ಆಕಾಶದಿಂದ ದೊಪ್ಪನೆ ಬಿತ್ತು ಲೋಹದ ಚೆಂಡುಗಳು !! | 3 ಗ್ರಾಮಗಳಲ್ಲಿ ಕಂಪಿಸಿದ ಭೂಮಿ, ಜೀವಭಯದಿಂದ ಹೊರಗೋಡಿ ಬಂದ ಜನ

ಭೂಮಿಯಲ್ಲಿ ಒಮ್ಮೊಮ್ಮೆ ವಿಚಿತ್ರ ಘಟನೆಗಳು ಸಂಭವಿಸುತ್ತಿರುತ್ತವೆ. ಅಂತೆಯೇ ಇಲ್ಲಿ ಒಮ್ಮಿಂದೊಮ್ಮೆಲೆ ಜನರನ್ನು ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. ಆಕಾಶದಿಂದ ಚೆಂಡಿನಾಕಾರದ ಕಪ್ಪು ಲೋಹದ ವಸ್ತುವೊಂದು ನೆಲಕ್ಕೆ ಅಪ್ಪಳಿಸಿದ್ದು, ಗುಜರಾತ್‌ನ ಆನಂದ್ ಜಿಲ್ಲೆಯ ಜನರು ಜೀವಭಯದಿಂದ ಮನೆಯಿಂದ ಹೊರಗೋಡಿ ಬಂದಿದ್ದಾರೆ.

 

ಲೋಹದ ವಸ್ತು ಬಿದ್ದ ರಭಸಕ್ಕೆ ಇಲ್ಲಿನ 3 ಗ್ರಾಮಗಳಲ್ಲಿ ಭೂಮಿ ಕಂಪಿಸಿದ್ದು, ಶಬ್ಧದಿಂದ ಉಂಟಾದ ಭಯಕ್ಕೆ ಸ್ಥಳೀಯರು ಲೋಹ ಬಿದ್ದ ಸ್ಥಳಕ್ಕೆ ಓಡೋಡಿ ಬಂದಿದ್ದಾರೆ. ಈ ಕುರಿತು ತನಿಖೆ ನಡೆಸಲು ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರನ್ನು ಕರೆಸಿದ್ದು ಅವರು, ಸ್ಥಳದಲ್ಲಿ ಬಿದ್ದ ವಸ್ತುವನ್ನು ಉಲ್ಕಾಶಿಲೆ (ಉಪಗ್ರಹದ ಅವಶೇಷ) ಎಂದು ಶಂಕಿಸಿದ್ದಾರೆ. ಈ ಲೋಹದ ವಸ್ತುವನ್ನು ಗುರುತ್ವಾಕರ್ಷಣೆಯ ಅನುಪಸ್ಥಿತಿಯಲ್ಲಿ ಬಾಹ್ಯಾಕಾಶದಲ್ಲಿ ಉಪಗ್ರಹದ ಆವೇಗವನ್ನು ಕಾಪಾಡಿಕೊಳ್ಳಲು ಬಳಸುವ ಬಾಲ್ ಬೇರಿಂಗ್‌ಗಳು ಎಂದು ತೋರುತ್ತದೆ ಎಂದು ಹೇಳಿದ್ದಾರೆ.

ಆನಂದನಗರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಈ ಕುರಿತು ಮಾಹಿತಿ ನೀಡಿದ್ದು, ಬಾಹ್ಯಾಕಾಶದಿಂದ ನೆಲಕ್ಕೆ ಚೆಂಡಿನಂತಹ ವಸ್ತುಗಳು ಅಪ್ಪಳಿಸಿದ್ದು, ಗ್ರಾಮಸ್ಥರಿಗೆ ಭೂಕಂಪದ ಭೀತಿ ಆವರಿಸಿತ್ತು. ನಿನ್ನೆ ಸಂಜೆ 4:45ರ ಸುಮಾರಿಗೆ, 5 ಕೆಜಿ ತೂಕದ ಮೊದಲ ದೊಡ್ಡ ಕಪ್ಪು ಲೋಹದ ಚೆಂಡು ಭಲೇಜ್‌ನಲ್ಲಿ ಬಿದ್ದಿತು ಮತ್ತು ನಂತರ ಖಂಭೋಲಾಜ್ ಮತ್ತು ರಾಂಪುರದಲ್ಲಿ ಬಿದ್ದಿತು. 3 ಸ್ಥಳಗಳು ಪರಸ್ಪರ 15 ಕಿಲೋಮೀಟರ್ ಪರಿಮಿತಿಯಲ್ಲಿದೆ. ಲೋಹದ ಚೆಂಡುಗಳು ಉಪಗ್ರಹಗಳ ಅವಶೇಷಗಳೆಂದು ತಜ್ಞರು ಶಂಕಿಸಿದ್ದು, ತನಿಖೆ ಮುಂದುವರಿದಿದೆ ಎಂದು ಹೇಳಿದ್ದಾರೆ.

ಮೊದಲ ಲೋಹದ ಚೆಂಡು ಸಂಜೆ 4.45 ರ ಸುಮಾರಿಗೆ ಬಿದ್ದಿತು. ಇದಾದ ಸ್ವಲ್ಪ ಸಮಯದಲ್ಲೇ ಬೇರೆ ಬೇರೆ ಸ್ಥಳಗಳಲ್ಲಿ ಇನ್ನೂ ಎರಡು ಚೆಂಡುಗಳು ಬಿದ್ದಿರುವುದು ತಿಳಿದು ಬಂದಿತು. ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ. ಒಂದು ಗ್ರಾಮದಲ್ಲಿ ಮನೆಗಳಿಂದ ದೂರ ಬಿದ್ದಿದ್ದರೆ, ಉಳಿದ ಎರಡರಲ್ಲಿ ತೆರೆದ ಪ್ರದೇಶದಲ್ಲಿ ಬಿದ್ದಿವೆ. ಇದು ಯಾವ ರೀತಿಯ ಬಾಹ್ಯಾಕಾಶ ಅವಶೇಷ ಎಂದು ನಮಗೆ ಖಚಿತವಾಗಿಲ್ಲ. ಆದರೆ ಗ್ರಾಮಸ್ಥರ ಪ್ರಕಾರ ಆಕಾಶದಿಂದ ಬಿದ್ದಿವೆ ಎಂದು ಕೇಳಿಬಂದಿದೆ ಎಂದು ಮಾಹಿತಿ ನೀಡಿದ್ದಾರೆ. ವಸ್ತುಗಳನ್ನು ಗುರುತಿಸಲು ನಾವು ಅಹಮದಾಬಾದ್ ಮತ್ತು ಗಾಂಧಿನಗರದಿಂದ ವಿಧಿವಿಜ್ಞಾನ ತಜ್ಞರನ್ನು ಕರೆಸಿದ್ದೇವೆ ಎಂದು ಹೇಳಿದ್ದಾರೆ.

ವರದಿಗಳ ಪ್ರಕಾರ, ಇಲ್ಲಿ ಹಿಂದೆಯೂ ಇಂತಹ ನಿಗೂಢ ಘಟನೆಗಳು ನಡೆದಿತ್ತು. ಈ ವರ್ಷ ಏಪ್ರಿಲ್‌ನಲ್ಲಿ ಮಹಾರಾಷ್ಟ್ರದಲ್ಲಿ `ಉಲ್ಕಾಶಿಲೆ’ ಆಕಾಶದಲ್ಲಿ ಕಾಣಿಸಿಕೊಂಡ ನಂತರ ಇದೇ ರೀತಿಯ ಘಟನೆ ಸಂಭವಿಸಿತ್ತು. ಏರೋಪ್ಲೇನ್‌ನಂತೆ ಸದ್ದು ಮಾಡಿದ ಶಬ್ದದ ನಂತರ ದೊಡ್ಡ ಸ್ಫೋಟ ಸಂಭವಿಸಿತ್ತು. ಆ ಉತ್ಕಾಶಿಲೆಯನ್ನು ನ್ಯೂಜಿಲೆಂಡ್‌ನಿಂದ ಉಡಾವಣೆಯಾದ ಉಪಗ್ರಹದ ತುಣುಕುಗಳು ಎಂದು ಮೂಲಗಳು ಖಚಿತಪಡಿಸಿದ್ದವು.

Leave A Reply

Your email address will not be published.