ಪಡಿತರ ಚೀಟಿದಾರರೇ ನಿಮಗೊಂದು ಸಿಹಿಸುದ್ದಿ :
ರಾಜ್ಯ ಸರ್ಕಾರದಿಂದ ಗೋಧಿ ಮತ್ತು ಅಕ್ಕಿ ವಿತರಣೆಯಲ್ಲಿ ಭಾರೀ ಬದಲಾವಣೆ

Share the Article

ಕೇಂದ್ರ ಸರ್ಕಾರದಿಂದ ಗೋಧಿ ಮತ್ತು ಅಕ್ಕಿ ವಿತರಣೆಯಲ್ಲಿ ಭಾರಿ ಬದಲಾವಣೆಗಳನ್ನು ಮಾಡಿದ್ದು, ರೇಷನ್ ಕಾರ್ಡ್ ಬಳಕೆದಾರರಿಗೆ ರಾಜ್ಯ ಸರ್ಕಾರ ಸಂತಸದ ಸುದ್ದಿಯನ್ನು ನೀಡಿದೆ. ರಾಜ್ಯದ ಜನರ ಆರೋಗ್ಯದ ದೃಷ್ಟಿಯಿಂದ ಪಡಿತರ ವ್ಯವಸ್ಥೆಯಡಿ ಅಕ್ಕಿ ಜೊತೆ ಸಿರಿಧಾನ್ಯ, ಜೋಳ ಮತ್ತು ರಾಗಿಯನ್ನು ಸಮಪ್ರಮಾಣದಲ್ಲಿ ವಿತರಿಸಲು ಚಿಂತನೆ ನಡೆಸಿದೆ.

ರಾಜ್ಯ ಸರ್ಕಾರ ಪಡಿತರ ಚೀಟಿದಾರರಿಗೆ ಅಕ್ಕಿ, ಗೋಧಿ ಇಲ್ಲವೇ ರಾಗಿ ನೀಡುತ್ತಿದೆ. ಅದರ ಜೊತೆಗೆ ಕೋವಿಡ್ ಕಾಲದಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ 5ಕೆಜಿ ಅಕ್ಕಿ ನೀಡುವುದನ್ನು ಮುಂದುವರೆಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಈ ಬಾರಿ ಸರ್ಕಾರದಿಂದ ಗೋಧಿ ಸಂಗ್ರಹ ಕಡಿಮೆಯಾಗಿದ್ದರಿಂದ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. ಮಾಧ್ಯಮಗಳ ವರದಿ ಪ್ರಕಾರ ಕಳೆದ ವರ್ಷಕ್ಕಿಂತ ಈ ಬಾರಿ ಸುಮಾರು 55 ಲಕ್ಷ ಮೆಟ್ರಿಕ್ ಟನ್ ಅಕ್ಕಿಯನ್ನು ಜನರಿಗೆ ವಿತರಿಸಲಾಗುವುದು. PMGKAY ಯೋಜನೆಯಡಿಯಲ್ಲಿ ಲಭ್ಯವಿರುವ ಗೋಧಿ ಮತ್ತು ಅಕ್ಕಿಯ ಕೋಟಾದಲ್ಲಿ ಕೇಂದ್ರ ಸರ್ಕಾರವು ದೊಡ್ಡ ಬದಲಾವಣೆಯನ್ನು ಮಾಡಿದೆ. ಸರಕಾರ ಗೋಧಿಯ ಪ್ರಮಾಣವನ್ನು ಕಡಿಮೆ ಮಾಡಿ ಅಕ್ಕಿಯ ಕೋಟಾವನ್ನು ಹೆಚ್ಚಿಸಿದೆ. ಈ ಬದಲಾವಣೆಯನ್ನು ಕೆಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಾಡಲಾಗಿದೆ. ಈ ಬದಲಾವಣೆಯ ನಂತರ ಈ ರಾಜ್ಯಗಳ ಜನರಿಗೆ ಮೊದಲಿಗಿಂತ ಕಡಿಮೆ ಗೋಧಿ ಮತ್ತು ಹೆಚ್ಚು ಅಕ್ಕಿ ಸಿಗುತ್ತದೆ.

ಮೇ ನಿಂದ ಸೆಪ್ಟೆಂಬರ್ ವರೆಗೆ ಅನೇಕ ರಾಜ್ಯಗಳಲ್ಲಿ ಲಭ್ಯವಿರುವ ಗೋಧಿಯ ಕೋಟಾದಲ್ಲಿ ಸರ್ಕಾರವು ಬದಲಾವಣೆಗಳನ್ನು ಮಾಡಿದೆ. ದೆಹಲಿ, ಮಧ್ಯಪ್ರದೇಶ, ಉತ್ತರಾಖಂಡ (ಉತ್ತರಖಂಡ), ಗುಜರಾತ್, ಉತ್ತರ ಪ್ರದೇಶ, ಬಿಹಾರ, ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಗೋಧಿಯ ಕೋಟಾವನ್ನು ಸರ್ಕಾರ ಹೆಚ್ಚಿಸಿದೆ. ಅದೇ ಸಮಯದಲ್ಲಿ ಉಳಿದ ರಾಜ್ಯಗಳ ಗೋಧಿ ಮತ್ತು ಅಕ್ಕಿ ಕೋಟಾದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗುವುದಿಲ್ಲ ಎಂದು ಸರ್ಕಾರ ನಿರ್ಧರಿಸಿದೆ.

Leave A Reply