ರೈಲಿನಲ್ಲಿ ತಾಯಿ-ಮಗುವಿನ ಆರಾಮದಾಯಕ ಪ್ರಯಾಣಕ್ಕೆ ಇನ್ನು ಮುಂದೆ ‘ಫಿಟ್ ಬೇಬಿ ಸೀಟ್’
ನವದೆಹಲಿ :ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣವನ್ನು ಖಾತರಿಪಡಿಸುವ ಉದ್ದೇಶದಿಂದ ಭಾರತೀಯ ರೈಲ್ವೆ ಪ್ರಯಾಣಿಕ ಸ್ನೇಹಿ ಮಾರ್ಗಸೂಚಿಗಳನ್ನು ಹೊರಡಿಸುತ್ತಲೇ ಇದ್ದು,ಇದೀಗ ಸಣ್ಣ ಮಕ್ಕಳನ್ನ ರೈಲಿನಲ್ಲಿ ಕರೆದೊಯ್ಯಲು ತಾಯಂದಿರಿಗೆ ಸಾಕಷ್ಟು ತೊಂದರೆಯಾಗುವ ನಿಟ್ಟಿನಿಂದ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ನವಜಾತ ಶಿಶುಗಳು ಸಹ ಪ್ರತಿದಿನ ರೈಲಿನಲ್ಲಿ ಪ್ರಯಾಣಿಸುವುದರಿಂದ, ರಾತ್ರಿಯಲ್ಲಿ ಎದ್ದಾಗ ತಾಯಂದಿರು ಮಲಗಿಸೋಕೆ ಸಾಕಷ್ಟು ಕಷ್ಟ ಎದುರಿಸಬೇಕಾಗುತ್ತದೆ. ಈಗ ರೈಲ್ವೆಯು ಒಂದು ವಿಶಿಷ್ಟ ಪ್ರಯತ್ನ ಮಾಡಿದ್ದು, ತಾಯಿ ಮತ್ತು ಮಕ್ಕಳಿಗಾಗಿ ವಿಶೇಷ ಬರ್ತ್ ಸಿದ್ಧಪಡಿಸಿದೆ ಮತ್ತು ಇದನ್ನ ಪ್ರಾಯೋಗಿಕ ಚಾಲನೆಯಾಗಿ ನಡೆಸಲಾಗುತ್ತಿದೆ.
ಭಾರತೀಯ ರೈಲ್ವೆ ಲಕ್ನೋ ಮತ್ತು ದೆಹಲಿ ನಡುವೆ ಚಲಿಸುವ ರೈಲು ಸಂಖ್ಯೆ 12230 ಲಕ್ನೋ ಮೇಲ್ ಅನ್ನು ಪರಿಚಯಿಸಿದೆ.ಕೋಚ್ ನಂ. 194129 (ಬಿ-4) ಬರ್ತ್ ಸಂಖ್ಯೆ 12 ಮತ್ತು ಬರ್ತ್ ಸಂಖ್ಯೆ 60 ಅನ್ನು ತಾಯಿ ಮತ್ತು ಮಕ್ಕಳಿಗಾಗಿ ಕ್ಯಾಬಿನ್ʼನ ಎರಡೂ ತುದಿಗಳಲ್ಲಿನ ಆಸನದ ಮೇಲೆ ವಿಶೇಷವಾಗಿ ಸ್ಥಾಪಿಸಲಾಗಿದೆ, ಇದು ತಾಯಿ ಮತ್ತು ಮಗುವಿಗೆ ಪ್ರಯಾಣ ಮತ್ತು ನಿದ್ರೆಯನ್ನ ಆರಾಮದಾಯಕವಾಗಿಸುತ್ತದೆ.
ಈ ಬೇಬಿ ಬರ್ತ್ ತಾಯಂದಿರಿಗೆ ತಮ್ಮ ಮಕ್ಕಳೊಂದಿಗೆ ಆರಾಮವಾಗಿ ಮಲಗಲು ಅನುಕೂಲವಾಗುವಂತೆ ಒದಗಿಸುತ್ತದೆ. ಈ ಆಸನವನ್ನ ‘ಫಿಟ್ ಬೇಬಿ ಸೀಟ್’ ಎಂದು ಹೆಸರಿಸಲಾಗಿದೆ. ಈ ಆಸನಗಳು ಬಳಕೆಯಲ್ಲಿಲ್ಲದಿದ್ದಾಗ ‘ಫಿಟ್ ಬೇಬಿ ಸೀಟ್’ ಮಡಚಲುಬಹುದು. ಇನ್ನು ಸ್ಟಾಪರ್ʼನಿಂದ ಮುಖ್ಯ ಸೀಟಿನ ಕೆಳಗೆ ಸುರಕ್ಷಿತವಾಗಿ ಮಡಚಬಹುದು ಮತ್ತು ಬಳಸಿದಾಗ ಸ್ಟಾಪರ್ʼನ್ನ ತೆಗೆದುಹಾಕಬಹುದು ಮತ್ತು ಸೀಟನ್ನು ತೆರೆಯಬಹುದು.
‘ಫಿಟ್ ಬೇಬಿ ಸೀಟ್’ನ ಉದ್ದ ಮತ್ತು ಅಗಲದ ಮಾಹಿತಿ ಈ ಕೆಳಗಿನಂತಿದೆ:
ಸೀಟಿನ ಉದ್ದ = 770 ಮಿಮೀ
ಸೀಟಿನ ಅಗಲ = 255 ಮಿಮೀ
ಬರ್ತ್ ಇರುವ ಆಸನದ ಎತ್ತರ = 76.2 ಮಿಮೀ.