FCI (ಭಾರತೀಯ ಆಹಾರ ನಿಗಮ)ನಲ್ಲಿ 4710 ಹುದ್ದೆಗಳು: ಹೆಚ್ಚಿನ ಮಾಹಿತಿ ಇಲ್ಲಿದೆ
ಭಾರತೀಯ ಆಹಾರ ನಿಗಮವು (ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾ) ಕೆಟಗರಿ 1, ಕೆಟಗರಿ 2, ಕೆಟಗರಿ 3 ಗೆ ಸೇರಿದ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ.
ಒಟ್ಟು 4710 ಹುದ್ದೆಗಳ ಭರ್ತಿಗೆ ಶಾರ್ಟ್ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಈ ಸದರಿ ಹುದ್ದೆಗಳಲ್ಲಿ ಆಸಕ್ತಿ ಇರುವವರು ಕೆಳಗಿನ ನೀಡಿರುವ ಮಾಹಿತಿಗಳನ್ನು ತಿಳಿದು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಎಫ್‌ಸಿಐ ಈಗ ಕೇವಲ ಶಾರ್ಟ್ ನೋಟಿಫಿಕೇಶನ್ ಅಷ್ಟೇ ಬಿಡುಗಡೆ ಮಾಡಿದ್ದು, ಡಿಟೇಲ್ಸ್ ನೋಟಿಫಿಕೇಶನ್ ನನ್ನು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಿದೆ.
ಉದ್ಯೋಗ ಸಂಸ್ಥೆ : ಭಾರತೀಯ ಆಹಾರ ನಿಗಮ
ಹುದ್ದೆ ಹೆಸರು : ಕೆಟಗರಿ 1, ಕೆಟಗರಿ 2, ಕೆಟಗರಿ 3 ಎಫ್‌ಸಿಐ ಹುದ್ದೆಗಳು
ಹುದ್ದೆಗಳ ಸಂಖ್ಯೆ : 4710
ಹುದ್ದೆಗಳ ವಿವರ : ಕೆಟಗರಿ 1 ಹುದ್ದೆಗಳ ಸಂಖ್ಯೆ 35
ಕೆಟಗರಿ 2 ಹುದ್ದೆಗಳ ಸಂಖ್ಯೆ 2521
ಕೆಟಗರಿ 3 ಹುದ್ದೆಗಳ ಸಂಖ್ಯೆ 2154
ಒಟ್ಟು ಹುದ್ದೆಗಳ ಸಂಖ್ಯೆ : 4710
ಗರಿಷ್ಠ ವಯೋಮಿತಿ : ಮ್ಯಾನೇಜರ್ : 28 ವರ್ಷ
ಮ್ಯಾನೇಜರ್ (ಹಿಂದಿ) : 35 ವರ್ಷ
ಜೂನಿಯರ್ ಇಂಜಿನಿಯರ್: 28 ವರ್ಷ
ಸ್ಟೆನೋಗ್ರಾಫರ್ ಗ್ರೇಡ್ 2: 25 ವರ್ಷ
ಮ್ಯಾನೇಜರ್ : 28 ವರ್ಷ
ಮ್ಯಾನೇಜರ್ (ಹಿಂದಿ) : 35 ವರ್ಷ
ಜೂನಿಯರ್ ಇಂಜಿನಿಯರ್: 28 ವರ್ಷ
ಸ್ಟೆನೋಗ್ರಾಫರ್ ಗ್ರೇಡ್ 2: 25 ವರ್ಷ
ಟೈಪಿಸ್ಟ್ (ಹಿಂದಿ) : 25 ವರ್ಷ
ವಾಚ್‌ಮನ್ : 25 ವರ್ಷ
ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ, ಪಿಡಬ್ಲ್ಯೂಡಿ ಜೆನೆರಲ್ ಅಭ್ಯರ್ಥಿಗಳಿಗೆ 10 ವರ್ಷ, ಪಿಡಬ್ಲ್ಯೂಡಿ ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.
ಅರ್ಜಿ ಶುಲ್ಕ : ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ ರೂ.1000. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.
ಆಯ್ಕೆ ಪ್ರಕ್ರಿಯೆ : ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ನಡೆಸಿ, ಆಯ್ಕೆ ಪ್ರಕ್ರಿಯೆ ನಡೆಸಲಾಗುತ್ತದೆ.
ವಿದ್ಯಾರ್ಹತೆ : ಹುದ್ದೆಗಳಿಗೆ ಅನುಗುಣವಾಗಿ ಪದವಿ/ ಬಿಇ / ಬಿಕಾಂ / ಬಿಎಸ್ಸಿ / ಸ್ನಾತಕೋತ್ತರ ಪದವಿ
ಅಪ್ಲಿಕೇಶನ್ ಸಲ್ಲಿಸಲು ಆರಂಭಿಕ ದಿನಾಂಕ: ಪ್ರಕಟಿಸಬೇಕಿದೆ.
ಅಪ್ಲಿಕೇಶನ್ ಕೊನೆ ದಿನಾಂಕ: ಪ್ರಕಟಿಸಬೇಕಿದೆ.
ಭಾರತೀಯ ಆಹಾರ ನಿಗಮವು ಪ್ರಸ್ತುತ ಶಾರ್ಟ್
ನೋಟಿಫಿಕೇಶನ್ ಅಷ್ಟೆ ಬಿಡುಗಡೆ ಮಾಡಿದ್ದು, ಶೀಘ್ರದಲ್ಲೇ ಡೀಟೇಲ್ಸ್ ನೋಟಿಫಿಕೇಶನ್ ಪ್ರಕಟಿಸಲಿದೆ.
ಭಾರತೀಯ ಆಹಾರ ನಿಗಮದ ಅಧಿಕೃತ ವೆಬ್‌ಸೈಟ್:
http://fci.gov.in/