ರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿ – ವರ್ಷಾಂತ್ಯಕ್ಕೆ ಕೇಂದ್ರಮಾದರಿ ವೇತನ

ಕಾರವಾರ : ರಾಜ್ಯ ಸರ್ಕಾರಿ ನೌಕರರಿಗೆ ಸಿಹಿಸುದ್ದಿ ದೊರಕ್ಕಿದ್ದು, ವರ್ಷಾಂತ್ಯಕ್ಕೆ ಸರ್ಕಾರಿ ನೌಕರರಿಗೆ ಕೇಂದ್ರಮಾದರಿ ವೇತನ ಕೊಡಿಸುವುದಾಗಿ ಹೇಳಿದ್ದಾರೆ.

 

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿಯವರು ಗಡಿನಾಡು ಕನ್ನಡ ಉತ್ಸವ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ್ದು, ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿ ವೇತನ ಜಾರಿಗೆ ಸಿಎಂ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ ಎಂದಿದ್ದಾರೆ.

ಮುಂದಿನ ವರ್ಷ ಹೊಸ ಪಿಂಚಣಿ ವ್ಯವಸ್ಥೆ ವಿಚಾರವನ್ನೂ ಗಂಭೀರವಾಗಿ ತೆಗೆದುಕೊಳ್ಳುತ್ತೇವೆ. ಈಗಾಗಲೇ ಎರಡು ಮೂರು ರಾಜ್ಯಗಳು ಎನ್ ಪಿ ಎಸ್ ರದ್ದು ಮಾಡಿವೆ. ಕರ್ನಾಟಕದಲ್ಲಿಯೂ ಎನ್ ಪಿಎಸ್ ತೆಗೆದು ಹಳೆ ಪಿಂಚಣಿ ವ್ಯವಸ್ಥೆ ಜಾರಿ ಮಾಡುತ್ತೇವೆ ಎಂದು ಹೇಳಿದ್ದಾರೆ.

Leave A Reply

Your email address will not be published.