ಈ ಫೋಟೋದಲ್ಲಿ ಅಡಗಿ ಕೂತಿದೆ ಒಂದು ಸಾಕು ಪ್ರಾಣಿ ಚಿತ್ರ. ಅದ್ಯಾವುದೆಂದು ಗುರುತಿಸಬಲ್ಲರಾ?

ಆಪ್ಟಿಕಲ್ ಭ್ರಮೆಗಳು ಇತ್ತೀಚೆಗೆ ಅಂತರ್ಜಾಲದಲ್ಲಿ ಬಹಳ ಜನಪ್ರಿಯವಾಗಿವೆ. ಅವು ಮನರಂಜಿಸುವ ಜೊತೆಗೆ ಮನಸ್ಸಿಗೆ ಮುದ ನೀಡುತ್ತವೆ. ಅವುಗಳನ್ನು ಅರ್ಥಮಾಡಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಇದೊಂಥರಾ ತಲೆಗೆ ಹುಳ ಬಿಡುವ ರೀತಿ. ಹಾಗಂತ ಈ ಸಮಸ್ಯೆಗಳಿಗೆ ಇಂಟರ್ನೆಟ್ ಯಾವಾಗಲೂ ಪರಿಹಾರವನ್ನು ಸಹ ಹೊಂದಿರುತ್ತದೆ. ಇದೀಗ ಯಾವ ಆಪ್ಟಿಕಲ್ ಚಿತ್ರ ವೈರಲ್ ಆಗಿದೆ, ಅದರಲ್ಲೇನಿದೆ ಬನ್ನಿ ನೋಡೋಣ.

 

ಇದೊಂದು ಮರದ ರಾಶಿಯನ್ನು ಹೊಂದಿರುವ ಚಿತ್ರ. ಜೊತೆಗೆ ಆಪ್ಟಿಕಲ್ ಭ್ರಮೆಯ ಚಿತ್ರ. ಚಿತ್ರವನ್ನು ಗಮನವಿಟ್ಟು ನೋಡಿ ಇದರಲ್ಲಿ ಒಂದು ಪ್ರಾಣಿಯಿದೆ. ಅದು ಯಾವ ಪ್ರಾಣಿಯೆಂದು ನೀವು ಕಂಡುಹಿಡಿಯಬಲ್ಲಿರಾ?

ಈ ಚಿತ್ರದಲ್ಲಿ ಎತ್ತರದ ಮರಗಳು ಮತ್ತು ಮರದ ರಾಶಿಗಳನ್ನು ಹೊರತುಪಡಿಸಿ ಏನನ್ನೂ ಕಂಡುಹಿಡಿಯಲು ಸಾಧ್ಯವಾಗಲಿಲ್ಲವೆಂದರೆ, ನೀವು ಇನ್ನಷ್ಟು ಸೂಕ್ಷ್ಮವಾಗಿ ಗಮನಿಸಿದರೆ, ಆ ಮರದ ರಾಶಿಯಲ್ಲಿ ಮಲಗಿರುವ ಬೆಕ್ಕು ನಿಮಗೆ ಕಾಣಿಸುತ್ತದೆ.

ಇಲ್ಲಿ ಮರದ ತುಂಡುಗಳು ಹಾಗೂ ಬೆಕ್ಕಿನ ಬಣ್ಣ ಒಂದೇ ಆಗಿರುವುದರಿಂದ, ಬೆಕ್ಕನ್ನು ಕಂಡುಹಿಡಿಯುವುದು ಕಷ್ಟವಾದ ಕೆಲಸವಾಗಿದೆ. ಆಪ್ಟಿಕಲ್ ಭ್ರಮೆಯು ಜನರು ತಲೆ ಕೆರೆದುಕೊಳ್ಳುವಂತೆ ಮಾಡುವುದು ಇದೇ ಮೊದಲಲ್ಲ.

Leave A Reply

Your email address will not be published.