ಸದ್ಯದಲ್ಲೇ ಹಸೆಮಣೆ ಏರಲಿದೆ ಸಿನಿರಂಗದ ಮತ್ತೊಂದು ಸ್ಟಾರ್ ಜೋಡಿ | ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಖ್ಯಾತನಟಿ ನಯನತಾರಾ ಮದುವೆ ಯಾವಾಗ ಗೊತ್ತಾ !??

Share the Article

ಸದ್ಯದಲ್ಲೇ ಸಿನಿರಂಗದ ಮತ್ತೊಂದು ಸ್ಟಾರ್ ಜೋಡಿ ಹಸೆಮಣೆ ಏರಲಿದೆ. ಯಾವಾಗ ಮದುವೆ ಎಂದು ತುದಿಗಾಲಲ್ಲಿ ಕಾಯುತ್ತಿದ್ದ ಅಭಿಮಾನಿಗಳ ಕುತೂಹಲಕ್ಕೆ ತೆರೆ ಎಳೆದಿದ್ದಾರೆ ನಟಿ ನಯನತಾರಾ. ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಹಲವು ತಿಂಗಳಿಂದ ಲೀವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ ಖ್ಯಾತ ನಟಿ ನಯನತಾರಾ ಕೊನೆಗೂ ಮದುವೆ ಆಗುತ್ತಿದ್ದಾರೆ.

ಅನೇಕ ದಿನಗಳಿಂದ ಈ ಜೋಡಿಯ ವಿವಾಹದ ಕುರಿತು ಹಲವು ಸುದ್ದಿಗಳು ಹರಿದಾಡುತ್ತಿದ್ದವು. ಮೂರ್ನಾಲ್ಕು ಬಾರಿ ಮದುವೆ ದಿನಾಂಕ ಕೂಡ ಬಹಿರಂಗವಾಗಿತ್ತು. ಆದರೆ, ಅದೆಲ್ಲವೂ ಸುಳ್ಳಾಗಿತ್ತು. ಇದೀಗ ಮತ್ತೊಂದು ದಿನಾಂಕ ನಿಗದಿಯಾಗಿದ್ದು, ಜೂನ್ 9 ಕ್ಕೆ ಈ ಜೋಡಿ ಹಸೆಮಣೆ ಏರಲಿದೆ ಎನ್ನುವುದು ಅವರ ಆಪ್ತರು ಖಚಿತ ಪಡಿಸಿರುವ ಮಾಹಿತಿ. ವಿಘ್ನೇಶ್ ಶಿವನ್ ಕುಟುಂಬ ಕೂಡ ತಿರುಪತಿಯಲ್ಲಿ ಈ ಮದುವೆ ನಡೆಯಲಿದೆ ಎನ್ನುವ ಮಾಹಿತಿಯನ್ನು ಖಚಿತ ಪಡಿಸಿದೆ.

ವಿಘ್ನೇಶ್ ಶಿವನ್ ಮತ್ತು ನಯನತಾರಾ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಒಂದೇ ಮನೆಯಲ್ಲೇ ವಾಸಿಸುತ್ತಿದ್ದಾರೆ ಎನ್ನುವ ಮಾಹಿತಿ ಕೂಡ ಹರಿದಾಡುತ್ತಿತ್ತು. ದೇಶ ವಿದೇಶಗಳ ಸುತ್ತಾಟ, ದೇವಸ್ಥಾನಗಳಿಗೆ ಭೇಟಿ, ಖಾಸಗಿ ಸಮಾರಂಭದಲ್ಲಿ ಭಾಗಿಯಾಗಲು ಇಬ್ಬರೂ ಒಟ್ಟಾಗಿಯೇ ಹೋಗುತ್ತಿದ್ದರು. ಹಾಗಾಗಿ ಈ ಜೋಡಿ ಮುಂದೊಂದು ದಿನ ಮದುವೆಯಾಗಲಿದೆ ಎನ್ನುವ ಸುದ್ದಿಯೂ ಇತ್ತು. ಇದೀಗ ಅದನ್ನು ನಿಜವಾಗಿಸಿದ್ದಾರೆ ಈ ಸ್ಟಾರ್ ಕಪಲ್.

ನಯನಾ ತಾರಾ ಮತ್ತು ವಿಜಯ್ ಸೇತುಪತಿ ಕಾಂಬಿನೇಷನ್ ನ ಹೊಸ ಸಿನಿಮಾ ಮೊನ್ನೆಯಷ್ಟೇ ರಿಲೀಸ್ ಆಗಿದೆ. ಈ ಸಿನಿಮಾದ ನಿರ್ದೇಶನವನ್ನು ವಿಘ್ನೇಶ್ ಶಿವನ್ ಅವರೇ ಮಾಡಿದ್ದರು. ನಿರ್ಮಾಪಕರು ಕೂಡ ಅವರೇ ಆಗಿದ್ದರು. ಆ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಗೆದ್ದಿದೆ. ಇದೇ ಖುಷಿಯಲ್ಲೇ ಮೊನ್ನೆಯಷ್ಟೇ ತಿರುಪತಿಗೆ ನಯನಾ ತಾರಾ ಮತ್ತು ವಿಘ್ನೇಶ್ ಭೇಟಿ ನೀಡಿದ್ದರು. ಅದೇ ಸಂದರ್ಭದಲ್ಲಿ ಮದುವೆ ದಿನಾಂಕವನ್ನು ನಿಗದಿ ಮಾಡಿಸಿದ್ದಾರಂತೆ ಎಂಬ ಸುದ್ದಿ ಇದೀಗ ಹರಿದಾಡುತ್ತಿದೆ.

Leave A Reply

Your email address will not be published.