ಕೆಂಪಡಕೆ ದರ ಹೆಚ್ಚಳ | ಅಡಕೆ ಬೆಳೆಗಾರರು ಫುಲ್ ಖುಷ್|
ಈಗ ಬೇಸಿಗೆ ಕಾಲವಾದರೂ ಮಳೆಗಾಲದ ವಾತಾವರಣವಿದೆ. ಹೀಗಿರುವಾಗಲೇ ಕೆಂಪಡಕೆ ದರದಲ್ಲಿ ಹೆಚ್ಚಳವಾಗಿದೆ. ಹಾಗಾಗಿ ಬೆಳೆಗಾರರು ಫುಲ್ ಖುಷಿಯಾಗಿದ್ದಾರೆ. ಒಂದು ಕ್ವಿಂಟಾಲ್ ಕೆಂಪಡಕೆ ಬೆಲೆ 50 ಸಾವಿರ ರೂ. ದಾಟಿದೆ. ಕೆಲ ತಿಂಗಳಿಂದ ಕೆಂಪಡಕೆ ದರದಲ್ಲಿ ಸ್ಥಿರತೆ ಕಂಡಿದ್ದ ಅಡಕೆ, ಇದೀಗ ಅಂದರೆ ಮೇ ಮೊದಲ ಎರಡು ವಾರದಲ್ಲಿ ದರ ಏರಿಕೆಯಾಗಿದೆ.
ಯಲ್ಲಾಪುರ ಮಾರುಕಟ್ಟೆಯಲ್ಲಿ ಮಂಗಳವಾರ ತಲಾ 1 ಕ್ವಿಂಟಾಲ್ ಕೆಂಪಡಕೆ 54,159 ರೂ.ಗೆ ಮಾರಾಟ ಆಗಿದೆ. ಕಳೆದ ಮೂರ್ನಾಲ್ಕು ವರ್ಷದಲ್ಲಿ ಈ ದರವೇ ಅತಿ ಹೆಚ್ಚಿನದ್ದಾಗಿದೆ. ಶಿವಮೊಗ್ಗದಲ್ಲಿ ರಾಶಿ ಅಡಕೆ ಕ್ವಿಂಟಾಲ್‌ಗೆ 47,009 – 50,969 ರೂ.ವರೆಗೆ ಮಾರಾಟವಾಗಿದೆ.
ಪಾನ್ ಮಸಾಲಾ ಕಂಪನಿಯವರು ಮಳೆಗಾಲದ ಹಿನ್ನೆಲೆಯಲ್ಲಿ ಖರೀದಿ ಹೆಚ್ಚಿಸುತ್ತಿದ್ದಾರೆ. ಅಲ್ಲದೆ ಕೆಂಪಡಕೆ ಉತ್ಪಾದನೆ ಕಳೆದ ಬಾರಿಗಿಂತ ಈ ಬಾರಿ ಕಡಿಮೆ ಇದೆ. ವ್ಯಾಪಾರಿಗಳು ದಾಸ್ತಾನು ಮಾಡಿಟ್ಟುಕೊಳ್ಳಲೂ ಅಡಕೆ ಖರೀದಿ ಮಾಡುತ್ತಿದ್ದಾರೆ. ಈ ಎಲ್ಲ ಕಾರಣದಿಂದ ಬೆಲೆ ಹೆಚ್ಚಾಗುತ್ತಿದೆ ಎಂದು ಟಿಎಸ್ಎಸ್ ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ ತಿಳಿಸಿದ್ದಾರೆ.