ಕಡಬ: ನೂತನ ಎಸ್.ಐ ಗಳ ನೇತೃತ್ವದಲ್ಲಿ ಭರ್ಜರಿ ಕಾರ್ಯಾಚರಣೆ!! ಮೂರು ತಿಂಗಳ ಹಿಂದೆ ನಡೆದಿದ್ದ ಮನೆ ಕಳವು ಪ್ರಕರಣದ ಆರೋಪಿ ಸೆರೆ
ಕಡಬ ಠಾಣಾ ವ್ಯಾಪ್ತಿಯ ಬಂಟ್ರ ಗ್ರಾಮದ ಪಾಲೆತ್ತಡ್ಕ ಎಂಬಲ್ಲಿ ಮೂರು ತಿಂಗಳ ಹಿಂದೆ ಮನೆಗೆ ನುಗ್ಗಿ ನಗದು ಕಳವುಗೈದಿದ್ದ ಆರೋಪಿಯನ್ನು ಪೋಲೀಸರು ಮೇ.9ರಂದು ಬಂಧಿಸಿದ್ದಾರೆ.
ಮೂಲತಃ ಪುತ್ತೂರು ತಾಲೂಕಿನ ಕೆದಂಬಾಡಿ ಗ್ರಾಮದ ನಿವಾಸಿ ಪ್ರಸ್ತುತ ಐತ್ತೂರು ಸುಂಕದಕಟ್ಟೆ ನಿವಾಸಿ ಹಕೀಂ (23) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಕಳ್ಳತನಕ್ಕೆ ಸಹಕರಿಸಿದ ಇನ್ನೋರ್ವ ಆರೋಪಿ ಹಮೀದ್(25) ಇನ್ನೊಂದು ಪ್ರಕರಣದಲ್ಲಿ ಬೆಂಗಳೂರಿನ ಪೋಲೀಸರು ಬಂಧಿಸಿದ್ದು, ಅವರನ್ನು ಕಡಬ ಪೋಲಿಸರು ಇನ್ನಷ್ಟೆ ವಶಕ್ಕೆ ಪಡೆಯಬೇಕಿದೆ.
ಫೆ.22ರಂದು ರಾತ್ರಿ ಪಾಲೆತಡ್ಕ ನಿವಾಸಿ ಬಾಲಕೃಷ್ಣ ರೈಎಂಬವರ ಮನೆಯ ಹಿಂಬಾಗಿಲಿನಿಂದ ನುಗ್ಗಿ ಮನೆಯಲ್ಲಿದ್ದ 66,000 ರೂ ವನ್ನು ಕಳವುಗೈಯ್ಯಲಾಗಿತ್ತು.ಬಾಲಕೃಷ್ಣ ರೈ ಅವರಿಗೆ ಮರ್ದಾಳ ದಲ್ಲಿ ಅಂಗಡಿ ಇದ್ದು.ಇವರ ಚಲನವಲನಗಳ ಮೇಲೆ ನಿಗಾ ಇಟ್ಟು ಸಮಯ ಸಾಧಿಸಿ ಕಳ್ಳತನ ಗೈಯ್ಯಲಾಗಿದೆ.
ಹಕೀಂ ಮರ್ದಾಳದ ಹೋಟೇಲೊಂದರಲಿ ಕೆಲಸ ಮಾಡುತ್ತಿದ್ದು ಹಮೀದ್ ಅವರ ತಂದೆ ಕೂಡಾ ಅಲ್ಲೇ ಕೆಲಸ ನಿರ್ವಹಿಸುತ್ತಿದ್ದರು. ಆಗಾಗ ಹೋಟೇಲ್ ಗೆ ಬರುತ್ತಿದ್ದ ಹಮೀದ್ ಹಕೀಂನೊಂದಿಗೆ ಕಳ್ಳತನದ ವ್ಯವಹಾರ ಇಟ್ಟುಕೊಂಡಿದ್ದರು. ಅಂತೆಯೇ ಬಾಲಕೃಷ್ಣ ರೈ ಅವರ ಮನೆಗೆ ಕನ್ನ ಹಾಕಲು ನಿರ್ಧರಿಸಿರಾತ್ರೋ ರಾತ್ರಿ ಮನೆಗೆ ನುಗ್ಗಿ ಹಣಕಳವುಗೈದಿದ್ದಾರೆ.
66,000 ರೂ. ನಲ್ಲಿ 30,000 ರೂ ಪಾಲು ಪಡೆದ ಹಮೀದ್ ಅಲ್ಲಿ ಇಲ್ಲಿ ತಿರುಗಾಡಿ ಕೊನೆಗೆ ಬೆಂಗಳೂರಿಗೆ ತೆರಳಿದ್ದರು. ಇತ್ತ ಹಮೀದ್ ಕಳ್ಳತನದ ತನ್ನ ಪಾಲಿನ ಹಣದಲ್ಲಿ 27,000 ರೂ ವನ್ನು ಹೋಟೇಲ್ ನಲ್ಲಿದ್ದ ಚಾಂಪಿಯನ್ ಶೀಲ್ಡ್ ಅಡಿಯಲ್ಲಿಟ್ಟಿದ್ದರು.
ಇದೀಗ ಖಚಿತ ಮಾಹಿತಿಯ ಆಧಾರದ ಮೇಲೆ ಮರ್ದಾಳ ದಲ್ಲಿ ಕಡಬ ಪೋಲೀಸರು ಬಂಧಿಸಿದ್ದಾರೆ. ಕಡಬ ಎಸ್ಐ ಆಂಜನೇಯ ರೆಡ್ಡಿ ಮಾರ್ಗದರ್ಶನದಲ್ಲಿ ತನಿಖಾ ಎಸ್ಐ ಶ್ರೀಕಾಂತ್ ರಾತೋಡ್, ಪೋಲೀಸ್ ಸಿಬ್ಬಂದಿಗಳಾದ ರಮೇಶ್, ಮಹೇಶ್, ಭವಿತ್, ದೀಪಕ್ ಮತ್ತಿತರರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.