ಬಿಬಿಎಂಪಿ ಕಸದ ಲಾರಿಗೆ ಮತ್ತೊಬ್ಬ ಬಲಿ

ನಗರದಲ್ಲಿ ಬಿಬಿಎಂಪಿ ಕಸದ ಲಾರಿ ಮತ್ತೊಂದು ಬಲಿ ಪಡೆದಿದೆ. ರೈಲ್ವೇ ಮೇಲ್ಸೇತುವೆ ಬಳಿ‌ ಘಟನೆ ನಡೆದಿದೆ.

 

ನಾಗವಾರದಿಂದ ಹೆಗ್ಗಡೆ ನಗರದ ಕಡೆಗೆ ಬೈಕ್​​ ಮೇಲೆ ಹೋಗುತ್ತಿದ್ದ ದೇವಣ್ಣನ ಮೇಲೆ ಬಿಬಿಎಂಪಿ‌ ಕಸದ ಲಾರಿ ಹರಿದಿದೆ. ಇದರ ಪರಿಣಾಮ ಡೆಲಿವರಿ ಬಾಯ್ ಸ್ಥಳದಲ್ಲೇ ಸಾವುನ್ನಪ್ಪಿರೋ ಘಟನೆ ಥಣಿಸಂದ್ರ ರೈಲ್ವೆ ಮೇಲ್ಸೇತುವೆ ಬಳಿ ಈ ಘಟನೆ ಸಂಭವಿಸಿದೆ.

ದೇವಣ್ಣ (25) ಮೃತ ದುರ್ದೈವಿ. ಈತ ಯಾದಗಿರಿಯ ಸುರಪುರ ಮೂಲದವ. ದೇವಣ್ಣ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಚಿಕ್ಕಜಾಲ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಬಿಬಿಎಂಪಿ ಕಸದ ಲಾರಿಗಳಿಗೆ ಇನ್ನೆಷ್ಟು ಬಲಿ ಬೇಕು ಎಂದು ಸಾರ್ವಜನಿಕರು ಹಿಡಿಶಾಪ ಹಾಕ್ತಿದ್ದಾರೆ.

Leave A Reply

Your email address will not be published.