ದೇವಸ್ಥಾನದ ಮೇಲೆ ನಿರ್ಮಾಣವಾದ ಯಾವುದೇ ಮಸೀದಿಯನ್ನು ಬಿಡುವುದಿಲ್ಲ, ಎಲ್ಲವನ್ನೂ ಬಾಬರಿ ಮಸೀದಿಯಂತೆ ಕೆಡವುತ್ತೇವೆ !! | ವಿವಾದ ಸೃಷ್ಟಿಸಿದ ಬಿಜೆಪಿ ನಾಯಕನ ಖಡಕ್ ಹೇಳಿಕೆ

ಕಾಂಗ್ರೆಸ್ ಹಾಗೂ ಆಡಳಿತ ಪಕ್ಷ ಬಿಜೆಪಿ ನಡುವೆ ವಾರಣಾಸಿಯಲ್ಲಿ ಜ್ಞಾನವ್ಯಾಪಿ ಮಸೀದಿ ಸಂಕೀರ್ಣ ವೀಡಿಯೋ ಗ್ರಾಫಿಕ್ ವಿಚಾರದಲ್ಲಿ ವಾಕ್ಸಮರ ಜೋರಾಗಿದೆ. ಈ ಕುರಿತು ಇದೀಗ ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ಸಂಗೀತ್ ಸೋಮ್ ನೀಡಿರುವ ಹೇಳಿಕೆ ತೀವ್ರ ವಿವಾದಕ್ಕೆ ಕಾರಣವಾಗಿದ್ದು, ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.

 

ವಾರಾಣಾಸಿಯ ಪ್ರಸಿದ್ಧ ಕಾಶಿ ವಿಶ್ವನಾಥ ದೇಗುಲದ ಪಕ್ಕದಲ್ಲೇ ಇರುವ ಜ್ಞಾನವಾಪಿ ಮಸೀದಿಯನ್ನು ಬಾಬ್ರಿ ಮಸೀದಿಯಂತೆ ಕೆಡವಲಾಗುವುದು. ಅಂತಹ ಯಾವುದೇ ಮಸೀದಿಯನ್ನು ಬಿಡುವುದಿಲ್ಲ. ಎಲ್ಲವನ್ನೂ ಕೆಡವುತ್ತೇವೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಮೀರತ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಸಂಗೀತ್ ಸೋಮ್, 1992ರಲ್ಲಿ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಲಾಯಿತು. ಈಗ ಜ್ಞಾನವ್ಯಾಪಿ ಮಸೀದಿಯ ಸರದಿ. 2022ರಲ್ಲಿ ನಾವು ಈ ಮಸೀದಿಯನ್ನು ಕೆಡವುತ್ತೇವೆ ಎಂದಿದ್ದಾರೆ.

ಮುಸ್ಲಿಂ ದಾಳಿಕೋರರು ದೇವಾಲಯವನ್ನು ಕೆಡವಿ ಮಸೀದಿಯನ್ನು ನಿರ್ಮಿಸಿದ್ದಾರೆ. ಅದನ್ನು ಹಿಂಪಡೆಯುವ ಸಮಯ ಈಗ ಬಂದಿದೆ. ಬಾಬರಿ ಮಸೀದಿ ಕೆಡವಿದ ದಿನವೇ ಮುಸ್ಲಿಮರಿಗೆ ಇದು ಗೊತ್ತಿರಬೇಕಿತ್ತು. ದೇಶವು ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದು ಅವರಿಗೆ ತಿಳಿದಿರಬೇಕಿತ್ತು. ನಾವು ಅಂತಹ ಯಾವುದೇ ಮಸೀದಿಯನ್ನು ಬಿಡುವುದಿಲ್ಲ, ಎಲ್ಲವನ್ನೂ ಕೆಡವುತ್ತೇವೆ ಎಂದು ಹೇಳಿದ್ದಾರೆ.

ಇದು 1992ರ ಯುಗವಲ್ಲ, 2022ರ ಯುಗ. ದೇಶದ ಯುವಶಕ್ತಿ ಅಂದಿಗಿಂತಲೂ 2 ಪಟ್ಟು ಹೆಚ್ಚಾಗಿದೆ. ಜೊತೆಗೆ ಇದು ಮತ್ತೊಂದು ಮಹತ್ವದ ನಿರ್ಧಾರ ಕೈಗೊಳ್ಳಲು ಉತ್ತಮ ಸಮಯ ಎಂದು ಕರೆ ನೀಡಿದ್ದಾರೆ.

Leave A Reply

Your email address will not be published.