‘ನೀ ನನ್ನ ಅಣ್ಣ’ ಅಂದ್ಬುಟ್ಲು ಸಾ. ಕೋಪ ಬಂತು ಸಾ. ಆಸಿಡ್ ಎರಚಿ ಬುಟ್ಟೆ. ಎಲ್ಲಾ ಒಪ್ಪಿದ್ರೆ ಈಗ್ಲೂ ಮದ್ವೆ ಆಗ್ತೀನ್ ಸಾ. | ಆಸಿಡ್ ನಾಗನ ಹೊಸ ಪರಿಚಯ

ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವಾಗಲೇ ನಾಗ ಪೊಲೀಸರ ಎದುರು ಒಂದೊಂದಾಗಿ ಕಥೆ ಬಿಚ್ಚಿಡುತ್ತಿದ್ದಾನೆ.
ಆತ ಬಂಧನದ ಬಳಿಕ ಪೊಲೀಸರ ಮುಂದೆ ಹೇಳಿಕೆ ದಾಖಲಿಸಿದ್ದು, ಆತ ನೀಡಿದ ಮಾಹಿತಿ ಕೇಳಿ ಆಸಿಡ್ ಪೊಲೀಸರೇ ಒಂದು ಕ್ಷಣ ಶಾಕ್ ಆಗಿದ್ದರು. ಆಸಿಡ್ ಹಾಕುವಾಗ ನಾಗೇಶ್ ಕೈಗೆ ಗಾಯ ಮಾಡಿಕೊಂಡಿದ್ದನು. ಗಾಯ ತನ್ನಿಂದ ತಾನೇ ಆಗಿತ್ತಾ, ಅಥವಾ ತಾನೇ ಅದ್ಯಾವುದೋ ಉದ್ದೇಶಕ್ಕೆ ಮಾಡಿಕೊಂಡನೋ ಗೊತ್ತಿಲ್ಲ. ಆದ್ರೆ ನಂತರ ತನ್ನ ಕೈ ನೋಡಿದಾಗಲೆಲ್ಲ ಯುವತಿ ಅಳೋದು ನೆನಪಾಗಬೇಕು ಎಂದು ಹೇಳಿಕೊಂಡಿದ್ದಾನೆ ಎಂದು ಆತ ಹೇಳಿದಂತೆ ವರದಿ ಆಗಿದೆ. ಒಟ್ಟಾರೆ ಆತನ ಹೇಳಿಕೆ ಹೀಗಿತ್ತು ನೋಡಿ.

 

ನೋಡಿ ಸಾರ್. ಆಸಿಡ್ ಹಾಕುವ ಹಿಂದಿನ ದಿನ ಅವಳನ್ನ ಭೇಟಿಯಾಗಿದ್ದೆ ಸಾರ್. ಒಂದಲ್ಲ ಎರಡಲ್ಲ, ಒಟ್ಟು ಏಳು ವರ್ಷದಿಂದ ಕಾಯ್ತಿದ್ದೀನಿ ಸಾ..ನಾ ಅವ್ಳಿಗೆ. ಮದ್ವೆ ಆಗೋಣ ಅಂತ ಕೇಳಿದ್ದೆ ಸಾ. ಮದುವೆಯಾಗೋಣ ಅಂತಾ ಕೇಳಿದ್ರೆ, ಒಂದಿನ ಏಕಾಏಕಿ ‘ನೀ ನನ್ನ ಅಣ್ಣ’ ಅಂದುಬಿಟ್ಲು ಸಾ. ಬಾಳಾ ಬೆಸ್ರ ಆಯ್ತು ಸಾ. ಅಲ್ಲದೆ, ನನಗೆ ಮದುವೆ ಸೆಟ್ಟಾಗಿದೆ ಅಂದುಬಿಟ್ಟು ಒಂಟೋಡ್ಲು ಸಾ. ಆಗ ನಂಗೆ ಏನು ಮಾಡಾನ ಅಂತ ಗೊತ್ತಾಗ್ಲಿಲ್ಲ ಸಾ. ಭಾರೀ ಕೋಪ ಬಂತು. ಅವತ್ತೇ ಆಸಿಡ್ ಖರೀದಿ ಮಾಡಿದ್ದೆ, ಆದ್ರೆ ಹಾಕಬೇಕು ಅನ್ಕೊಂಡಿರಲಿಲ್ಲ.

ಯಾವಾಗ ಅವರ ಮನೆಯವರು ಪ್ರವೋಕ್ ಮಾಡಿದ್ರೋ ಆಗ ಸೀದಾ ಎದ್ದೋಗಿ ಆಸಿಡ್ ತಂದಿಟ್ಟೆ ಸಾ. ಅವತ್ತು ಸಂಜೆ ತನಕ ಕೂಡಾ ಆಸಿಡ್ ಹಾಕ್ಬಾರ್ದು ಅಂತಾನೆ ಇದ್ದೆ ಸಾರ್. ಘಟನೆ ಹಿಂದಿನ ದಿನ ಬಾಯಿ ಮಾತಿಗೆ ಆಸಿಡ್ ಹಾಕ್ತಿನಿ ಎಂದಿದ್ದೆ. ಆದ್ರೆ ಯುವತಿ ಅದನ್ನು ಅವರ ಮನೆಗೆ ಹೇಳಿದ್ದಾಳೆ. ಅವರ ತಂದೆ ಕಾಲ್ ಮಾಡಿ ನನ್ನ ಅಣ್ಣನಿಗೆ ಹೇಳಿದ್ರು. ನನ್ನ ಅಣ್ಣ ನನಗೆ ಚೆನ್ನಾಗಿ ಬೈದಿದ್ದ. ಯಾವಾಗ ಅವರ ಮನೆಯವರು ಪ್ರವೋಕ್ ಮಾಡಿದ್ರೋ ಆಸಿಡ್ ಹಾಕ್ದೆ. ಈಗಲೂ ಹುಡುಗಿ ಮನೆಯವರು ಹೆಣ್ಣು ಕೊಡ್ತಾರ ಕೇಳಿ ನೋಡಿ ಸರ್ ಅವಳನ್ನ ಮದುವೆಯಾಗ್ತಿನಿ ಅಂತ ಪೊಲೀಸ್ರ ಮುಂದೆ ನಾಗ ಹೇಳಿಕೊಂಡಿದ್ದಾನಂತೆ. ಯಾಕೋ ಆಸಿಡ್ ಹಾಕಿದೇ ಅಂತಾ ಪೊಲೀಸ್ರು ಕೇಳಿದ್ರೆ. ನಾನು ಆಸಿಡ್ ಹಾಕಬೇಕು ಅಂತಾ ಅನ್ನೊಂಡಿರಲಿಲ್ಲ ಸಾರ್. ಅವರ ಮನೆಯವರೇ ಊರು ತುಂಬಾ ಹೇಳ್ಕೊಂಡ್ ಬಂದ್ರು. ನಂಗ್ ಶೇಮ್ ಆಯ್ತು ಸಾ. ಇವ್ನು ಆಸಿಡ್ ಹಾಕ್ತಾನಂತೆ… ಆಸಿಡ್ ಹಾಕ್ತಾನಂತೆ ಅಂತ ಸುದ್ದಿ ಹಬ್ಬಿಸಿದ್ರು. ಇವರೆಲ್ಲ ಎಲ್ಲಾ ಕಡೆ ಹೇಳ್ಕೊಂಡ್ ಬಂದ್ರೋ ನಂಗೆ ಉರ್ದೊಯ್ತು ಸಾ. ಆಗ ಆಸಿಡ್ ಸುರ್ದುಬುಟ್ಟೆ ಸಾ.

ಇದೆಲ್ಲಾ ಆಗೋಯ್ತು ಸಾ. ಈಗ ನೀವು ಹುಡುಕ್ತಿರ್ತೀರಾ ಅಂತಾ ಗೊತ್ತಿತ್ತು ಸರ್. ಮೂರು ಹೊತ್ತು ಊಟ ಜೈಲಲ್ಲಿದ್ರೂ ಹಾಕ್ತಾರೆ. ಧ್ಯಾನ ಮಾಡ್ಕೊಂಡು ಭಿಕ್ಷೆ ಬೇಡಿಕೊಂಡು ಬದುಕಿದ್ರೆ ಆಯ್ತು ಅಂತಾ ನಿರ್ಧಾರ ಮಾಡಿದೆ. ಅಂತ ನಾಗ ಪೊಲೀಸರ ಬಳಿ ಸಾವಕಾಶವಾಗಿ ಒಂದೊಂದಾಗಿ ಹೇಳಿಕೊಂಡಿದ್ದಾನೆ. ಇದು ಕೈ ಗಾಯ ಹೇಗಾಯಿತು ಅಂತ ಕೇಳಿದ್ದಕ್ಕೆ , ನನ್ನ ಸುಟ್ಟ ಕೈ ನೋಡಿದಾಗಲೆಲ್ಲ ಅವಳು ಅಳೋದು ನೆನಪಾಗಬೇಕು ಸಾರ್. ಅದಕ್ಕೆ ಈ ಗಾಯ ಮಾಡಿಕೊಂಡಿದ್ದೀನಿ ಅಂತ ಹೇಳಿದ್ದಾನೆ. ಎಲ್ರೂ ಒಪ್ಪಿದ್ರೆ ನಾನು ಈಗಲೂ ಮದುವೆ ಆಗೋಕೆ ರೆಡಿ ಎಂದು ಬೇರೆ ಹೇಳಿದ್ದಾನೆ.

ದೇವರು ಮೋಸ ಮಾಡಲ್ಲ ಎಂದ ಸಂತ್ರಸ್ತೆಯ ಅಮ್ಮ

ಅತ್ತ ನಾಗನ ಕಾಲಿಗೆ ಗುಂಡೇಟು ಹಾಕಿದ್ದು ಆಕೆಯ ಅಮ್ಮನಿಗೆ ಸಮಾಧಾನ ತಂದಿಲ್ಲ. ನನ್ನ ಮಗಳಿಗೆ ಎಷ್ಟು ನೋವು ಅನುಭವಿಸಿದ್ದಾಳೆಯೋ, ಅಂಥದ್ದೇ ನೋವು ಅವನು ಅನುಭವಿಸಬೇಕು. ಅವನು ನರಳಿ ನರಳಿ ಸಾಯಬೇಕು. ಗುಂಡು ಹೊಡೆಯೋದು ಬೇಡ. ಅವನಿಗೆ ಗುಂಡು ಹೊಡೆದಿದ್ದು ನನಗೆ ಸಮಾಧಾನ ತಂದಿಲ್ಲ.
ನನ್ನ ಮಗಳು ನೋವು ತಿಂದಂತೆ ಅವನು ನೋವು ತಿನ್ನಬೇಕು. ಮಗಳಿಗೆ ಅವತ್ತೇ ಆರೋಪಿ ನಾಗೇಶ್ ಸಿಕ್ಕಿದ್ದಾನೆ ಅಂತ ಹೇಳಿದ್ದೀವಿ. ಈಗ ಸಿಕ್ಕಿದ್ದಾನೆ ಅಂತ ಹೇಳಿದ್ರೆ ಅವಳಿಗೆ ನೋವಾಗುತ್ತದೆ. ಅದಕ್ಕೆ ನಾವು ಏನೂ ಹೇಳಿಲ್ಲ. ಈ ರೀತಿ ಪ್ರಕರಣಗಳು ಇಲ್ಲಿಗೆಯೇ ಕೊನೆ ಆಗಬೇಕು. ಇವತ್ತು ಸರ್ಜರಿ ಮಾಡಿದ ಬಳಿಕ ನೋಡಬೇಕು. ಅವನು ದೇವರ ಜಪ ಮಾಡೋಕೆ ಆಶ್ರಮಕ್ಕೆ ಹೋಗಿದ್ದ ಅನ್ನಿಸುತ್ತೆ. ಆದ್ರೆ ದೇವರು ನಮಗೆ ಮೋಸ ಮಾಡಲ್ಲ. ಅದರಿಂದಲೇ ಆತ ಸಿಕ್ಕಿ ಬಿದ್ದಿದ್ದಾನೆ. ನಾವು ಯಾರಿಗೂ ಅನ್ಯಾಯ ಮಾಡಿಲ್ಲ. ಅವನು ನನ್ನ ಮಗಳು ಹೇಗೆ ನೋವು ಅಂತ ನರಳುತ್ತಿದ್ದಾಳೋ, ಅವನೂ ನರಳಬೇಕು ಅಷ್ಟೇ ನಾವು ಕೇಳಿಕೊಳ್ಳುವುದು ಎಂದು ಆಕೆಯ ಅಮ್ಮ ಹೇಳಿಕೊಂಡಿದ್ದಾರೆ.

Leave A Reply

Your email address will not be published.