ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪಠ್ಯಕ್ರಮದ ಭಾಗವಾಗಲಿದೆ ವೇದ, ಪುರಾಣ

ನವದೆಹಲಿ: ಭಾರತೀಯ ಜ್ಞಾನ ವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ, ಇಂಜಿನಿಯರಿಂಗ್ ವಿದ್ಯಾರ್ಥಿಗಳ ಪಠ್ಯ ಕ್ರಮದಲ್ಲಿ ವೇದ, ಪುರಾಣಗಳನ್ನು ಸೇರ್ಪಡೆಗೊಳಿಸುವ ನಿರ್ಧಾರ ಕೈಗೊಂಡಿದೆ.

ಇಂಡಿಯನ್ ನಾಲೆಡ್ಜ್ ಸಿಸ್ಟಮ್ (ಐಕೆಎಸ್) ಮೇಲಿನ ನಾನ್ ಕ್ರೆಡಿಟ್ ಕೋರ್ಸ್ ನ್ನು ಕಡ್ಡಾಯಗೊಳಿಸಲಾಗಿದ್ದು, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಪಠ್ಯಪುಸ್ತಕಗಳನ್ನು ಸೋಮವಾರ ಬಿಡುಗಡೆಗೊಳಿಸಲಿದ್ದಾರೆ. ವೇದ, ಪುರಾಣ, ಸಂಸ್ಕೃತ, ಪುರಾತನ ವಿಜ್ಞಾನ, ಇಂಜಿನಿಯರಿಂಗ್, ಖಗೋಳಶಾಸ್ತ್ರ, ನಗರ ಯೋಜನೆ ಹಾಗೂ ಇಂಜಿನಿಯರಿಂಗ್ ಹಾಗೂ ವಿಜ್ಞಾನ ವಿದ್ಯಾರ್ಥಿಗಳ ವಾಸ್ತುಶಿಲ್ಪ ವಿಷಯಗಳು ಇಂಜಿನಿಯರ್ ಪಠ್ಯದ ಭಾಗವಾಗಿರಲಿದೆ.

ಇದು ಭಾರತೀಯ ಜ್ಞಾನ ವ್ಯವಸ್ಥೆ (IKS)ಗೆ ಹೆಚ್ಚು ಒತ್ತು ನೀಡುವುದರಿಂದ , ರಾಷ್ಟ್ರೀಯ ಶಿಕ್ಷಣ ನೀತಿಯ ಭಾಗವಾಗಿರಲಿದೆ. ಐಕೆಎಸ್ ಗೆ ಸಂಬಂಧಿಸಿದ ಕಡ್ಡಾಯ ನಾನ್ ಕ್ರೆಡಿಟ್ ಕೋರ್ಸ್ ನ್ನು ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್-2018 ರಲ್ಲಿ ಘೋಷಿಸಿತ್ತು. ಆದರೆ, ಈ ಕೋರ್ಸ್ ನ್ನು ಪ್ರಾರಂಭಿಸಲಾಗಿತ್ತಾದರೂ ಆ ನಂತರದಲ್ಲಿ ಐಕೆಎಸ್ ಗೆ ಸಂಬಂಧಿಸಿದ ಉತ್ತಮ ಸಂಶೋಧನೆಯನ್ನೊಳಗೊಂಡ ಅಧಿಕೃತ ಪಠ್ಯಗಳು ಲಭ್ಯವಿರಲಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು.

ಇದೀಗ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂ ಆಫ್ ಮ್ಯಾನೇಜ್ಮೆಂಟ್, ಎಸ್ ವಿವೈಎಎಸ್‌ಎ ಯೋಗ ಇನ್ಸ್ಟಿಟ್ಯೂಟ್ ಹಾಗೂ ಚಿನ್ಮಯ ವಿಶ್ವ ವಿದ್ಯಾಪೀಠ, ಎರ್ನಾಕುಲಮ್ ನ ಸಹಯೋಗದಲ್ಲಿ (ಐಐಎಂ) ಹೊಸ ಪಠ್ಯಕ್ರಮವನ್ನು ಅಭಿವೃದ್ಧಿಪಡಿಸಿದೆ.

Leave A Reply

Your email address will not be published.