DL ನಿಯಮ ಇನ್ನಷ್ಟು ಸುಲಭಗೊಳಿಸಿದ ಕೇಂದ್ರ ಸರ್ಕಾರ : ಜುಲೈ 1 ರಿಂದಲೇ ಈ ನಿಯಮ ಅನ್ವಯ!
ಡ್ರೈವಿಂಗ್ ಲೈಸೆನ್ಸ್ ಮಾಡಿಸುವ ನಿಯಮಗಳನ್ನು ಕೇಂದ್ರ ಸರ್ಕಾರ ಬದಲಾಯಿಸಿದೆ ಹಾಗಾಗಿ ಡ್ರೈವಿಂಗ್ ಲೈಸೆನ್ಸ್ ಮಾಡಿಸುವುದಕ್ಕೆ, ರಿನ್ಯೂ ಮಾಡಿಸುವ ಬಗ್ಗೆ ಯೋಚನೆ ಮಾಡುತ್ತಿದ್ದರೆ, ಈ ಸುದ್ದಿ ನಿಮಗಾಗಿ.
ಕೇಂದ್ರ ಸರ್ಕಾರ ರೂಪಿಸಿರುವ ಚಾಲನಾ ಪರವಾನಗಿಯ ಹೊಸ ನಿಯಮಗಳು ಮೊದಲಿಗಿಂತ ಹೆಚ್ಚು ಸುಲಭವಾಗಿದೆ. ಹೊಸ ನಿಯಮಗಳ ಅನುಷ್ಠಾನದ ನಂತರ, ಡ್ರೈವಿಂಗ್ ಲೈಸೆನ್ಸ್ ಪಡೆಯಲು ಪ್ರಾದೇಶಿಕ ಸಾರಿಗೆ ಕಚೇರಿಗೆ ಅಲೆದಾಡುವ ಅಗತ್ಯ ಸಾರ್ವಜನಿಕರಿಗೆ ಇರುವುದಿಲ್ಲ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಜುಲೈ 1, 2022 ರಿಂದ ಹೊಸ ನಿಯಮಗಳನ್ನು ಜಾರಿಗೆ ತರಲಿದ್ದು, ಹೊಸ ನಿಯಮಗಳು ಜಾರಿಯಾದ ನಂತರ ಡ್ರೈವಿಂಗ್ ಲೈಸೆನ್ಸ್ ಪಡೆಯಲು ವೇಟಿಂಗ್ ಲಿಸ್ಟ್ ನಲ್ಲಿ ಕಾಯುತ್ತಿರುವ ಕೋಟ್ಯಂತರ ಜನರಿಗೆ ನೆಮ್ಮದಿ ಸಿಗಲಿದೆ.
ಈ ನಿಯಮದ ಪ್ರಕಾರ, RTOಗೆ ಭೇಟಿ ನೀಡಿ ಯಾವುದೇ ರೀತಿಯ ಡ್ರೈವಿಂಗ್ ಟೆಸ್ಟ್ ನೀಡಬೇಕಾಗಿಲ್ಲ.
ಚಾಲನಾ ಪರವಾನಗಿ ಪಡೆಯಲು, RTOನಲ್ಲಿ ಟೆಸ್ಟ್ ತೆಗೆದುಕೊಳ್ಳಲು ಕಾಯಬೇಕಾಗಿಲ್ಲ. ಯಾವುದೇ ಮಾನ್ಯತೆ ಪಡೆದ ಡ್ರೈವಿಂಗ್ ಟ್ರೈನಿಂಗ್ ಸ್ಕೂಲ್ನಲ್ಲಿ ಡಿಎಲ್ಗಾಗಿ ನೋಂದಾಯಿಸಿಕೊಳ್ಳಬಹುದು. ಇಲ್ಲಿಂದ ತರಬೇತಿ ಪಡೆದ ನಂತರ ಅಲ್ಲಿಂದಲೇ ಟೆಸ್ಟ್ ಪಾಸ್ ಮಾಡಬೇಕು. ಟೆಸ್ಟ್ ನಲ್ಲಿ ಪಾಸ್ ಆದವರಿಗೆ ಡ್ರೈವಿಂಗ್ ಸ್ಕೂಲ್ ಪ್ರಮಾಣಪತ್ರವನ್ನು ನೀಡುತ್ತದೆ. ಈ ಪ್ರಮಾಣಪತ್ರದ ಆಧಾರದ ಮೇಲೆ ನಿಮ್ಮ DL ಮಾಡಲಾಗುತ್ತದೆ.
ಚಾಲನಾ ಪರವಾನಗಿ ಸೂಚನೆಗಳನ್ನು ಸಚಿವಾಲಯವು ಸಿದ್ಧಪಡಿಸಿದೆ. ಇದನ್ನು ಥಿಯರಿ ಮತ್ತು ಪ್ರಾಕ್ಟಿಕಲ್ ಎಂದು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಲೈಟ್ ಮೋಟಾರ್ ವೆಹಿಕಲ್ ಕೋರ್ಸ್ನ ಅವಧಿಯು ನಾಲ್ಕು ವಾರಗಳು. ಇದು 29 ಗಂಟೆಗಳ ಕಾಲ ಇರುತ್ತದೆ. ರಸ್ತೆಗಳು, ಹೆದ್ದಾರಿಗಳು, ನಗರದ ರಸ್ತೆಗಳು, ಹಳ್ಳಿಯ ರಸ್ತೆಗಳು,ರಿವರ್ಸಿಂಗ್ ಮತ್ತು ಪಾರ್ಕಿಂಗ್ ಇತ್ಯಾದಿಗಳನ್ನು ಪ್ರಾಕ್ಟಿಕಲ್ ಆಗಿ ಕಲಿಯಲು 21 ಗಂಟೆಗಳ ಕಾಲ ನೀಡಬೇಕಾಗುತ್ತದೆ. ಉಳಿದ 8 ಗಂಟೆಗಳ ಕಾಲ ಥಿಯರಿ ಕಲಿಸಲಾಗುತ್ತದೆ.
ತರಬೇತಿ ಕೇಂದ್ರಗಳಿಗೆ ಮಾರ್ಗಸೂಚಿಗಳು ಯಾವುದು ಈ ಕೆಳಗೆ ನೀಡಲಾಗಿದೆ :
- ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳು ಮತ್ತು ಲಘು ಮೋಟಾರು ವಾಹನಗಳ ತರಬೇತಿ ಕೇಂದ್ರಗಳು ಕನಿಷ್ಠ ಒಂದು ಎಕರೆ ಭೂಮಿ ಹೊಂದಿರಬೇಕು, ಭಾರೀ ಪ್ರಯಾಣಿಕ/ಸರಕು ವಾಹನಗಳು ಅಥವಾ ಟ್ರೇಲರ್ಗಳಿಗಾಗಿ ತರಬೇತಿ ಕೇಂದ್ರದ ಬಳಿ ಎರಡು ಎಕರೆ
ಭೂಮಿಯನ್ನು ಹೊಂದಿರುವುದು ಅವಶ್ಯಕ. - ತರಬೇತುದಾರರು ಕನಿಷ್ಠ 12 ನೇ ತರಗತಿ ತೇರ್ಗಡೆ ಹೊಂದಿರಬೇಕು. ಅಲ್ಲದೆ ಕನಿಷ್ಠ 5 ವರ್ಷಗಳ ಚಾಲನಾ ಅನುಭವ ಹೊಂದಿರಬೇಕು.
- ಡ್ರೈವಿಂಗ್ ಸೆಂಟರ್ಗಳ ಪಠ್ಯಕ್ರಮವನ್ನು ಥಿಯರಿ ಮತ್ತು ಪ್ರಾಕ್ಟಿಕಲ್ ಎಂದು 2 ಭಾಗಗಳಾಗಿ ವಿಂಗಡಿಸಲಾಗಿದೆ.
- ತರಬೇತಿ ಕೇಂದ್ರದಲ್ಲಿ ಬಯೋಮೆಟ್ರಿಕ್ ವ್ಯವಸ್ಥೆಯನ್ನು ಹೊಂದಿರುವುದು ಅವಶ್ಯಕ.
- ಕೋರ್ಸ್ನ ಅವಧಿಯು ಮಧ್ಯಮ ಮತ್ತು ಭಾರೀ ವಾಹನಗಳ ಮೋಟಾರು ವಾಹನಗಳಿಗೆ 6 ವಾರಗಳಲ್ಲಿ 38 ಗಂಟೆಗಳು. 8 ಗಂಟೆಗಳ ಥಿಯರಿ ತರಗತಿ ಮತ್ತು ಉಳಿದ 31 ಗಂಟೆಗಳ ಪ್ರಾಯೋಗಿಕ ತರಗತಿ ಇರುತ್ತದೆ.