ಕಲರ್ಸ್ ಕನ್ನಡ ವಾಹಿನಿ ಕಾಮಿಡಿ “ಗಿಚ್ಚಿ ಗಿಲಿಗಿಲಿ” ನಿರೂಪಕರಾದ ಬಿಗ್ ಬಾಸ್ ಮಂಜು ಮತ್ತು ರೀನಾ ಶೋನಿಂದ ಔಟ್ !!!

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ “ಗಿಚ್ಚಿ ಗಿಲಿಗಿಲಿ” ರಿಯಾಲಿಟಿ ಶೋ ಕಿರುತೆರೆ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ದಾಪುಗಾಲು ಇಡುತ್ತಿದೆ. ಈ ಕಾರ್ಯಕ್ರಮದ ನಿರೂಪಣೆ ಹೊತ್ತವರು ಬಿಗ್ ಬಾಸ್ ವಿನ್ನರ್ ಮಂಜು ಮತ್ತು ಸ್ಪೋರ್ಟ್ಸ್ ಆ್ಯಂಕರ್ ರೀನಾ ಡಿಸೋಜಾ. ಸಾಕಷ್ಟು ಮನರಂಜನೆ ನೀಡುತ್ತಿರುವ ಈ ಶೋನಿಂದ ಈಗ ಶಾಕಿಂಗ್ ಸುದ್ದಿ ಹೊರಬಿದ್ದಿದೆ. ಈ ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುತ್ತಿದ್ದ ರೀನಾ ಡಿಸೋಜಾ ಮತ್ತು ಮಂಜು ಶೋನಿಂದ ಹೊರನಡಿದ್ದಾರೆ.

 

ಈ ರಿಯಾಲಿಟಿ ಶೋ ಪ್ರಾರಂಭ ಆದಾಗಿಂದ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟುಹಾಕಿತ್ತು. ಅಲ್ಲದೇ ರೀನಾ ಮತ್ತು ಮಂಜು ಇಬ್ಬರು ನಿರೂಪಣೆ ಜವಾಬ್ದಾರಿ ವಹಿಸಿಕೊಂಡಿರುವುದರಿಂದ ಅಭಿಮಾನಿಗಳು ಇವರಿಂದ ಭಾರೀ ಮನರಂಜನೆ ನಿರೀಕ್ಷೆ ಮಾಡಿದ್ದರು.

ಆದರೀಗ ಶೋ ಅರ್ಧದಲ್ಲಿಯೇ ಇಬ್ಬರೂ ಹೊರ ನಡೆದಿದ್ದಾರೆ. ಅಂದಹಾಗೆ ಇವರಿಬ್ಬರ ಜಾಗಕ್ಕೆ ಮತ್ತೋರ್ವ ನಿರೂಪಕ ಎಂಟ್ರಿ ಕೊಟ್ಟಿದ್ದಾರೆ. ಅದು ಮತ್ಯಾರು ಅಲ್ಲ ನಿರಂಜನ್ ದೇಶಪಾಂಡೆ. ನಿರಂಜನ್ ಇನ್ಮುಂದೆ ಈ ಶೋ ನಡೆಸಿಕೊಡಲಿದ್ದಾರೆ. ಈಗಾಗಲೇ ಹೊಸ ಪ್ರೋಮೋ ಬಿಡುಗಡೆಯಾಗಿದ್ದು ನಿರಂಜನ್ ಅದ್ಭುತವಾಗಿ ನಿರೂಪಣೆ ಮಾಡಿದ್ದಾರೆ. ಅಂದಹಾಗೆ ಇದೇ ಶೋನಲ್ಲಿ ನಿರಂಜನ್ ಪತ್ನಿ ಯಶಸ್ವಿನಿ ಸ್ಪರ್ಧಿಯಾಗಿ ಭಾಗಿಯಾಗಿದ್ದಾರೆ. ಸದ್ಯ ಬದಲಾದ ನಿರೂಪಕರಿಂದ ಮತ್ತಷ್ಟು ಮನರಂಜನೆಯ ನಿರೀಕ್ಷೆಯಲ್ಲಿದ್ದಾರೆ ಪ್ರೇಕ್ಷಕರು.

ಹೊಸ ಕನ್ನಡ ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ

https://chat.whatsapp.com/FbPlbHZ3AZiBoOtzMVYNKY

ಅಂದ ಹಾಗೆ ಇಬ್ಬರು ಗಿಚ್ಚಿ ಗಿಲಿಗಿಲಿ ಶೋನಿಂದ ಬೇರೆ ಬೇರೆ ಕಮಿಂಟ್ ಮೆಂಟ್ ಕಾರಣದಿಂದ ಹೊರನಡೆಯಲಾಗಿದೆ ಎನ್ನಲಾಗಿದೆ. ಮಂಜು ಪಾವಗಡ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇನ್ನು ರೀನಾ ಡಿಸೋಜಾ ಸ್ಟಾರ್ ಸ್ಪೋರ್ಟ್ಸ್‌ ನಲ್ಲಿ ಬ್ಯುಸಿಯಾಗಿದ್ದಾರೆ.

Leave A Reply

Your email address will not be published.