ಬಂದರು:ಅವಧಿಗಿಂತಲೂ ಮೊದಲೇ ದಡ ಸೇರುತ್ತಿವೆ ಮೀನುಗಾರಿಕಾ ಬೋಟ್!! ಮೀನುಗಾರರಲ್ಲಿ ಕಾಡುತ್ತಿರುವ ಆತಂಕವೇನು!??
ಬಂದರು: ಮೀನುಗಾರಿಕೆ ಋತು ಪೂರ್ಣಗೊಳ್ಳಲು ಇನ್ನೂ ಅರ್ಧ ತಿಂಗಳು ಬಾಕಿ ಇದ್ದು,ಅದಾಗಲೇ ಹಲವು ಮೀನುಗಾರಿಕಾ ಬೋಟ್ ಗಳು ದಡ ಸೇರಿದ್ದು ಕಂಡುಬಂದಿದೆ. ಕಳೆದ ಜನವರಿ ತಿಂಗಳವರೆಗೆ ಉತ್ತಮವಾಗಿದ್ದ ಮೀನುಗಾರಿಕೆ, ಆ ಬಳಿಕ ಕುಸಿತ ಕಂಡಿದ್ದು ಮೀನುಗಾರರಲ್ಲಿ ಆತಂಕ ಮೂಡಿಸುವುದರೊಂದಿಗೆ ಬೋಟ್ ಗಳು ನೀರಿಗಿಳಿಯಲು ಮನಸ್ಸು ಮಾಡದಂತಾಗಿದೆ.
ಸದ್ಯದ ಪರಿಸ್ಥಿತಿಯಲ್ಲಿ ಆಳ ಸಮುದ್ರಕ್ಕೆ ತೆರಳುವ ಮೀನುಗಾರರು ತಿಂಗಳಿಗೆ ಮೂರು ಟ್ರಿಪ್ ತೆರಳುತ್ತಾರೆ. ಪ್ರತೀ ಟ್ರಿಪ್ ಗೆ ಸುಮಾರು ಆರು ಸಾವಿರಕ್ಕಿಂತಲೂ ಹೆಚ್ಚು ಲೀಟರ್ ಡೀಸೆಲ್ ಖರ್ಚುಗುತ್ತಿದ್ದೂ, ಇಂದಿನ ಗಗನಕ್ಕೆರಿದ ಇಂಧನ ಬೆಲೆಯಿಂದಾಗಿ ಬೋಟ್ ಗಳ ನಿರ್ವಹಣೆಯೇ ದೊಡ್ಡ ಸವಾಲಾಗಿದೆ.
ಕಳೆದ ಕೆಲ ತಿಂಗಳ ಹಿಂದೆ ಮೀನುಗಳು ಹೇರಳವಾಗಿ ಸಿಕ್ಕಿದ್ದು, ಇತ್ತೀಚಿನ ದಿನಗಳಲ್ಲಿ ಪಡೆಯುವುದಕ್ಕಿಂತ ಹೆಚ್ಚಾಗಿ ಕಳೆದುಕೊಳ್ಳುತ್ತಿದ್ದೇವೆ ಎನ್ನುತ್ತಾರೆ ಮೀನುಗಾರರು. ಸದ್ಯ ಶೇ.70ರಷ್ಟು ಬೋಟ್ ಗಳು ದಡ ಸೇರಿದ್ದು, ಋತುವಿಗಿಂತ ಮೊದಲೇ ಮೀನುಗಾರಿಕೆ ಸ್ಥಗಿತಗೊಳ್ಳುವ ಸಾಧ್ಯತೆ ಹೆಚ್ಚಿದೆ ಎನ್ನಲಾಗುತ್ತಿದೆ.