SBI ಗ್ರಾಹಕರಿಗೆ ಸಿಹಿಸುದ್ದಿ!! | ಠೇವಣಿಗಳ ಮೇಲಿನ ಬಡ್ಡಿ ದರ ಹೆಚ್ಚಳ

Share the Article

ದೇಶದಲ್ಲೇ ಅತಿದೊಡ್ಡ ಬ್ಯಾಂಕಿಂಗ್ ಸಂಸ್ಥೆ ಎಂದರೆ ಅದು ಭಾರತೀಯ ಸ್ಟೇಟ್ ಬ್ಯಾಂಕ್. ಇದೀಗ ಎಸ್ ಬಿಐ ತನ್ನ ಗ್ರಾಹಕರಿಗೊಂದು ಸಿಹಿಸುದ್ದಿ ನೀಡಿದೆ. ಠೇವಣಿಗಳ ಮೇಲಿನ ಬಡ್ಡಿ ದರವನ್ನು ಶೇ.0.40 ರಿಂದ ಶೇ 0.90ರ ವರೆಗೆ ಹೆಚ್ಚಿಸಿದೆ. 2 ಕೋಟಿ ಹಾಗೂ ಅದಕ್ಕಿಂತ ಹೆಚ್ಚಿನ ಮೊತ್ತದ ಠೇವಣಿಗಳಿಗೆ ಅನ್ವಯಿಸುವ ಈ ನೀತಿ ಈಗಾಗಲೇ ಜಾರಿಗೆ ಬಂದಿದೆ.

1 ವರ್ಷಕ್ಕಿಂತ ಹೆಚ್ಚಿನ ಹಾಗೂ 2 ವರ್ಷಕ್ಕಿಂತ ಕಡಿಮೆ ಅವಧಿಯ ಠೇವಣಿ ಮೇಲಿನ ಬಡ್ಡಿ ದರವನ್ನು ಶೇ. 0.40ರಷ್ಟು ಹೆಚ್ಚಿಸಲಾಗಿದೆ. 2 ವರ್ಷಕ್ಕಿಂತ ಹೆಚ್ಚಿನ ಹಾಗೂ 3 ವರ್ಷದವರೆಗಿನ ಠೇವಣಿಯ ಬಡ್ಡಿ ದರ ಶೇ. 0.65ರಷ್ಟು, 3 ವರ್ಷಕ್ಕಿಂತ ಹೆಚ್ಚಿನ ಹಾಗೂ 10 ವರ್ಷದವರೆಗಿನ ಠೇವಣಿ ಬಡ್ಡಿ ದರವನ್ನು ಶೇ. 0.90ರಷ್ಟು ಹೆಚ್ಚಿಸಲಾಗಿದೆ.

ಈ ನಡುವೆ ಮತ್ತೊಂದು ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿರುವ ಬ್ಯಾಂಕ್ ಆಫ್ ಬರೋಡಾ (BOB) ಆರ್‌ಬಿಐ ಬಡ್ಡಿದರವನ್ನು ಬಿಗಿಗೊಳಿಸಿದ ನಂತರ ತನ್ನ ಸಾಲದ ದರದಲ್ಲಿ 10 ಬೇಸಿಸ್ ಪಾಯಿಂಟ್‌ಗಳವರೆಗೆ ಹೆಚ್ಚಳ ಘೋಷಿಸಿದೆ.

Leave A Reply