ಹಣೆಗೆ ಸಿಂಧೂರ ಇಟ್ಟರೆ ಲೈಂಗಿಕಾಸಕ್ತಿ ಹೆಚ್ಚು ಎಂದ ಮಹಿಳೆ – ನೆಟ್ಟಿಗರಿಂದ ಸಖತ್ ಆಸಕ್ತಿಯಿಂದ ಕಮೆಂಟ್ !

ಲೈಂಗಿಕ ಆಸಕ್ತಿ ಬಗ್ಗೆ ಹೆಣ್ಣುಮಕ್ಕಳು ಈಗ ಮುಕ್ತವಾಗಿ ಮಾತನಾಡಿಕೊಳ್ಳುತ್ತಾರೆ. ಈ ಕುರಿತು ಮಾತನಾಡಿ ನಾವು ಯಾವುದೇ ಗಂಡಸರಿಗಿಂತಲೂ ಕಮ್ಮಿ ಇಲ್ಲ ಎಂದು ತೋರಿಸಿಕೊಟ್ಟಿದ್ದಾರೆ.

 

ಸಿಂಧೂರ, ಕಾಲುಂಗುರದಂತಹ ಮುತ್ತೈದೆ ವಸ್ತುಗಳು ಲೈಂಗಿಕಾಸಕ್ತಿ ಹೆಚ್ಚಿಸುತ್ತೆ ಎನ್ನುವ ಮಾತು ಹಿಂದಿನಿಂದಲೇ ಇದೆ. ಆದರೆ ಈಗ ಮಾತ್ರ ಈ ವಿಚಾರಗಳು ಹೆಚ್ಚು ಹೈಲೈಟ್ ಆಗಿದೆ. ಅದರಲ್ಲೂ ಮಹಿಳೆಯರು ಈ ಬಗ್ಗೆ ಮಾತನಾಡುತ್ತಾರೆಂದರೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗಳು ಅನೇಕ. ಬಹಳಷ್ಟು ಜನ ಲೈಫ್‌ಸ್ಟೈಲ್ ಎಕ್ಸ್ ಪರ್ಟ್‌ಗಳು ಸಿಂಧೂರ ಹಚ್ಚಿದರೆ ಲೈಂಗಿಕ ಆಸಕ್ತಿ ಹೆಚ್ಚುವುದರ ಬಗ್ಗೆ ಹೇಳಿದ್ದಾರೆ.

ಇದೀಗ ಹೊಸದಾಗಿ ಬಂದ ವಿಷಯವೇನೆಂದರೆ ಮಹಿಳೆಯೊಬ್ಬರು ಈ ಕುರಿತು ಮಾತನಾಡಿ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸುದ್ದಿಯಾಗಿದ್ದಾರೆ.  ಈ ವಿಷಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹೇಳಿ ಸಖತ್ ಪ್ರಸಿದ್ಧಿಗೆ ಕೂಡಾ ಬಂದಿದ್ದಾರೆ ಈಕೆ.

ಟ್ವಿಟರ್ ಬಳಕೆದಾರ ರೋಹಿತ್ ಅವರು ಈ ವೀಡಿಯೋ ಹಂಚಿಕೊಂಡಿದ್ದಾರೆ. ಮೂಲತಃ ಬಿ ಬಾಡಿವೈಸ್‌ನಿಂದ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿರುವ ಕ್ಲಿಪ್, ಸಿಂಧೂರ್ ಧರಿಸುವುದರ ಪ್ರಯೋಜನಗಳನ್ನು ಮಹಿಳೆ ವಿವರಿಸುವುದನ್ನು ತೋರಿಸುತ್ತದೆ. ಸಿಂಧೂರ್‌ನಲ್ಲಿರುವ ಪಾದರಸವು ದೇಹವನ್ನು ವಿಶ್ರಾಂತಿ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳುವುದರಿಂದ ಹಿಡಿದು ಅದರ ಇತರ ಪ್ರಯೋಜನಗಳ ಬಗ್ಗೆ ಮಾತನಾಡುವವರೆಗೆ ಹೇಳಲಾಗಿದೆ. 

ಈ ಪೋಸ್ಟ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು ಬಹಳಷ್ಟು ಜನರು ಇದಕ್ಕೆ ಕಮೆಂಟ್ ಮಾಡುವಲ್ಲಿ ಆಸಕ್ತಿ ತೋರಿಸುತ್ತಿದ್ದಾರೆ.

Leave A Reply

Your email address will not be published.