ಭಾರತ ಸನಾತನ ಧರ್ಮದ ತತ್ವಗಳನ್ನು ಪಾಲಿಸುವ ಅಗತ್ಯವಿದೆ- ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್

0 10

ಕರ್ನಾಟಕದಲ್ಲಿ ಹಿಜಾಬ್ ವಿವಾದ ಭುಗಿಲೆದ್ದಿದ್ದಾಗ, ಹಿಜಾಬ್ ಇಸ್ಲಾಂ ಧರ್ಮದ ಅವಿಭಾಜ್ಯ ಅಂಗವಲ್ಲ. ಹಿಜಾಬ್ ಧರಿಸಬೇಕು ಎಂದು ಕುರಾನ್ ನಲ್ಲಿ ಎಲ್ಲಿಯೂ ಹೇಳಿಲ್ಲ ಎಂದು ಹೇಳಿದ್ದ ಕೇರಳ ರಾಜ್ಯಪಾಲರು ಇದೀಗ ಮತ್ತೆ ಸನಾತನ ಧರ್ಮದ ಬಗ್ಗೆ ತಮ್ಮ ಒಳ್ಳೆಯ ಅಭಿಪ್ರಾಯ ನೀಡಿ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಹೌದು.ಆರಿಫ್ ಮೊಹಮ್ಮದ್ ಖಾನ್ ಅವರು ಮುಸ್ಲಿಂ ಸಮುದಾಯದವರಾಗಿದ್ದರೂ, ಹಿಂದೂ ಪರ ನೀತಿಗಳ ಅಳವಡಿಕೆಗೆ ಹಿಂದಿನಿಂದಲೂ ಬೆಂಬಲ ನೀಡುತ್ತಾ ಬಂದಿದ್ದಾರೆ. ಇದೀಗ ನಮ್ಮ ದೇಶ ಸನಾತನ ಧರ್ಮವನ್ನು ಪಾಲಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.

ಶಹಜಹಾನ್ ಪುರ ಪಟ್ಟಣದಲ್ಲಿ ಶಾಲೆಯೊಂದನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯಪಾಲರು,’ದೇಶದ ಹಳೆಯ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕೆಲಸ ಮಾಡಬೇಕಾಗಿದೆ. ಸನಾತನ ತತ್ವಗಳನ್ನು ಮರಳಿ ತರಬೇಕಾದರೆ ಶಿಕ್ಷಣ ಅಗತ್ಯ. ಭಾರತದಲ್ಲಿ ಸರಿಯಾದ ಶಿಕ್ಷಣವನ್ನು ಕಲಿಸಲು ಸನಾತನ ಧರ್ಮವನ್ನು ಪಾಲಿಸುವ ಅಗತ್ಯವಿದೆ’ಎಂದು ರಾಜ್ಯಪಾಲರು ಭಾಷಣದಲ್ಲಿ ತಿಳಿಸಿದ್ದಾರೆ.

ಅಲ್ಲದೆ,’ಸ್ವಾಮಿ ವಿವೇಕಾನಂದರ ವಾಣಿಯನ್ನು ಪ್ರಸ್ತಾಪಿಸುತ್ತಾ, ಮಾನವ ಜೀವನದ ಉದ್ದೇಶ ಜ್ಞಾನದ ಸಾಧನೆ ಮತ್ತು ವಿನಯವು ಜ್ಞಾನದ ಫಲಿತಾಂಶವಾಗಿದೆ. ಮಾನವೀಯತೆ ಇರುವ ಯಾವುದೇ ವ್ಯಕ್ತಿ ಯಾವುದನ್ನೂ ಕಡೆಗಣಿಸುವುದಿಲ್ಲ’ ಎಂದಿದ್ದಾರೆ.

Leave A Reply