ಕ್ರೇಜಿಸ್ಟಾರ್ ರವಿಚಂದ್ರನ್ ಜ್ಯೂ. ವಿಧಿವಶ !

ಕ್ರೇಜಿ ಸ್ಟಾರ್ ರವಿಚಂದ್ರನ್ ಜ್ಯೂನಿಯ ರ್ ವಿಧಿವಶರಾಗಿದ್ದಾರೆ. ಥೇಟು ರವಿಚಂದ್ರನ್ ಅವರಂತೆ ಹೋಲುತ್ತಿದ್ದ ವ್ಯಕ್ತಿ, ಅದೇ ತರಹ ನಟನೆ ಮಾಡುತ್ತಾ ಜೀವನ ಸಾಗಿಸುತ್ತಿದ್ದ ಜ್ಯೂನಿಯರ್ ಕಲಾವಿದ ಈಗ ವಿದ್ಯುತ್ ಸ್ಪರ್ಶಗೊಂಡು ಸಾವಿಗೀಡಾಗಿದ್ದಾರೆ.

 

ಸಂಪ್‌ಗೆ ನೀರು ತುಂಬಿಸಲು ಮೋಟರ್ ಆನ್
ಮಾಡುವ ವೇಳೆ ವಿದ್ಯುತ್ ಸ್ಪರ್ಶಿಸಿದಾಗ ಸಾವು ಸಂಭವಿಸಿದೆ. ಈ ಘಟನೆ ಕುಣಿಗಲ್ ತಾಲೂಕಿನ ಕಸಬಾ ಹೋಬಳಿ ಹೇರೂರು ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ಹೇರೂರು ಗ್ರಾಮದ ಲಕ್ಷ್ಮೀನಾರಾಯಣ (35) (ಜ್ಯೂನಿಯರ್ ರವಿಚಂದ್ರನ್) ಮೃತ ದುರ್ದೈವಿ.

ಜ್ಯೂನಿಯರ್ ರವಿಚಂದ್ರನ್ ಎಂದೇ ಪ್ರಖ್ಯಾತಗೊಂಡಿದ್ದ ಕಲಾವಿದ ಲಕ್ಷ್ಮಿ ನಾರಾಯಣ ಮಂಗಳವಾರ ತಮ್ಮ ಮನೆಯ ಸಂಪ್‌ಗೆ ನೀರು ತುಂಬಿಸಲೆಂದು ಮೋಟರ್ ಸ್ವಿಚ್ ಹಾಕಲು ಯತ್ನಿಸಿದ್ದಾರೆ ಎನ್ನಲಾಗಿದ್ದು, ಈ ವೇಳೆ ವಿದ್ಯುತ್ ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಮೃತ ಲಕ್ಷ್ಮಿನಾರಾಯಣ ರಾಜ್ಯದ ವಿವಿಧ ಜಿಲ್ಲಾ, ತಾಲೂಕು ಸೇರಿದಂತೆ ವಿವಿದೆಡೆ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಹಾಡು ಹೇಳುವುದರ ಜೊತೆಗೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರನ್ನು ಹೋಲುತ್ತಿದ್ದ ಅವರು ರವಿಚಂದ್ರನ್ ಅವರ ಅಭಿನಯವನ್ನು ಸೊಗಸಾಗಿ ಕರಗತ ಮಾಡಿಕೊಂಡು ಅವರಂತೆ ಅಭಿನಯಿಸುತ್ತಿದ್ದರು. ಆ ಮೂಲಕ ಜನರ ಮನೆ ಮಾತಾಗಿದ್ದರು. ಈಗ ಅಂತಹಾ ಜ್ಯೂನಿಯರ್ ಇನ್ನಿಲ್ಲ.

Leave A Reply

Your email address will not be published.