ಬೆಳ್ತಂಗಡಿ : ಬಿಜೆಪಿ ಎಸ್ಟಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಡಾ.ನರೇಂದ್ರ ಕುಮಾರ್ ನಿಧನ! ಧರ್ಮಸ್ಥಳ, ಕುಕ್ಕೆ ಭೇಟಿಗೆಂದು ಬಂದು ಹಠಾತ್ ಸಾವು!

ಬೆಳ್ತಂಗಡಿ : ಧರ್ಮಸ್ಥಳ, ಕುಕ್ಕೆ ಭೇಟಿಗೆಂದು ಬಂದ ಬೆಂಗಳೂರು ಉತ್ತರದ ಬಿಜೆಪಿ ಎಸ್ಟಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಹಾಗೂ ಬೆಂಗಳೂರಿನಲ್ಲಿ ಎರಡು ವಿದ್ಯಾಮಂದಿರದ ಮಾಲೀಕರಾಗಿರುವ ಡಾ. ನರೇಂದ್ರ ಕುಮಾರ್(45) ಅವರು ಧರ್ಮಸ್ಥಳದಲ್ಲಿ ನಿಧನರಾಗಿದ್ದಾರೆ.

 

ತಮ್ಮ ಶಾಲೆಯ ಶಿಕ್ಷಕಿಯರನ್ನು ಪುತ್ತೂರು ವಿವೇಕಾನಂದ ಕಾಲೇಜಿಗೆ ತರಬೇತಿಗಾಗಿ ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳು ಮತ್ತು ಸ್ನೇಹಿತರೊಂದಿಗೆ ಟಿಟಿ ವಾಹನಲ್ಲಿ ಕರೆದುಕೊಂಡು ಬಂದಿದ್ದು, ನಂತರ ಶಿಕ್ಷಕಿಯರನ್ನು ವಿವೇಕಾನಂದ ಕಾಲೇಜಿಗೆ ಬಿಟ್ಟು ತಮ್ಮ ಪತ್ನಿ ಮಕ್ಕಳು ಸೇರಿ ಒಟ್ಟು ಏಳು ಜನರು ಧರ್ಮಸ್ಥಳ ಸನ್ನಿಧಿ ಗೆಸ್ಟ್ ನಲ್ಲಿ ರೂಂ ಮಾಡಿದ್ದರು.

ಇಂದು ಬೆಳಗ್ಗೆ ಏಕಾಏಕಿ ಡಾ.ನರೇಂದ್ರ ಕುಮಾರ್ ಗೆ ಎದೆನೋವು ಕಾಣಿಸಿದೆ. ಕೂಡಲೇ ಟಿಟಿ ಚಾಲಕನಿಗೆ ಮಕ್ಕಳು ಕರೆ ಮಾಡಿ ವಿಷಯ ತಿಳಿಸಿದಾಗ ಗೆಸ್ಟ್ ಹೌಸ್ ಗೆ ಚಾಲಕ ವಾಹನ ತಂದಾಗ ಡಾ.ನರೇಂದ್ರ ಕುಮಾರ್ ನಡೆದುಕೊಂಡು ಬಂದು ವಾಹನ ಹತ್ತಿ ಕುಳಿತ್ತಿದ್ದಾರೆ. ಇನ್ನು ನೇತ್ರಾವತಿ ಬಳಿ ಬರುತ್ತಿದ್ದಾಗ ವಾಹನದಲ್ಲೇ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

ಕಡಬದಲ್ಲಿ ಡಾ.ನರೇಂದ್ರ ಕುಮಾರ್

ಡಾ.ನರೇಂದ್ರ ಕುಮಾರ್ ಅವರ ಮೃತದೇಹವನ್ನು ಆಂಬ್ಯುಲೆನ್ಸ್ ಮೂಲಕ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಶವಪರೀಕ್ಷೆಗೆ ತರಲಾಗಿದ್ದು ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಾ. ನರೇಂದ್ರ ಕುಮಾರ್ ಅವರ ಪತ್ನಿ ಸಂದರ್ಶಿನಿ ಶ್ರೀ ಜ್ಞಾನಕ್ಷಿ ವಿದ್ಯಾ ಕೇಂದ್ರದಲ್ಲಿ ಪ್ರಾಂಶುಪಾಲರಾಗಿದ್ದಾರೆ. ಡಾ.ನರೇಂದ್ರ ಕುಮಾರ್ ಮತ್ತು ಸಂದರ್ಶಿನಿ ದಂಪತಿಗಳಿಗೆ ಪ್ರಜ್ವಲ್ (14) ಮತ್ತು ಕಶಿಕಾ(8) ಇಬ್ಬರು ಮಕ್ಕಳು ಇದ್ದಾರೆ.

Leave A Reply

Your email address will not be published.