ವಿಟ್ಲ : ಅಪಘಾತದ ವಿಚಾರದಲ್ಲಿ ತಗಾದೆ | ಹಿಂದೂ ಯುವಕನ ಕೊಲೆ ಯತ್ನ,ಪರಿಸ್ಥಿತಿ ಚಿಂತಾಜನಕ

Share the Article

ವಿಟ್ಲ: ಕುದ್ದುಪದವಿನಲ್ಲಿ ಲಾರಿ ಗುದ್ದಿಕೊಂಡು ಹೋದ ವಿಚಾರವಾಗಿ ಹಲ್ಲೆಗೊಳಗಾದ ರಕ್ಷಿತ್ ಪರಿಸ್ಥಿತಿ ಚಿಂತಾಜನಕವಾಗಿದ್ದು, ತಲೆಗೆ ಗಂಭೀರ ಗಾಯಗೊಂಡಿರುವ ಅವರು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆಪಡೆಯುತ್ತಿದ್ದಾರೆ.

ರಕ್ಷಿತ್ ಎಂಬವರು ಅಡ್ಯನಡ್ಕದಿಂದ ಮೈರದಲ್ಲಿರುವ ತನ್ನ ಮನೆಗೆ ಹೋಗುತ್ತಿದ್ದ ಸಂದರ್ಭದಲ್ಲಿ ಕರವೀರ ಬಸ್ ಸ್ಟಾಂಡ್ ಬಳಿ ಈ ಘಟನೆ ಸಂಭವಿಸಿದ್ದು, ತಲವಾರು ಹಾಗೂ ರಾಡ್ ಗಳಿಂದ ಹಲ್ಲೆ ನಡೆಸಿದ್ದಾರೆ.

ಇದೇ ಸಂದರ್ಭದಲ್ಲಿ ಗಿರೀಶ್ ಎಂಬವರು ಈ ದಾರಿಯಿಂದ ಸಂಬಂಧಿಕರ ಮನೆಗೆ ತೆರಳುತ್ತಿದ್ದು ರಸ್ತೆಯಲ್ಲಿ ಹಲ್ಲೆ ನಡೆಯುತ್ತಿರುವುದು ಕಂಡು ಆಟೋ ನಿಲ್ಲಿಸಿ ಬೊಬ್ಬೆ ಹೊಡೆದಾಗ ಆರೋಪಿಗಳು ಪರಾರಿಯಾಗಿದ್ದಾರೆ. ಗಂಭೀರ ಗಾಯಗೊಂಡ ರಕ್ಷಿತ್ ಅವರನ್ನು ಎತ್ತಿ ಆಟೋದಲ್ಲಿ ಹಾಕುವ ವೇಳೆ ಗಿರೀಶ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.

ಗಿರೀಶ್ ಅವರು ಆರೋಪಿಗಳ ವಿರುದ್ಧ ದೂರು ನೀಡಿದ್ದು, ಉಕ್ಕುಡ ದರ್ಬೆಯ ಸಿದ್ದಿಕ್, ಜಾಬೀರ್, ಆಶ್ರಫ್ ಹಲ್ಲೆ ನಡೆಸಿರುವ ದುಷ್ಕರ್ಮಿಗಳೆಂದು ತಿಳಿಸಿದ್ದಾರೆ. ವಿಟ್ಲ ಪೊಲೀಸರು ಫಾದರ್ ಮುಲ್ಲರ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

Leave A Reply