ಕಾಲೇಜಿನಲ್ಲಿ ಹಿಂದೂ ದೇವರುಗಳ ನಗ್ನ ಚಿತ್ರ ಪ್ರದರ್ಶನ ; ಎಬಿವಿಪಿ, ಆರ್ ಎಸ್ ಎಸ್ ಕಾರ್ಯಕರ್ತರಿಂದ ಡೀನ್ ರಾಜೀನಾಮೆಗೆ ಒತ್ತಾಯ!

ಹಿಂದೂ ದೇವರುಗಳ ಫೋಟೋಗಳನ್ನು ಅಸಹ್ಯಕರವಾಗಿ ಉಪಯೋಗಿಸಿಕೊಳ್ಳುವುದು ಕೆಲವರಿಗೆ ಗೀಳಾಗಿದೆ. ಕೆಲವರು ಬಿಕಿನಿ ಮೇಲೆ, ಚಪ್ಪಲಿ ಮೇಲೆ ಹಿಂದೂ ದೇವರುಗಳ ಚಿತ್ರ ಹಾಕಿ ಅವಮಾನ ಮಾಡಿದ್ದಾರೆ. ಈ ನಿದರ್ಶನಗಳೇ ಮರೆಮಾಚುವ ಮುನ್ನ ಇನ್ನೊಂದು ಘಟನೆ ನಡೆದಿದೆ.

 

ಲಲಿತ ಕಲಾ ವಿಭಾಗದ ವಾರ್ಷಿಕ ಚಿತ್ರಕಲಾ ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ವಿವಿಧ ವಿಷಯಗಳ ಕುರಿತು ಕಲಾಕೃತಿಗಳನ್ನು ಸಿದ್ಧಪಡಿಸಿದ್ದರು. ಆದರೆ ಇವುಗಳಲ್ಲಿ ಕೆಲವು ಕಲಾಕೃತಿಗಳು ಆಕ್ರೋಶಕ್ಕೆ ಕಾರಣವಾಗಿದೆ. ಕೆಲವು ವಿದ್ಯಾರ್ಥಿಗಳು ಹಿಂದೂ ದೇವತೆಗಳ ಚಿತ್ರಗಳನ್ನು ಪ್ರೇಮ್‌ನ ಒಳಗೆ ಬಿಡಿಸಿದ್ದರೆ ಇನ್ನೂ ಕೆಲವರು ದೇವರ ನಗ್ನ ಚಿತ್ರಗಳನ್ನು ರಚಿಸಿದ್ದಾರೆ. ಫ್ರೇಮ್‌ನ ಒಳಗೆ ಪೇಪರ್ ಕಟ್ಟಿಂಗ್‌ನಿಂದ ದೇವರ ಆಕೃತಿಯನ್ನು ರಚಿಸಲಾಗಿತ್ತು. ಇದಕ್ಕೆ ಬಳಕೆ ಮಾಡಲಾದ ಪತ್ರಿಕೆಗಳು ಅತ್ಯಾಚಾರದ ಸುದ್ದಿಗಳನ್ನು ಒಳಗೊಂಡಿದ್ದವು.

ವಡೋದರಾ ಮೂಲದ ಮಹಾರಾಜ ಸಯಾಜಿರಾವ್ ವಿಶ್ವವಿದ್ಯಾಲಯದಲ್ಲಿ ಈ ಘಟನೆ ನಡೆದಿದೆ. ಕೆಲವು ವಿದ್ಯಾರ್ಥಿಗಳು ಹಿಂದೂ ದೇವರ ಆಕ್ಷೇಪಾರ್ಹ ಭಾವಚಿತ್ರಗಳನ್ನು ಪ್ರದರ್ಶಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆಯೇ ಎಬಿವಿಪಿ ಹಾಗೂ ಆರ್ ಎಸ್ ಎಸ್ ಕಾರ್ಯಕರ್ತರು ಡೀನ್ ರಾಜೀನಾಮೆ ನೀಡುವಂತೆ ಆಗ್ರಹಿಸಿದ್ದಾರೆ. ಅಲ್ಲದೇ ಈ ಕೃತ್ಯ ಎಸಗಿದ ವಿದ್ಯಾರ್ಥಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ. ಈ ಸಂಬಂಧ ಎಬಿವಿಪಿ ಕಾರ್ಯಕರ್ತರು ಡೀನ್ ಹಾಗೂ ಉಪಕುಲಪತಿಗಳಿಗೆ ಮನವಿ ಸಲ್ಲಿಸಿದ್ದಾರೆ.

Leave A Reply

Your email address will not be published.