ಹಿಂದೂ ಶಿಕ್ಷಕಿಯ ಮೇಲೆ ಅತ್ಯಾಚಾರ.! ಮತಾಂತರ ಆದರೆ ಮಾತ್ರ ಮದುವೆ ಅಂತ ಕಂಡೀಶನ್ ಹಾಕಿದ ಅನ್ಯಕೋಮಿನ ಯುವಕ

ಇದೊಂದು ಅಮಾನವೀಯ ಘಟನೆ ಅಂತಾನೇ ಹೇಳಬಹುದು. ಡ್ರಾಪ್ ಕೊಡ್ತೀನಿ ಎಂದು ಶಿಕ್ಷಕಿಯನ್ನು ಅನ್ಯಕೋಮಿನ ಯುವಕ ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿ, ಮತ್ತು ಬರುವ ಔಷಧಿ ನೀಡಿ‌ ಅನಂತರ ಶಿಕ್ಷಕಿ ಮೇಲೆ ಅತ್ಯಾಚಾರ ಮಾಡಿದ ಘಟನೆಯೊಂದು ನಡೆದಿದೆ.

 

ಅನ್ಯಕೋಮಿನ ಯುವಕ ಪರಿಚಯಸ್ಥನೇ ಆಗಿದ್ದರಿಂದ ನಂಬಿದ ಹಿಂದೂ ಶಿಕ್ಷಕಿಯೂ ಈ ಮೂಲಕ ಮೋಸ ಹೋಗಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ಶಹಜಹಾಸ್ಪುರದಲ್ಲಿ ನಡೆದಿದೆ. ಪ್ರಕರಣದ ಆರೋಪಿ ಅಮೀರ್ ಎಂಬಾತನೇ ಈ ಕೃತ್ಯ ಮಾಡಿದವನು.

ಶಿಕ್ಷಕಿಯ ಮೇಲೆ ಅತ್ಯಾಚಾರ ಮಾಡಿದ್ದು ಮಾತ್ರವಲ್ಲದೇ, ಈ ಕೃತ್ಯವನ್ನ ತನ್ನ ಮೊಬೈಲ್‌ನಲ್ಲಿ ಚಿತ್ರಿಕರಣ ಕೂಡಾ ಮಾಡಿದ್ದಾನೆ. ಈ ಘಟನೆ ನಡೆದಿರುವುದು ಮೇ 4 ರಂದು. ಎಂದಿನಂತೆ ಶಿಕ್ಷಕಿ ಶಾಲಾ ಅವಧಿಯನ್ನ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದಾಗ ನಡೆದ ಘಟನೆ ಇದು. ಅದೇ ಗ್ರಾಮದ ಅಮೀರ್ ಶಿಕ್ಷಕಿಯನ್ನ ಮನೆಗೆ ಡ್ರಾಪ್ ಕೊಡುವುದಾಗಿ ಹೇಳಿದ್ದಾನೆ.

ಅಮೀರ್ ಪರಿಚಯದ ವ್ಯಕ್ತಿಯಾಗಿರುವುದರಿಂದ ಶಿಕ್ಷಕಿ ಕೂಡಾ ಹಿಂದೆ ಮುಂದೆ ನೋಡದೇ, ಆ ವ್ಯಕ್ತಿಯ ಜೊತೆ ಹೋಗಿದ್ದಾಳೆ. ಯಾರೂ ಇಲ್ಲದ ಸ್ಥಳಕ್ಕೆ ಆಕೆಯನ್ನ ಕರೆದುಕೊಂಡು ಹೋಗಿ, ಆ ವ್ಯಕ್ತಿ ಶಿಕ್ಷಕಿಗೆ ಮೂರ್ಛೆ ಹೋಗುವ ಔಷಧಿ ಮೂಗಿಗೆ ಹಿಡಿದು ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಮಾಡಿದ್ದಾನೆ.

28 ವರ್ಷದ ಶಿಕ್ಷಕಿಯನ್ನ ಅತ್ಯಾಚಾರ ಮಾಡಿದ ಆ ವ್ಯಕ್ತಿ ಕೆಲವರ ಸಹಾಯದಿಂದ ಅತ್ಯಾಚಾರ ಮಾಡಿದ್ದನ್ನು ಮೊಬೈಲ್‌ನಲ್ಲಿ ಚಿತ್ರೀಕರಣ ಮಾಡಿಕೊಂಡು, ಕೊನೆಗೆ ಮತಾಂತರ ಮಾಡಿಕೊಳ್ಳುವಂತೆ ಒತ್ತಾಯ ಮಾಡಿದ್ದಾನೆ. ಹಾಗೆ ಮತಾಂತರವಾದರೆ ಮಾತ್ರ ತಾನು ಮದುವೆ ಆಗುವುದಾಗಿ ಕಂಡೀಶನ್ ಬೇರೆ ಹಾಕಿದ್ದಾನೆ.

ಈಗ ಆರೋಪಿ ಅಮೀರ್ ಸೇರಿದಂತೆ ಐವರ ವಿರುದ್ಧ ಉತ್ತರ ಪ್ರದೇಶದ ಮತಾಂತರ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಪ್ರಕರಣದ ತನಿಖೆ ನಡೆಸಲಾಗುತ್ತಿದೆ.

Leave A Reply

Your email address will not be published.