಸಿಗಳ ಅಧ್ಯಕ್ಷತೆಯಲ್ಲಿ ರಚನೆ ಮಾಡಲಾಗುವುದು.
ಅಂದ್ದಾಗೆ, ಜೀವರಕ್ಷಕರಿಗೆ 5000 ರೂಪಾಯಿ ನಗದು ಪ್ರಶಸ್ತಿ ಮತ್ತು ಪ್ರಮಾಣಪತ್ರ ನೀಡಿಕೆಗಾಗಿ ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಮಾರ್ಗಸೂಚಿ ಪ್ರಕಟಿಸಿದೆ. ಅದ್ರಂತೆ, ಮಾರ್ಗಸೂಚಿಯಂತೆ ರಾಜ್ಯ ಮಟ್ಟದಲ್ಲಿ ಪರಿಶೀಲನಾ ಸಮಿತಿ ರಚನೆ ಮಾಡಲಾಗುವುದು. ಅಂದ್ದಾಗೆ, ಈ ಯೋಜನೆ 2026 ಮಾರ್ಚ್ 31ರವರೆಗೂ ಜಾರಿಯಲ್ಲಿರಲಿದೆ.