ಜೂನ್ 1ರಿಂದ ಮದ್ಯದ ಮೇಲೆ ಶೇಕಡಾ 25ರಷ್ಟು ಬಂಪರ್ ರಿಯಾಯಿತಿ
ಮದ್ಯ ಪ್ರಿಯರಿಗೆ ಸಂತಸದ ಸುದ್ದಿ ಬಂದಿದೆ. ದಿಲ್ಲಿ ಸಿಎಂ ಕೇಜ್ರಿವಾಲ್ ನೇತೃತ್ವದ ಸರ್ಕಾರವು ಅಗ್ಗದ ದರದಲ್ಲಿ ಮದ್ಯ ಮಾರಾಟಕ್ಕೆ ಸಿದ್ಧತೆ ನಡೆಸಿದೆ. ವಿಶೇಷವೆಂದರೆ ಇದಕ್ಕೆ ಸಿದ್ಧತೆಯೂ ಮುಗಿದಿದ್ದು, ದಿನಾಂಕವನ್ನೂ ಪ್ರಕಟಿಸಲಾಗಿದೆ.
ಜೂನ್ 1ರಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮದ್ಯದ ಬೆಲೆ ಅಗ್ಗವಾಗಲಿದೆ. ದೆಹಲಿ ಸರ್ಕಾರವು ಜೂನ್ 1ರಿಂದ ಮದ್ಯದ ಗರಿಷ್ಠ ಚಿಲ್ಲರೆ ಬೆಲೆಗೆ (MRP) ನೀಡಲಾಗುವ ಶೇಕಡಾ 25ರಷ್ಟು ರಿಯಾಯಿತಿಯನ್ನು ಮಿತಿಗೊಳಿಸಲಿದೆ. ಅಂದರೆ ಈಗ ಮದ್ಯದ ಖರೀದಿಯ ಮೇಲಿನ ಅನಿಯಮಿತ ಕೊಡುಗೆಯು ಜನರಿಗೆ ಲಾಭದಾಯಕ ವ್ಯವಹಾರವಾಗಿದೆ.
ಮದ್ಯದ ದರವನ್ನು ಕಡಿಮೆ ಮಾಡುವುದರಿಂದ ಮದ್ಯದ
ಮಾರಾಟ ಹೆಚ್ಚಳ ಆಗುತ್ತದೆ. ಆ ಮೂಲಕ ತೆರಿಗೆ ಸಂಗ್ರಹದ ರೂಪದಲ್ಲಿ ಸರ್ಕಾರಕ್ಕೆ ಹೆಚ್ಚಿನ ಆದಾಯ ಬರುವ ನಿರೀಕ್ಷೆಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ಸರ್ಕಾರ ಹೊಸ ಅಬಕಾರಿ ನಿಯಮಗಳನ್ನು ರೂಪಿಸಿದೆ.