ಸುಪ್ರಭಾತ ಅಭಿಯಾನ ಏಕಾಏಕಿ ಹಿಂತೆಗೆತ – ಸ್ಪಷ್ಟನೆ ಕೊಟ್ಟ ಮುತಾಲಿಕ್
ಮಸೀದಿಗಳಲ್ಲಿ ಆಜಾನ್ ವಿರುದ್ಧವಾಗಿ, ಸುಪ್ರಭಾತ ಮೊಳಗಿಸುವ ಸವಾಲೆಸೆದ ಶ್ರೀರಾಮ ಸೇನೆ ಈಗ ಏಕಾಏಕಿ ಈ ಅಭಿಯಾನವನ್ನು ಸ್ಥಗಿತಗೊಳಿಸಿದೆ. ಈ ಮೂಲಕ ಸುಪ್ರಭಾತ ಅಭಿಯಾನದಿಂದ ಹಿಂದೆ ಸರಿದಿದೆ.
ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಈ ಬಗ್ಗೆ ಧಾರವಾಡದಲ್ಲಿ ಹೇಳಿಕೆ ನೀಡಿದ್ದಾರೆ. ಹಾಗೂ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅನಧಿಕೃತ ಮೈಕ್ ತೆರವು ಕುರಿತು ಸರ್ಕಾರ ಕೈಗೊಂಡಿರುವ ಮಹತ್ವದ ನಿರ್ಧಾರದ ಹಿನ್ನೆಲೆಯಲ್ಲಿ ಸುಪ್ರಭಾತ ಅಭಿಯಾನದಿಂದ ಹಿಂದಕ್ಕೆ ಸರಿದಿರುವುದಾಗಿ ಅವರು ತಿಳಿಸಿದ್ದಾರೆ.
ಮೈಕ್ ಹಾಕುವವರಿಗೆಲ್ಲ ಗಡುವು ವಿಧಿಸಿದ್ದನ್ನು ಹಿಂದೂಪರ ಸಂಘಟನೆಯವರು ಸ್ವಾಗತಿಸುತ್ತೇವೆ. ತಡವಾದರೂ ಇದು ಯೋಗ್ಯ ನಿರ್ಣಯ. ಸದ್ಯ 15 ದಿನ ಗಡುವು ಕೊಟ್ಟಿದ್ದಾರೆ. ಶಬ್ದ ಮಾಲಿನ್ಯ ನಿಯಂತ್ರಣ ಮಂಡಳಿ, ಸುಪ್ರೀಂ ಕೋರ್ಟ್ ಆದೇಶದ ಉಲ್ಲೇಖ ಮಾಡಲಾಗಿದೆ. ಡಿವೈಎಸ್‌ಪಿ, ಎಸಿಪಿ,
ಪೊಲೀಸ್ ಕಮಿಷನರ್ ಮಟ್ಟದಲ್ಲಿ ಅನುಮತಿ ಪಡೆಯಬೇಕು ಎಂದು ಹೇಳಲಾಗಿದೆ. ಇದಕ್ಕಾಗಿ ನಾವು ಸಿಎಂಗೆ ಅಭಿನಂದನೆ ತಿಳಿಸುತ್ತೇವೆ ಎಂದು ಹೇಳುತ್ತಾ, ನಮ್ಮ ಹೋರಾಟ ವಾಪಸ್ ಪಡೆಯುತ್ತೇವೆ. ನಾಳೆಯಿಂದ ಸುಪ್ರಭಾತ ಅಭಿಯಾನ ಕಾರ್ಯಕ್ರಮ ಇಲ್ಲ. ಆದರೆ 15 ದಿನಗಳ ನಂತರ ಈ ಕ್ರಮ ನೋಡಿಕೊಂಡ ಮುಂದಿನ ಹೆಜ್ಜೆ ಇಡಲಿದ್ದೇವೆ ಎಂದು ಮುತಾಲಿಕ್ ತಿಳಿಸಿದ್ದಾರೆ