30 ನಿಮಿಷದ ಮಧ್ಯಾಹ್ನದ ನಿದ್ದೆಗೆ ಕೂಡಾ ಎಣಿಸಿ ಎಣಿಸಿ ಸಂಬಳ ಕೊಡತ್ತೆ ಈ ಬೆಂಗಳೂರಿನ ಕಂಪನಿ|ಮತ್ಯಾಕೆ ತಡ, ರೆಸ್ಯೂಮ್ ರೆಡಿಮಾಡಿ ಅಪ್ಲೈ ಮಾಡ್ಕೊಳ್ಳಿ !
ಅದೆಷ್ಟೋ ಜನ ಕಡಿಮೆ ಕೆಲಸ ಮಾಡಿ ಆರಾಮದಾಯಕವಾಗಿ ಇದ್ದುಕೊಂಡು, ಹೆಚ್ಚು ಸಂಬಳಗಳಿಸಬೇಕೆಂದು ಆಸೆ ಪಡುತ್ತಾರೆ. ಆದ್ರೆ ಯಾರಿಗೂ ಇಂತಹ ಭಾಗ್ಯ ಸಿಗೋದಿಲ್ಲ ಬಿಡಿ. ಬೆವರು ಸುರಿಸಿ, ನಿದ್ದೆ, ಊಟ ಬಿಟ್ಟು ಅದೆಷ್ಟು ದುಡಿದರೂ, ತಿಂಗಳ ಕೊನೆಗೆ ಸಿಗುವುದು ಯಾವ ಮೂಲೆಗೂ ಸಾಲದ ಸಂಬಳ. ಆದ್ರೆ ಇಲ್ಲೊಂದು ಕಂಪನಿ ನಿದ್ರೆ ಮಾಡುವುದಕ್ಕೆ ಸ್ಯಾಲರಿ ನೀಡುತ್ತೆ!
ಹೌದು. ಬೆಂಗಳೂರು ಮೂಲದ ಫರ್ನೀಚರ್ ಕಂಪನಿ ‘ವೇಕ್ಫಿಟ್’ಎಂಬ ಸ್ಟಾರ್ಟಪ್ ಕಂಪನಿ ಕೆಲಸದ ವೇಳೆಯಲ್ಲಿ ತನ್ನ ಉದ್ಯೋಗಿಗಳಿಗೆ ನಿದ್ರಿಸಲು ಅವಕಾಶ ಕಲ್ಪಿಸಿ ಕೊಟ್ಟಿದೆ. ಅಷ್ಟೇ ಅಲ್ಲ ಮಲಗಲು ಟೈಮಿಂಗ್ಸ್ ಬೇರೆ ಫಿಕ್ಸ್ ಆಗಿ ಆಲ್ಲಿ !
ಈ ಬಗ್ಗೆ ಕಂಪನಿಯ ಸಹ ಸಂಸ್ಥಾಪಕ ಚೈತನ್ಯ ರಾಮಲಿಂಗೇಗೌಡ ಅವರು ತನ್ನ ಉದ್ಯೋಗಿಗಳಿಗೆ ಈ ಮೇಲ್ ರವಾನೆ ಮಾಡಿದ್ದು, ‘ಕಚೇರಿಯಲ್ಲಿ ನಿದ್ರಿಸುವ ಸಮಯ’ ನೀಡಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ ನಿದ್ದೆ ಮಾಡುವುದು ಉದ್ಯೋಗಿಗಳ ಹಕ್ಕು ಎಂದಿದ್ದಾರೆ. ‘ಕಳೆದ ಆರು ವರ್ಷದಿಂದ ನಾವು ಮಾರುಕಟ್ಟೆಯಲ್ಲಿ ಇದ್ದೇವೆ. ಆದರೆ ಮಧ್ಯಾಹ್ನದ ಹೊತ್ತು ನಿದ್ದೆ ಮಾಡುವ ಉದ್ಯೋಗಿಗಳ ಹಕ್ಕಿನ ಬಗ್ಗೆ ಹೆಚ್ಚು ಚಿಂತಿಸಿರಲಿಲ್ಲ. ಇಂದಿನಿಂದ ನಾವು ಅದನ್ನು ಗಂಭೀರವಾಗಿ ಪರಿಗಣಿಸಿದ್ದು, ಪ್ರತೀ ಉದ್ಯೋಗಿಗಳಿಗೆ ನಿದ್ದೆ ಮಾಡುವ ಅವಕಾಶ ಕಲ್ಪಿಸಲಾಗುತ್ತಿದೆ’ ಎಂದು ತನ್ನ ಉದ್ಯೋಗಿಗಳಿಗೆ ಬರೆದ ಈ ಮೇಲ್ನಲ್ಲಿ ಅವರು ತಿಳಿಸಿದ್ದಾರೆ.
ಅಲ್ಲಿ ಮಧ್ಯಾಹ್ನ 2 ಗಂಟೆಯಿಂದ 2.30 ರ ವರೆಗೆ ಕಂಪನಿಯ ಎಲ್ಲಾ ಉದ್ಯೋಗಿಗಳಿಗೆ ಒಂದು ಕೋಳಿ ನಿದ್ರೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ನಿಯಮ ಕಂಪನಿಯಲ್ಲಿ ಎಲ್ಲಾರಿಗೂ ಅಪ್ಲೈ ಆಗಿರಲಿದೆ. ಅಷ್ಟೆ ಅಲ್ಲ, ನಿದ್ದೆ ಮಾಡುವ ಸಮಯದ ಬಗ್ಗೆ ಉದ್ಯೋಗಿಗಳಿಗೆ ಎಚ್ಚರಿಕೆ ನೀಡಲು, ಕಂಪನಿ ವಿಶೇಷ ರಿಮೈಂಡರ್ ಅಥವಾ ಅಲಾರಾಂ ಅನ್ನು ಕೂಡಾ ಕೊಡಮಾಡಿದೆ. ಅದಲ್ಲದೆ ಉದ್ಯೋಗಿಗಳಿಗೆ ನಿದ್ದೆ ಮಾಡಲೆಂದೇ ವಿಶೇಷ ಕೊಠಡಿಗಳನ್ನೂ ರೂಪಿಸಲಾಗುತ್ತದೆ ಎಂದಿದ್ದಾರೆ ಅಲ್ಲಿನ ಮ್ಯಾನೇಜ್ಮೆಂಟ್ ಮುಖ್ಯಸ್ಥ ಇನ್ನೇನು ಬೇಕು ಹೇಳಿ?!
ಅಷ್ಟಕ್ಕೂ ಈ ಕಂಪನಿ ನಿದ್ದೆಗೆ ಅವಕಾಶ ನೀಡಲು ಕಾರಣ ಏನು ಗೊತ್ತೇ!?. ಅದನ್ನು ತನ್ನ ಈ ಮೇಲ್ನಲ್ಲಿ ಚೈತನ್ಯ ರಾಮಲಿಂಗೇಗೌಡ ಅವರು ವಿವರಿಸಿದ್ದಾರೆ. ನಾಸಾ ಹಾಗೂ ಹಾರ್ವರ್ಡ್ ವಿಶ್ವ ವಿದ್ಯಾಲಯ ಮಾಡಿರುವ ಸಂಶೋಧನೆಯೇ ಕಂಪನಿಯ ಈ ನಿರ್ಧಾರಕ್ಕೆ ಪ್ರೇರಣೆ ಎಂದು ಅವರು ಹೇಳಿದ್ದಾರೆ. ಸುಮಾರು 26 ನಿಮಿಷದ ಮಿನಿ ನಾಪ್ ( ಸಣ್ಣ ನಿದ್ದೆ) ಮಾಡುವುದರಿಂದ ಶೇ.33 ರಷ್ಟು ಕೆಲಸ ಸಾಮರ್ಥ್ಯ ಹೆಚ್ಚಳವಾಗುತ್ತದೆ. ಬೇಕಾದಷ್ಟು ನಿದ್ದೆ ಮಾಡುವುದರಿಂದ ಆಯಾಸವೂ ಕಡಿಮೆಯಾಗುತ್ತದೆ. ನಾಸಾ ಹಾಗೂ ಹಾರ್ವರ್ಡ್ ವಿವಿಯ ಸಂಶೋಧನೆಯ ಪ್ರಕಾರ ಮಧ್ಯಾಹ್ನದ ಈ ಪುಟಾಣಿ ನಿದ್ದೆಯಿಂದಾಗಿ ಉದ್ಯೋಗಿಗಳಲ್ಲಿ ನೆನಪಿನ ಶಕ್ತಿ, ಕಾನ್ಸಂಟ್ರೇಷನ್, ಸೃಜನಶೀಲತೆ ಹಾಗೂ ಉದ್ಯೋಗಿಯ ಒಟ್ಟಾರೆ ಉದ್ಯಮ ಶೀಲ ಸಾಮರ್ಥ್ಯ ಹೆಚ್ಚಳವಾಗುತ್ತದೆ. ಹೀಗಾಗಿ ನಿದ್ದೆಗೆಂದೆ ಕಚೇರಿಯಲ್ಲಿ ಸಮಯ ಮೀಸಲಿಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.